ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಯಾರೂ ವಿಲೀನವಾಗಲು ಬಯಸಲ್ಲ: ಒಂದು ವೇಳೆ ಆದ್ರೂ ಬಿಜೆಪಿಗೆ ಲಾಭ: ಸಿಎಂ ದೇವೇಂದ್ರ ಫಡ್ನವೀಸ್ | CM Devendra Fadnavis
ಸಿಎಂ ದೇವೇಂದ್ರ ಫಡ್ನವೀಸ್
Published on:
Copied
Follow Us
ಮುಂಬೈ: ದೇಶದಲ್ಲಿ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು, ಅದರಲ್ಲಿ ಯಾವುದೇ ಪಕ್ಷ ವಿಲೀನವಾಗಲೂ ಬಯಸಲ್ಲ, ಒಂದು ವೇಳೆ ವಿರೋಧ ಪಕ್ಷಗಳು ಒಟ್ಟುಗೂಡಿದ್ರೆ ಅದರಿಂದ ಬಿಜೆಪಿಗೆ ಹೆಚ್ಚಿನ ಲಾಭ ಸಿಗಲಿದೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್(CM Devendra Fadnavis) ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪ(ಎಸ್‌ಪಿ) ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳ್ಳುವ ಬಗ್ಗೆ ರಾಜಕೀಯ ವಲಯದಲ್ಲಿ ಊಹಾಪೋಹಗಳ ನಡೆಯುತ್ತಿವೆ.
ಮುಂಬೈನಲ್ಲಿ ಈ ಕುರಿತು ಮಾತನಾಡಿರುವ ಸಿಎಂ ಫಡ್ನವೀಸ್, ವಿರೋಧ ಪಕ್ಷಗಳ ಬಲವರ್ಧನೆಯಿಂದ ಬಿಜೆಪಿ ಹೆಚ್ಚಿನ ರಾಜಕೀಯ ಲಾಭ ಪಡೆಯಲಿದೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಯಾರೂ ಆ ಹಡಗಿನ ಮೇಲೆ ಕಾಲಿಡುವುದಿಲ್ಲ. ಒಂದು ವೇಳೆ ಯಾರಾದರೂ ಹೆಜ್ಜೆ ಹಾಕಿದರೆ, ನಮಗೆ ಕಳೆದುಕೊಳ್ಳಲು ಏನೂ ಇಲ್ಲ ಎಂದಿದ್ದಾರೆ.
ಬಿಜೆಪಿ ಕಾದು ನೋಡುವ ವಿಧಾನವನ್ನು ಅಳವಡಿಸಿಕೊಂಡಿದೆ. ಮುಳುಗುತ್ತಿರುವ ಹಡಗಿನಂತಿರುವ ಕಾಂಗ್ರೆಸ್‌ಗೆ ವಿರೋಧ ಪಕ್ಷಗಳು ಕಾಲಿಟ್ಟರೂ, ನಮಗೆ ಹೆಚ್ಚಿನ ರಾಜಕೀಯ ಸ್ಥಳ ಸಿಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಟಿಎಂಸಿ, ಎನ್ಸಿಪಿ ಕಾಂಗ್ರೆಸ್‌ನಲ್ಲಿ ವಿಲೀನವಾಗಲಿ
ಬುಧವಾರ ಮಾತನಾಡಿದ್ದ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್, ಕಾಂಗ್ರೆಸ್ ತೊರೆದ ಬಳಿಕ ಸ್ಥಾಪನೆಯಾಗಿದ್ದ ತೃಣಮೂಲ ಕಾಂಗ್ರೆಸ್ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದಂತಹ ಪಕ್ಷಗಳು ಬಿಜೆಪಿಗೆ ಬಲವಾದ ಪರ್ಯಾಯವನ್ನು ಸೃಷ್ಟಿಸಲು ಗ್ರ್ಯಾಂಡ್ ಓಲ್ಡ್ ಪಕ್ಷದ ಮಡಿಲಿಗೆ ಮರಳಬೇಕು. ಸಣ್ಣ ಪಕ್ಷಗಳನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಲು ಶರದ್ ಪವಾರ್ ಅವರು ಮುಂದಾಳತ್ವ ವಹಿಸಬೇಕು ಎಂದು ಪ್ರತಿಪಾದಿಸಿದ್ದರು (ಏಜೆನ್ಸೀಸ್).