ಕೇಂದ್ರದಿಂದ CNAP ಕಾಲರ್ ಐಡಿ ವ್ಯವಸ್ಥೆ: ಇನ್ಮುಂದೆ ಕಾಲ್​ ಮಾಡಿದ್ರೆ ಅವರ ಆಧಾರ್​ ಹೆಸರು ಕಾಣಿಸುತ್ತೆ!

CNAP
CNAP
Published on
ನವದೆಹಲಿ: ಭಾರತ ಸರ್ಕಾರ ಇದೀಗ ಟೆಲಿಕಾಂ ಡಿಪಾರ್ಟ್‌ಮೆಂಟ್ ಆಫ್ ಟೆಲಿಕಾಂ (DoT) ಮತ್ತು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಜಂಟಿಯಾಗಿ Calling Name Presentation (CNAP) ಎಂಬ ಹೊಸ ಕಾಲರ್ ಐಡಿ ಸಿಸ್ಟಮ್ ಅನ್ನು ಪರಿಚಯಿಸುತ್ತಿದೆ. ಇದು Truecaller ನಂತಹ ಥರ್ಡ್-ಪಾರ್ಟಿ ಆಪ್‌ಗಳಿಗೆ ಸ್ವತಂತ್ರವಾಗಿ ಕೆಲಸ ಮಾಡುವ ಅಧಿಕೃತ ವ್ಯವಸ್ಥೆಯಾಗಿದ್ದು, ಸ್ಪ್ಯಾಮ್ ಕಾಲ್‌ಗಳು ಮತ್ತು ಹಗರಣಗಳನ್ನು ಕಡಿಮೆ ಮಾಡಲು ಉದ್ದೇಶ ಹೊಂದಿದೆ.
ಹೌದು, ಇದು SIM ಕಾರ್ಡ್ ರಿಜಿಸ್ಟ್ರೇಷನ್‌ನ KYC (Know Your Customer) ಡೇಟಾದಿಂದ ನೇರವಾಗಿ ಕಾಲರ್‌ನ ಹೆಸರನ್ನು ತೋರಿಸುತ್ತದೆ. ಅಂದರೆ, (ಆಧಾರ್-ಲಿಂಕ್ಡ್ ಅಥವಾ SIM KYC ರಿಜಿಸ್ಟರ್ಡ್ ಹೆಸರು) ನಿಮ್ಮ ಫೋನ್ ಸ್ಕ್ರೀನ್‌ ಪರದೆ ಮೇಲೆ ತೋರಿಸುತ್ತೆ.
CNAP ಎಂದರೇನು..? ಹೇಗೆ ಕೆಲಸ ಮಾಡುತ್ತದೆ?
ಪೂರ್ಣ ಹೆಸರು: Calling Name Presentation (CNAP).
ಮುಖ್ಯ ಉದ್ದೇಶ: ಇನ್‌ಕಮಿಂಗ್ ಕಾಲ್‌ನಲ್ಲಿ ಕಾಲರ್‌ನ ಹೆಸರನ್ನು (ಆಧಾರ್-ಲಿಂಕ್ಡ್ ಅಥವಾ SIM KYC ರಿಜಿಸ್ಟರ್ಡ್ ಹೆಸರು) ನಿಮ್ಮ ಫೋನ್ ಸ್ಕ್ರೀನ್‌ನಲ್ಲಿ ತೋರಿಸುವುದು. ಇದು ನೆಟ್‌ವರ್ಕ್ ಲೆವೆಲ್‌ನಲ್ಲಿ ಕೆಲಸ ಮಾಡುತ್ತದೆ, ಇಂಟರ್ನೆಟ್ ಅಗತ್ಯವಿಲ್ಲ.
Truecaller ನಿಂದ ಭಿನ್ನತೆ: Truecaller ಕ್ರೌಡ್‌ಸೋರ್ಸ್ಡ್ (ಯೂಸರ್‌ಗಳಿಂದ ಸಂಗ್ರಹಿಸಿದ) ಡೇಟಾವನ್ನು ಬಳಸುತ್ತದೆ. ಆದರೆ, CNAP ಸರ್ಕಾರಿ/ಟೆಲಿಕಾಂ ರೆಕಾರ್ಡ್‌ಗಳಿಂದ ನೇರ ಡೇಟಾ ತೆಗೆದುಕೊಳ್ಳುತ್ತದೆ. ಇದರಿಂದ ತಪ್ಪು ಮಾಹಿತಿ ಕಡಿಮೆ ಬರುತ್ತದೆ.

ಹೇಗೆ ಕೆಲಸ ಮಾಡುತ್ತದೆ?

ಕಾಲ್ ಬಂದಾಗ, ರಿಸೀವರ್‌ನ ಟೆಲಿಕಾಂ ಆಪರೇಟರ್ ಕಾಲರ್‌ನ ನಂಬರ್ ಅನ್ನು KYC ಡೇಟಾಬೇಸ್‌ನೊಂದಿಗೆ ಮ್ಯಾಚ್ ಮಾಡುತ್ತದೆ. ಬಿಸಿನೆಸ್ ಅಥವಾ ಇಂಡಿವಿಜುಯಲ್ ಕಾಲ್‌ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.
2025ರ ಅಕ್ಟೋಬರ್ 28ರಂದು TRAI ಇದಕ್ಕೆ ಅಂತಿಮ ಅನುಮೋದನೆ ನೀಡಿದೆ. ಹರ್ಯಾಣ ಮತ್ತು ಹಿಮಾಚಲ ಪ್ರದೇಶದಂತಹ ಕೆಲವು ರಾಜ್ಯಗಳಲ್ಲಿ ಪೈಲಟ್ ಟೆಸ್ಟ್ ಶುರು. Vodafone Idea ಈಗಾಗಲೇ ಹರ್ಯಾಣದಲ್ಲಿ ಟೆಸ್ಟ್ ಮಾಡುತ್ತಿದ್ದು, Jio ಸೀನ್ ಶುರು ಮಾಡಲಿದೆ. Airtel ಸಹ ಭಾಗವಹಿಸುತ್ತದೆ.
2026ರ ಮಾರ್ಚ್ 31, 2026ರೊಳಗೆ ದೇಶದ್ಯಾಂತ ಜಾರಿಗೊಳಿಸುವ ಗುರಿ ಹೊಂದಿರುತ್ತದೆ. ಆರಂಭದಲ್ಲಿ 4G ಮತ್ತು 5G ಡಿವೈಸ್‌ಗಳಿಗೆ ಮಾತ್ರ ಲಭ್ಯವಾಗಲಿದೆ. (ಸುಮಾರು 200 ಮಿಲಿಯನ್ 2G ಯೂಸರ್‌ಗಳು ಇನ್ನೂ ಕಾಯಬೇಕು)(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net