ಆಂಧ್ರದಲ್ಲಿ Nirmala Sitharaman ಭಾಷಣಕ್ಕೆ ತಡೆ ವಿಚಾರ: ಕಾಂಗ್ರೆಸ್ ಸುಳ್ಳು ಮಾಹಿತಿ ನೀಡ್ತಿದೆ ಎನ್ನುತ್ತಾ ಅಸಲಿ ಸತ್ಯ ಬಿಚ್ಚಿಟ್ಟ ಟಿಡಿಪಿ

ಆಂಧ್ರದಲ್ಲಿ Nirmala Sitharaman ಭಾಷಣಕ್ಕೆ ತಡೆ ವಿಚಾರ: ಕಾಂಗ್ರೆಸ್ ಸುಳ್ಳು ಮಾಹಿತಿ ನೀಡ್ತಿದೆ ಎನ್ನುತ್ತಾ ಅಸಲಿ ಸತ್ಯ ಬಿಚ್ಚಿಟ್ಟ ಟಿಡಿಪಿ
Published on: 
  • ಮದನಪಲ್ಲಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಷಣಕ್ಕೆ ತಡೆ ವಿಚಾರ

  • ಕಾಂಗ್ರೆಸ್ ನಾಯಕರು ವಿಡಿಯೋವನ್ನು ತಿರುಚಿದ್ದಾರೆ ಎಂದ ಟಿಡಿಪಿ ನಾಯಕರು

  • ಗದ್ದಲ ಉದ್ಯೋಗಕ್ಕಾಗಿಯಲ್ಲ, ಸಿಎಂ ಮತ್ತು ಡಿಸಿಎಂ ಮಾತನಾಡಲು ಮನವಿ ಮಾಡಿಕೊಂಡಿದ್ದು ಎಂದ ಟಿಡಿಪಿ

ಮದನಪಲ್ಲಿ: ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನಿರ್ಮಲಾ ಸೀತಾರಾಮನ್​ ಅವರ ಭಾಷಣದ ವೇಳೆ ಕೆಲ ಕಾಲ ಗದ್ದಲ ಉಂಟಾದ ಘಟನೆಯು ಸದ್ಯ ಬಿಜೆಪಿ ಮತ್ತು ಕಾಂಗ್ರೆಸ್​ ನಾಯಕರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಇದು ಉದ್ಯೋಗಕ್ಕಾಗಿ ನಡೆದ ಗದ್ದಲ ಎಂದು ಕಾಂಗ್ರೆಸ್ ಹೇಳಿದರೆ, ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಎನ್​ಡಿಎ-ಟಿಡಿಪಿ ನಾಯಕರು ಕಿಡಿಕಾರಿದ್ದಾರೆ.

ಮದನಪಲ್ಲಿಯಲ್ಲಿ ಒಂದು ಲಕ್ಷ ಕೋಟಿ ರೂ ವೆಚ್ಚದ ಗ್ಲೋಬಲ್ ಹಾರ್ಟಿಕಲ್ಚರ್​​ ಹಬ್ ರಾಯಲ್​ ಸೀಮಾ ರೈಸಿಂಗ್​ ಯೋಜನೆ ಶಂಕು ಸ್ಥಾಪನ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿಯಾಗಿದ್ದರು. ಈ ವೇಳೆ ವೇದಿಕೆಯಲ್ಲಿ ಡಿಸಿಎಂ ಪವನ್​ ಕಲ್ಯಾಣ್​ ಹಾಗು ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಸಹ ಇದ್ದರು.

ಅ.2ರಂದು ಏನಾಗಿತ್ತು?

ಅಕ್ಟೋಬರ್​ 2ರಂದು ಎಕ್ಸ್​ನಲ್ಲಿ ವೈರಲ್ ಆದ ವಿಡಿಯೋದಲ್ಲಿ ಜನರು ನಿರ್ಮಲಾ ಸೀತಾರಾಮನ್​ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಅಲ್ಲಿನ ಪ್ರಾದೇಶಿಕ ಭಾಷೆ ತೆಲುಗಿನಲ್ಲಿ ಮಾತನಾಡಲು ಶುರುವಿಟ್ಟುಕೊಂಡರು. ಅವರ ಭಾಷಣದ ವೇಳೆ ತಡೆಯುಂಟು ಮಾಡಿದ್ದಲ್ಲದೇ, ಮೊದಲು ಉದ್ಯೋಗ ನಂತರ ನಿಮ್ಮ ಭಾಷಣ ಎಂದು ಕಿರುಚಾಟ ಶುರು ಮಾಡಿದ್ದಾರೆ. ಆಗ ವಿತ್ತ ಸಚಿವೆ ಮೊದಲು ನನ್ನ ಮಾತನ್ನು ಕೇಳಿ ಎಂದು ನಮಸ್ಕರಿಸಿದರು ಜನರು ಪಟ್ಟು ಬಿಡಲಿಲ್ಲ. ಈ ವೇಳೆ ಸಿಎಂ ಚಂದ್ರಬಾಬು ನಾಯ್ಡು ಅವರು ಮಧ್ಯಪ್ರವೇಶಿಸಿ ಮಾತನಾಡಿ, ಜನರನ್ನು ಸಮಾಧಾನ ಪಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್​​ನಿಂದ ಪೋಸ್ಟ್​

ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಜೈರಾಮ್​ ರಮೇಶ್​ ಎಕ್ಸ್​ನಲ್ಲಿ ವಿಡಿಯೋ ಹಂಚಿಕೊಂಡು ಬರೆದುಕೊಂಡಿದ್ದು ಹೀಗೆ, 'ಭಾರತದಲ್ಲಿನ ನಿರುದ್ಯೋಗ ಸಮಸ್ಯೆಯ ಬಗ್ಗೆ ಸಾರ್ವಜನಿಕರ ಆಕ್ರೋಶವು ಯಾವ ಮಟ್ಟಕ್ಕೆ ಇದೆ ಎಂದರೆ, ಹಣಕಾಸು ಸಚಿವರ ಭಾಷಣವನ್ನೇ ಮೌನಗೊಳಿಸಿದೆ. ಮುಖ್ಯಮಂತ್ರಿ ಮಧ್ಯಪ್ರವೇಶಿಸಿದ ಇದನ್ನು ಪರಿಹರಿಸುವಂತೆ ಮಾಡಿದೆ' ಎಂದು ಬರೆದುಕೊಂಡಿದ್ದಾರೆ.

ಜೈರಾಮ್​ ರಮೇಶ್​ ಅವರು ಹಂಚಿಕೊಂಡ ವಿಡಿಯೋವನ್ನು ಸುಲೇಮಾನ್​ ಎನ್ನುವ ಖಾತೆಯಿಂದ ಹಂಚಿಕೊಳ್ಳಲಾಗಿತ್ತು. ಇದನ್ನೇ ಜೈರಾಮ್​ ರಮೇಶ್​ ಎಕ್ಸ್​ನಲ್ಲಿ ರೀ ಪೋಸ್ಟ್​ ಮಾಡಿದ್ದರು. 'ನಿರ್ಮಲಾ ಸೀತಾರಾಮನ್​ ಅವರ ಭಾಷಣದ ವೇಳೆ ಜನರು ಉದ್ಯೋಗದ ಬಗ್ಗೆ ದನಿ ಎತ್ತಿದ್ದಾರೆ. ಸಿಎಂ ಚಂದ್ರಬಾಬು ನಾಯ್ಡು ಅವರು ಈ ಗದ್ದಲವನ್ನು ಮೌನಗೊಳಿಸಿದರು. ನಿರ್ಮಲಾ ಸೀತಾರಾಮನ್​ ಅವರಿಗೆ ಯುವ ಸಮೂಹದ ನಿರುದ್ಯೋಗದ ಆಕ್ರೋಶ ತಟ್ಟಿದೆ' ಎಂದು ಬರೆದುಕೊಂಡಿದ್ದರು. ಇದೇ ವಿಡಿಯೋವನ್ನು ಜೈರಾಮ್​ ರಮೇಶ್​ ತೀ ಪೋಸ್ಟ್ ಮಾಡಿಕೊಂಡಿದ್ದರು.

ನಿರ್ಮಲಾ ಸೀತಾರಾಮನ್​ ಕಿಡಿ

ಕಾಂಗ್ರೆಸ್​ ನಾಯಕರು ಈ ವಿಡಿಯೋಗಳನ್ನು ರೀ ಪೋಸ್ಟ್​ ಮಾಡಿಕೊಳ್ಳುತ್ತಿದ್ದಂತೆ ಎನ್​ಡಿಎ ಮತ್ತು ಟಿಎಇಪಿ ನೇತ್ತೃತ್ವ ಆಂಧ್ರಪ್ರದೇಶದ ನಾಯಕರು ಟಾಂಗ್​ ಕೊಟ್ಟಿದ್ದಾರೆ. ಜೊತೆಗೆ ನಿರ್ಮಲಾ ಸೀತಾರಾಮನ್​ ಅವರು ನೇರವಾಗಿ ಜೈರಾಮ್​ ರಮೇಶ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ಟಿಡಿಪಿ ಕಾರ್ಯಕರ್ತರು ಸಿಎಂ ಮತ್ತು ಡಿಸಿಎಂ ನಾಯಕರೊಂದಿಗೆ ಮಾತನಾಡಲು ಬಯಸಿದ್ದರು. ಆಗ ಕಾರ್ಯಕ್ರಮದ ನಂತರ ಮಾತನಾಡುತ್ತೇವೆ ಎಂದು ಸಿಎಂ ಚಂದ್ರಬಾಬು ನಾಯ್ಡು ಅವರು ಅವನ್ನು ಸಮಾಧಾನ ಪಡಿಸಿದರು. ಘಟನೆ ನಡೆದದ್ದು ಇಷ್ಟೇ' ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬರೆದುಕೊಂಡಿದ್ದರು.

ಟಿಡಿಪಿ ನಾಯಕರು ಕಿಡಿ

'ತಪ್ಪು ಪೋಸ್ಟ್​ಗಳನ್ನು ಹಂಚಿಕೊಂಡು ಜನರ ದಾರಿ ತಪ್ಪಿಸುವ ಕೆಲಸ ಬಿಟ್ಟುಬಿಡಿ. ನಿರ್ಮಲಾ ಸೀತಾರಾಮನ್ ಅವರು ಮಾತನಾಡುವ ವೇಳೆ ಜನರು ಸಿಎಂ ಮತ್ತು ಡಿಸಿಎಂ ಮಾತನಾಡಲು ಬೇಡಿಕೆ ಇಟ್ಟರು. ಹೀಗಾಗಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಧ್ಯಪ್ರವೇಶಿಸಿದರು. ಕೇಂದ್ರ ಸಚಿವರ ಭಾಷಣ ಆಲಿಸಲು ಮನವಿ ಮಾಡಿಕೊಂಡರು. ಈ 30 ಸೆಕೆಂಡುಗಳ ವಿಡಿಯೋವನ್ನು ಕಾಂಗ್ರೆಸ್ ತಿರುಚಿದೆ' ಎಂದು ಟಿಡಿಪಿ ನಾಯಕರು ಗುಡುಗಿದರು.

ಚಂದ್ರಬಾಬು ನಾಯ್ಡು ಮಾತನಾಡಿದ್ದಿಷ್ಟು

ಚಂದ್ರಬಾಬು ನಾಯ್ಡು ಅವರು ಮಧ್ಯಪ್ರವೇಶಿಸಿ ಮಾತನಾಡಿರುವುದು ಹೀಗಿದೆ, 'ತಮ್ಮಂದಿರೆ ಈ ರೀತಿ ನೀವು ನಡೆದುಕೊಳ್ಳುವುದು ಸರಿಯಲ್ಲ. ಇದು ರಾಯಲಸೀಮದಲ್ಲಿರುವ ರೈತರ ಜೀವನದಲ್ಲಿ ಬದಲಾವಣೆ ತರುವ ಯೋಜನೆ ಇದಾಗಿದೆ. ಕೇಂದ್ರ ಸಚಿವರು ಮಾತನಾಡುವುದು ಬಹಳ ಮುಖ್ಯ. ಅವರ ಹೇಳಿಕೆಯನ್ನು ನಾವು ಕೇಳಿಸಿಕೊಳ್ಳಬೇಕಾಗಿದೆ. ನಿಮ್ಮ ಉತ್ಸಾಹ ನಮಗೆ ತಿಳಿಯುತ್ತದೆ. ದಯವಿಟ್ಟು ಕೂತು ಅವರು ಮಾತನಾಡುವುದನ್ನು ಕೇಳಿ' ಎಂದು ಹೇಳಿದ್ದಾರೆ. 'ನಾನು ಮತ್ತು ಪವನ್​ ಕಲ್ಯಾಣ್​ ಅವರು ಎಂದಾದರೂ ಬರುತ್ತಲೇ ಇರುತ್ತೇವೆ. ಸದ್ಯ ನಮಗೆ ಕೇಂದ್ರ ಸಚಿವರು ಮಾತನಾಡುವುದು ಬಹು ಮುಖ್ಯ. ಅವರ ಸಂದೇಶ ನಮಗೆ ಬೇಕಾಗಿದೆ. ಆನಂತರ ನಾವು ಎಷ್ಟಾದರೂ ಮಾತನಾಡುತ್ತೇವೆ' ಎಂದು ಮನವಿ ಮಾಡುತ್ತಾ ಎಲ್ಲರು ಕುಳಿತುಕೊಳ್ಳುವಂತೆ ಮಾಡಿದರು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net