ಸಿಜೆಪಿ ವಕ್ತಾರನ ನಿವಾಸಕ್ಕೆ ಯೂಟ್ಯೂಬರ್​ಗಳ ಅತಿಕ್ರಮ ಪ್ರವೇಶ; ಇದು 'ಗಂಭೀರ ಭದ್ರತಾ ಬೆದರಿಕೆ'ಎಂದು Saurav Das ಪೋಸ್ಟ್​

CJP Saurav Das flags security threat
CJP Saurav Das flags security threat
Published on
ಕಾಕ್ರೋಚ್​ ಜನತಾ ಪಾರ್ಟಿಯ ವಕ್ತಾರ ಸೌರವ್​ ದಾಸ್​ ಅವರ ನಿವಾಸಕ್ಕೆ ಯೂಟ್ಯೂಬರ್​ಗಳು ಹಾಗೂ ಚಾನೆಲ್​ಗಳು ಅತಿಕ್ರಮವಾಗಿ ನುಗ್ಗಿ ಮನೆಯ ಒಳಗಿನ ದೃಶ್ಯಗಳನ್ನು ಪ್ರಸಾರ ಮಾಡಿವೆ. ಇದು ಕೇವಲ ತಮ್ಮ ಗೌಪ್ಯತೆಯ ಉಲ್ಲಂಘನೆ ಮಾತ್ರವಲ್ಲದೆ, ಕುಟುಂಬಸ್ಥರಿಗೆ ಒಡ್ಡಿರುವ 'ಗಂಭೀರ ಭದ್ರತಾ ಬೆದರಿಕೆ' ಎಂದು ಎಕ್ಸ್​ನಲ್ಲಿ ದೆಹಲಿ ಪೊಲೀಸರನ್ನು ಟ್ಯಾಗ್​ ಮಾಡಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಪೋಸ್ಟ್​ನಲ್ಲಿ ಏನಿದೆ?

ನಾನು ಸೆಂಪರ್ ಫಾರ್ ಜಸ್ಟಿಸ್ ಅಂಡ್ ಪೀಸ್ನ ಎರಡು ದಿನಗಳ ಸಭೆಗಾಗಿ ಪ್ರಸ್ತುತ ಮಹಾರಾಷ್ಟ್ರದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಸಮಾಜಘಾತಕ ಶಕ್ತಿಗಳು ನನ್ನ ನಿವಾಸದ ಮೇಲೆ ದಾಳಿ ನಡೆಸಿ ಸಮಸ್ಯೆ ಉಂಟಾದರೆ ಯೂಟ್ಯೂಬರ್‌ಗಳು ಮತ್ತು ಅವರ ಟ್ರೋಲ್ ಹ್ಯಾಂಡಲ್​ ಮಾಡುವವರೇ ನೇರ ಹೊಣೆಯಾಗುತ್ತಾರೆ ಎಂದು ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ

ಸೌರವ್​ ಟಾರ್ಗೆಟ್​ ಯಾಕೆ?

ಕಂಗನಾರನ್ನು ಸ್ವ ಪಕ್ಷ ಬಿಜೆಪಿ ಗಂಭೀರವಾಗಿ ಪರಿಗಣಿಸೋದಿಲ್ಲ. ಇನ್ನು ನಾವು ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆ ಎಂದು. ಆಗ ಕಂಗನಾ ಅವರು ಇವರೊಬ್ಬರು ನಿಷ್ಪ್ರಯೋಜಕ ಹಾಗೂ ನಿರುದ್ಯೋಗಿ ಎಂದು ಕಿಡಿಕಾರಿದ್ದರು.

ಈ ವಿದ್ಯಾಮಾನಗಳ ಬೆನ್ನಲ್ಲೇ ಸೌರವ್​ ದಾಸ್​ ಅವರ ನಿವಾಸಕ್ಕೆ ಅಪರಿಚಿತರು ಪ್ರವೇಶಿಸಿ ದಾಂಧಲೆ ನಡೆಸಿದ್ದಾರೆ ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net