ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,690 ರೂ. ಏರಿಕೆಯಾಗಿ, 1,42,300 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,550 ರೂ. ಹೆಚ್ಚಳವಾಗಿ 1,30,450 ರೂ.ಗೆ ತಲುಪಿದೆ. ಇನ್ನು 10 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ 1,270 ರೂ. ಏರಿಕೆಯಾಗಿ 1,06,760 ರೂ. ಆಗಿದೆ. ಇದರೊಟ್ಟಿಗೆ ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಯ ಬೆಲೆ 10 ಸಾವಿರ ರೂ. ಏರಿದ್ದರೆ, ಹೈದರಾಬಾದ್ನಲ್ಲಿ ಬೆಳ್ಳಿ ಕೆಜಿಗೆ 12,000 ರೂ. ಹೆಚ್ಚಾಗಿದೆ.