ಇನ್ಕಮಿಂಗ್ ಕರೆಗಳು, ಎಸ್ಎಂಎಸ್, ತುರ್ತು ಎಸ್ಒಎಸ್, ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ತುರ್ತು ಸೇವೆಗಳನ್ನು ತಡೆಹಿಡಿಯಲು ಸಾಧ್ಯವಿಲ್ಲ. ಅಲ್ಲದೆ, ಸಾಲಗಾರನ ಉದ್ಯೋಗ ಅಥವಾ ಜೀವನೋಪಾಯಕ್ಕೆ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಬಾಕಿ ಪಾವತಿಸಿದ ಒಂದು ಗಂಟೆಯೊಳಗೆ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಬೇಕು. ಅಕಸ್ಮಾತ್, ಬಾಕಿ ಹಣವನ್ನು ಪಾವತಿ ಮಾಡಿದ ಮೇಲೂ ಲಾಕ್ ತೆಗೆಯಲು ವಿಳಂಬ ಮಾಡಿದ್ದಲ್ಲಿ, ಪ್ರತಿ ಗಂಟೆಗೆ 250 ರೂ. ದರದಲ್ಲಿ ಗ್ರಾಹಕನಿಗೆ ಆಯಾ ಬ್ಯಾಂಕ್‌ಗಳು ಪರಿಹಾರ ಹಣವನ್ನು ಕೊಡಬೇಕು ಎಂದು ಆರ್‌ಬಿಐ ತನ್ನ ನಿಯಮಾವಳಿಗಳಲ್ಲಿ ಸ್ಪಷ್ಟಪಡಿಸಿದೆ.