ಚುನಾವಣಾ ಆಯೋಗದ ಹಿರಿಯ ಅಧಿಕಾರಿಯ ವಿರುದ್ಧ ಇಸಿಗಳು ದೂರು ನೀಡಿದ್ದು ಸತ್ಯ!...ಆದ್ರೆ ಅವ್ರು ಜ್ಞಾನೇಶ್ ಕುಮಾರ್ ಅಲ್ಲ...ಹಾಗಿದ್ರೆ ಯಾರದು..? | Election Commission

ನವದೆಹಲಿ: ಭಾರತೀಯ ಚುನಾವಣಾ ಆಯೋಗದ (Election Commission) ಒಳಗಿನ ಹಿರಿಯ ಅಧಿಕಾರಿಗಳ ಕಾರ್ಯವೈಖರಿಯ ವಿಚಾರವಾಗಿ ಉನ್ನತ ಮಟ್ಟದ ಭಿನ್ನಾಭಿಪ್ರಾಯಗಳು ಹಾಗೂ ಆಡಳಿತಾತ್ಮಕ ಸಂಘರ್ಷಗಳು ಕೊನೆಗೂ ಅಧಿಕೃತವಾಗಿ ಬಹಿರಂಗಗೊಂಡಿವೆ.
ಚುನಾವಣಾ ಆಯೋಗದ ಹಿರಿಯ ಅಧಿಕಾರಿಯ ವಿರುದ್ಧ ಇಸಿಗಳು ದೂರು ನೀಡಿದ್ದು ಸತ್ಯ!...
ಚುನಾವಣಾ ಆಯೋಗದ ಹಿರಿಯ ಅಧಿಕಾರಿಯ ವಿರುದ್ಧ ಇಸಿಗಳು ದೂರು ನೀಡಿದ್ದು ಸತ್ಯ!...
Published on: 

ನವದೆಹಲಿ: ಭಾರತೀಯ ಚುನಾವಣಾ ಆಯೋಗದ (Election Commission) ಒಳಗಿನ ಹಿರಿಯ ಅಧಿಕಾರಿಗಳ ಕಾರ್ಯವೈಖರಿಯ ವಿಚಾರವಾಗಿ ಉನ್ನತ ಮಟ್ಟದ ಭಿನ್ನಾಭಿಪ್ರಾಯಗಳು ಹಾಗೂ ಆಡಳಿತಾತ್ಮಕ ಸಂಘರ್ಷಗಳು ಕೊನೆಗೂ ಅಧಿಕೃತವಾಗಿ ಬಹಿರಂಗಗೊಂಡಿವೆ.

ಆಯೋಗದ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಆಯೋಗದ ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಸಂಪುಟ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರಿಗೆ ಪ್ರತ್ಯೇಕವಾಗಿ ಎರಡು ದೂರು ಪತ್ರಗಳನ್ನು ಬರೆದಿದ್ದರೂ, ಆದರೆ ಅಧಿಕೃತ ಕ್ರಮ ಕೈಗೊಳ್ಳಲು ಸಂಪುಟ ಕಾರ್ಯದರ್ಶಿ ನಿರಾಕರಿಸಿದ್ದಾರೆ ಎಂಬ ಮಹತ್ವದ ಸಂಗತಿಯು ಆರ್‌ಟಿಐ ಉತ್ತರದ ಮೂಲಕ ಹೊರಬಂದಿದೆ.

ಆರ್‌ಟಿಐ ಕಾರ್ಯಕರ್ತ ಕಮೋಡೋರ್ ಲೋಕೇಶ್ ಕೆ. ಬಾತ್ರಾ (ನಿವೃತ್ತ) ಅವರು ಸಲ್ಲಿಸಿದ್ದ ಅರ್ಜಿ ಹಾಕಿದ್ದ ಮಾಹಿತಿಯ ಪ್ರಕಾರ, ಪಿಟಿಐ ಸುದ್ದಿ ಸಂಸ್ಥೆಯು ಈ ವರದಿಯನ್ನು ಹೊರಹಾಕಿದೆ.

ಇದನ್ನೂ ಓದಿ:ಚುನಾವಣಾ ಆಯೋಗದಲ್ಲಿ ಲೆಟರ್​ ವಾರ್​!...ಪ್ರಧಾನಿ ಆಫೀಸ್‌ಗೆ ತಲುಪಿದ ಇಸಿಗಳ ರಹಸ್ಯ ಪತ್ರ; ಆರ್‌ಟಿಐನಲ್ಲಿ ಬಯಲಾಯ್ತು ಅಸಲಿ ಸತ್ಯ! | Election Commission

ಚುನಾವಣಾ ಆಯೋಗದಲ್ಲಿ 2024ರ ಸೆಪ್ಟೆಂಬರ್ 2 ರಂದು ನಡೆದ ನೇಮಕಾತಿ ಸಮಿತಿಯ ಮೂಲಕ ನಿಯೋಜನೆಗೊಂಡು ಹಿರಿಯ ಉಪ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಮನೀಶ್ ಗರ್ಗ್ ಅವರ ಕಾರ್ಯವೈಖರಿ ಮತ್ತು ನಿರ್ಧಾರಗಳ ವಿರುದ್ಧ ಜುಲೈ 29 ರಂದು ಇಸಿಗಳಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಪ್ರತ್ಯೇಕ ಪತ್ರಗಳನ್ನು ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಈ ದೂರುಗಳ ಆಧಾರದ ಮೇಲೆ ಯಾವುದೇ ತ್ವರಿತ ಕ್ರಮ ಜರುಗಿಸಲು ಸಂಪುಟ ಕಾರ್ಯದರ್ಶಿ ಹಿಂದೇಟು ಹಾಕಿದರು.

ಈ ಕುರಿತು ಸ್ಪಷ್ಟನೆ ನೀಡಿದ ಸೋಮನಾಥನ್, ಚುನಾವಣಾ ಆಯುಕ್ತರಿಂದ ತಮಗೆ ಬಂದಿರುವ ಈ ಸಂವಹನಗಳು ಅಥವಾ ದೂರುಗಳು ಅವರ ವೈಯಕ್ತಿಕವಾಗಿ ನೀಡಲಾಗಿವೆಯೇ ವಿನಃ, ಇದು ಇಡೀ ಆಯೋಗದ ಅಧಿಕೃತ ನಿರ್ಣಯದ ರೂಪದಲ್ಲಿ ಬಂದಿಲ್ಲ ಎಂದು ತಿಳಿಸಿದರು. ಇಂತಹ ಪರಿಸ್ಥಿತಿಯಲ್ಲಿ ಈ ಹಂತದಲ್ಲಿ ಯಾವುದೇ ಸರ್ಕಾರದ ಕಡೆಯಿಂದ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೂರಿನ ವಿವರಗಳ ಪ್ರಕಾರ, ಹಿರಿಯ ಉಪ ಚುನಾವಣಾ ಆಯುಕ್ತರಾದ ಮನೀಶ್ ಗರ್ಗ್ ಅವರು ಆಡಳಿತ ವಿಭಾಗದ ಲಿಂಕ್ ಆಫೀಸರ್ ಆಗಿ ಅಧಿಕಾರ ವಹಿಸಿಕೊಂಡ ನಂತರ, ಆಯೋಗದೊಂದಿಗೆ ಅಥವಾ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಯಾವುದೇ ಪೂರ್ವ ಚರ್ಚೆ ಅಥವಾ ಸಮಾಲೋಚನೆ ನಡೆಸದೆ ಸಮಾನ ಹಾಗೂ ಹಿರಿಯ ಅಧಿಕಾರಿಗಳ ಕೆಲಸದ ಹಂಚಿಕೆ ಕುರಿತು ಸ್ವತಃ ಆದೇಶ ಹೊರಡಿಸಿದ್ದಾರೆ ಎಂದು ಇಬ್ಬರೂ ಚುನಾವಣಾ ಆಯುಕ್ತರು ದೂರಿನಲ್ಲಿ ಆರೋಪಿಸಿದ್ದಾರೆ. ಪೂರ್ವಾನುಮತಿ ಅಥವಾ ಚರ್ಚೆಯಿಲ್ಲದೆ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಈ ಮೊದಲು ಮೌಖಿಕ ಹಾಗೂ ಲಿಖಿತ ಸೂಚನೆಗಳನ್ನು ನೀಡಿದ್ದರೂ ಗರ್ಗ್ ಅವರು ಈ ನಿಯಮ ಉಲ್ಲಂಘಿಸಿದ್ದಾರೆ ಎಂದು ಇಸಿಗಳು ತಮ್ಮ ಪತ್ರದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Also Read
ಜ್ಞಾನೇಶ್ ಕುಮಾರ್ ವಜಾ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಮಹತ್ವದ ಹೇಳಿಕೆ: ನಿಯಮ ಹೇಳೋದೇನು..? | CEC Impeachment
ಚುನಾವಣಾ ಆಯೋಗದ ಹಿರಿಯ ಅಧಿಕಾರಿಯ ವಿರುದ್ಧ ಇಸಿಗಳು ದೂರು ನೀಡಿದ್ದು ಸತ್ಯ!...

ಇಂಡಿಯನ್​ ಎಕ್ಸ್‌ಪ್ರೆಸ್ ವರದಿ

ಈ ಹಿಂದೆ ಇಂಡಿಯನ್​ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದಂತೆ, ಮತದಾರರ ಪಟ್ಟಿಗೆ ಹೆಸರು ಸೇರಿಸುವ ಅಥವಾ ತೆಗೆದುಹಾಕುವ ಅಧಿಕಾರವನ್ನು ರಾಜ್ಯ ಮಟ್ಟದ ಅಧಿಕಾರಿಗಳಿಗೆ ನೀಡುವ ಬದಲು ಕೇಂದ್ರ ಕಚೇರಿಯಲ್ಲೇ ಕೇಂದ್ರೀಕೃತಗೊಳಿಸುವ ರೀತಿಯಲ್ಲಿ ಕೆಲಸದ ಮರುಹಂಚಿಕೆ ಆದೇಶ ಹೊರಡಿಸಲಾಗಿತ್ತು. ಇದು ಆಯೋಗದ ಒಳಗೆ ವಿವಾದಕ್ಕೆ ಕಾರಣವಾಗಿತ್ತು. ಆದಾಗ್ಯೂ, ಇಬ್ಬರು ಚುನಾವಣಾ ಆಯುಕ್ತರ ಕಠಿಣ ನಿರ್ದೇಶನಗಳ ನಂತರ ಈ ಮರುಹಂಚಿಕೆ ಆದೇಶಗಳನ್ನು ಜಾರಿಗೆ ತರಲಾಗಿಲ್ಲ ಎಂದು ಆಯೋಗವು ನಂತರ ಸ್ಪಷ್ಟನೆ ನೀಡಿತ್ತು. ಆದರೂ, ಸಿಇಸಿ ಕಾಯ್ದೆ 2023ರ ನಿಯಮಗಳನ್ನು ಉಲ್ಲಂಘಿಸಿ ಮನೀಶ್ ಗರ್ಗ್ ನಡೆದುಕೊಂಡಿದ್ದಾರೆ ಎಂದು ಇಸಿಗಳು ಆರೋಪಿಸಿದ್ದರು.

ಚುನಾವಣಾ ಆಯುಕ್ತರು ಕಳುಹಿಸಿರುವ ಪತ್ರಗಳನ್ನು ಗಂಭೀರವಾಗಿ ಪರಿಗಣಿಸಬೇಕಾದರೂ, ಇಡೀ ಆಯೋಗದ ಪರವಾಗಿ ಇದು ಬಂದಿಲ್ಲವಾದ್ದರಿಂದ ಈಗಲೇ ಕ್ರಮ ಜರುಗಿಸುವುದು ಸೂಕ್ತವಲ್ಲ ಎಂದು ಸಂಪುಟ ಕಾರ್ಯದರ್ಶಿ ಸ್ಪಷ್ಟಪಡಿಸಿದರು. ಅಂತಿಮವಾಗಿ ಟಿ.ವಿ. ಸೋಮನಾಥನ್ ಅವರು ಈ ಪತ್ರಗಳ ಸ್ವೀಕೃತಿಯನ್ನು ದೃಢಪಡಿಸಿ, ಸಿಒಪಿಟಿಐ (DoPT) ಮತ್ತು ಇಲಾಖೆಯ ದಾಖಲೆಗಳಿಗೆ ಕಳುಹಿಸಿಕೊಟ್ಟಿದ್ದಾರೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net