ಬಿಜೆಪಿಯಿಂದ ಚುನಾವಣೆಗಳ ಕಳವು; ಮುಂದೆ ಬಿಜೆಪಿಗರು ಜನರ ಕೋಪಕ್ಕೆ ಗುರಿಯಾಗುವುದು ಶತಸಿದ್ಧ: ರಾಹುಲ್ ಗಾಂಧಿ | Rahul Gandhi

ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published on
ನವದೆಹಲಿ: ದೇಶದಲ್ಲಿ ಬಿಜೆಪಿ ಚುನಾವಣೆಗಳನ್ನು ಕದಿಯುತ್ತಿದೆ ಎಂಬ ಆರೋಪವನ್ನು ಪುನರುಚ್ಚರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ಚುನಾವಣೆಗಳನ್ನು ವ್ಯವಸ್ಥೆಯನ್ನು ನಿರ್ಮಿಸಿದೆ, ಈಗ ಅದರ ಬಗ್ಗೆ ಅರ್ಥ ಮಾಡಿಕೊಳ್ಳುತ್ತಿದ್ದು, ಅವರು ಜನರ ಕೋಪಕ್ಕೆ ಗುರಿಯಾಗುವುದು ಶತಸಿದ್ಧ ಎಂದು ಹೇಳಿದ್ದಾರೆ.
ಹರಿಯಾಣ ಕಾಂಗ್ರೆಸ್ ನಾಯಕ ಬ್ರಿಜೇಂದ್ರ ಸಿಂಗ್ ನೇತೃತ್ವದ 'ಸದ್ಭಾವ ಯಾತ್ರೆ'ಯಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಮಧ್ಯಪ್ರದೇಶ, ಹರಿಯಾಣ, ಮಹಾರಾಷ್ಟ್ರಗಳಲ್ಲಿ ಹಾಗೂ ಇತ್ತೀಚೆಗೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿ ಕುಶಲತೆಯಿಂದ ಫಲಿತಾಂಶವನ್ನು ಕಳ್ಳತನ ಮಾಡಿದೆ ಎಂದು ಆರೋಪಿಸಿದ್ದಾರೆ.
ಚುನಾವಣಾ ಆಯೋಗ ಮತ್ತು ಅಧಿಕಾರಶಾಹಿ ಅವರ ನಿಯಂತ್ರಣದಲ್ಲಿದೆ, ಕ್ಷಾಂತರ ಹೆಸರುಗಳನ್ನು ಅಳಿಸಿಹಾಕುತ್ತಾರೆ ಮತ್ತು ಲಕ್ಷಾಂತರ ಹೆಸರುಗಳನ್ನು ಸೇರಿಸುತ್ತಾರೆ. ಅವರು ತಮ್ಮ ಅಧಿಕಾರ ಹೋಗುವುದಿಲ್ಲ ಎಂದು ಭಾವಿಸಿದ್ದಾರೆ, ಆದರೆ ಅವರು ಹೋಗುವ ಸಮಯವೂ ಬರಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನರೇಂದ್ರ ಮೋದಿ ಮತ್ತು ಅಮಿತ್ ಶಾ ದೇಶವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಜನರು ಅರ್ಥಮಾಡಿಕೊಂಡಿದ್ದಾರೆ. ವಿಮಾನ ನಿಲ್ದಾಣ, ಬಂದರುಗಳು, ಮೂಲಸೌಕರ್ಯ. ನಿಕೋಬಾರ್ ದ್ವೀಪವನ್ನು ಅದಾನಿಗೆ ಮಾರಾಟ ಮಾಡಲಾಗುತ್ತಿದೆ. ಅಮೆರಿಕ-ಭಾರತದ ವಾಣಿಜ್ಯ ಒಪ್ಪಂದದಿಂದ ನಮ್ಮ ರೈತರು ಮತ್ತು ಸಣ್ಣ ಕೈಗಾರಿಕೆಗಳಿಗೆ ಹಾನಿಯಾಗಲಿದೆ ಎಂದು ಹೇಳಿದ್ದಾರೆ.
ವ್ಯಾಪಾರ ಒಪ್ಪಂದದ ಅಡಿಯಲ್ಲಿ ಭಾರತದ ಹಿತಾಸಕ್ತಿಗಳೊಂದಿಗೆ ಸರ್ಕಾರ ರಾಜಿ ಮಾಡಿಕೊಂಡಿದೆ ಎಂದು ಕಿಡಿಕಾರಿರುವ ಅವರು, ನರೇಂದ್ರ ಮೋದಿ ಮತ್ತು ಅದಾನಿ ಒಂದೇ, ಕಂಪನಿಯ ಹೆಸರು ಅದಾನಿ ಆದರೂ, ಅದನ್ನು 'ಮೋದಾನಿ' ಎಂದು ಮರುನಾಮಕರಣ ಮಾಡಬೇಕು. ಜೆಪಿಯ ಹಣಕಾಸು ವ್ಯವಸ್ಥೆ ಅದಾನಿ ಎಂದು ಇಡೀ ರಾಷ್ಟ್ರಕ್ಕೆ ತಿಳಿದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೂ ಅದು ತಿಳಿದಿದೆ ಎಂದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net