ಮುಸ್ಲಿಮರ ಸ್ಕಲ್​ ಕ್ಯಾಪ್ ಧರಿಸಲು ನಿರಾಕರಿಸಿದ ಬಿಹಾರ ನೂತನ ಸಿಎಂ ಸಾಮ್ರಾಟ್ ಚೌಧರಿ| CM Samrat Chaudhary

 ಸಾಮ್ರಾಟ್ ಚೌಧಿರಿ
ಸಾಮ್ರಾಟ್ ಚೌಧಿರಿ
Published on
ಪಾಟ್ನಾ: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ಸಾಮ್ರಾಟ್ ಚೌಧಿರಿ ರಾಜಧಾನಿ ಪಾಟ್ನಾದಲ್ಲಿ ಶುಕ್ರವಾರ ನಡೆದ ಮುಸ್ಲಿಂ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಈ ವೇಳೆ ಮುಸ್ಲಿಂ ವ್ಯಕ್ತಿಯೊಬ್ಬರು ನೀಡಿದ ಸ್ಕಲ್​ಕ್ಯಾಪ್ ಧರಿಸಲು ನಿರಾಕರಿಸಿದ್ದಾರೆ.
ಏ. 15ರಂದು ಲೋಕಭವನದಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದ ಸಾಮ್ರಾಟ್ ಚೌಧರಿ, ಬಳಿಕ ಅಧಿಕಾರ ವಹಿಸಿಕೊಂಡಾಗಿನಿಂದ ಪಕ್ಷದ ಕಾರ್ಯಕರ್ತರು ಮತ್ತು ಜನರನ್ನು ಸಿಎಂ ಭೇಟಿ ಮಾಡ್ತಿದ್ದಾರೆ ಎನ್ನಲಾಗಿದೆ. ಅದರ ಭಾಗವಾಗಿ ಮುಸ್ಲಿಂ ಸಮುದಾಯ ಆಯೋಜಿಸಿದ್ದ ಅಬಿನಂಧನ ಸಮಾರಂಭಕ್ಕೆ ಸಾಮ್ರಾಟ್ ಭೇಟಿ ನೀಡಿದ್ದರು.
ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯ ವ್ಯಕ್ತಿಯೊಬ್ಬರು ಅವರನ್ನು ಅಭಿನಂದಿಸಲು ಮುಂದಾಗಿದ್ದ, ಈ ವೇಳೆ ಮುಸ್ಲಿಂ ಟೋಪಿಯನ್ನು ತಲೆಗೆ ಧರಿಸಲು ನೀಡಿದ್ದಾರೆ. ಅದನ್ನು ನಯವಾಗಿ ನಿರಾಕರಿಸಿದ ಚೌಧರಿ ಕೇವಲ ಶಾಲನ್ನು ಅಷ್ಟೇ ಹಾಕಿಸಿಕೊಂಡಿದ್ದಾರೆ. ಕ್ಯಾಪ್ ಅನ್ನು ಕೈಯಲ್ಲಿ ತೆಗೆದುಕೊಂಡು ನಂತರ ಅದನ್ನು ತನ್ನ ಭದ್ರತಾ ಸಿಬ್ಬಂದಿಗೆ ನೀಡಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net