Drishyam 3 | ಅಕ್ಷಯ್ ಖನ್ನಾ ಬದಲಿಗೆ ಜೈದೀಪ್ ಅಹ್ಲಾವತ್ ಎಂಟ್ರಿ...ಈ ಸೇರ್ಪಡೆ ದೈವಕೃಪೆ ಅಂದ್ರು ನಿರ್ಮಾಪಕ ಮಂಗತ್

Drishyam 3
Drishyam 3
Published on
Drishyam 3: ಬಾಲಿವುಡ್‌ನ ಬ್ಲಾಕ್‌ಬಸ್ಟರ್ ದೃಶ್ಯಂ 3 ಚಿತ್ರದಿಂದ ನಟ ಅಕ್ಷಯ್ ಖನ್ನಾ ದಿಢೀರ್ ಹೊರ ನಡೆದಿದ್ದು, ಅವರ ಜಾಗಕ್ಕೆ ಜೈದೀಪ್ ಅಹ್ಲಾವತ್ ಸೇರ್ಪಡೆಗೊಂಡಿರುವುದು ಸದ್ಯ ಹೊಸ ಚರ್ಚೆಯ ವಿಷಯವಾಗಿದೆ.
ನಟ ಅಹ್ಲಾವತ್​ ಸೇರ್ಪಡೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ಕುಮಾರ್ ಮಂಗತ್ ಪಾಠಕ್, ಅಕ್ಷಯ್‌ಗಿಂತ ಜೈದೀಪ್ ಉತ್ತಮ ನಟ, ಅದಕ್ಕೂ ಮಿಗಿಲಾಗಿ ಉತ್ತಮ ವ್ಯಕ್ತಿ ಎಂದು ಹೇಳಿದ್ದಾರೆ.

ವಿವಾದದ ಕಿಡಿ ಹೊತ್ತಿದ್ದು ಹೇಗೆ..?

'ದೃಶ್ಯಂ 2' ಚಿತ್ರದಲ್ಲಿನ ಪಾತ್ರದ ಮೂಲಕ ಅಕ್ಷಯ್ ಖನ್ನಾ ಭಾರಿ ಮೆಚ್ಚುಗೆ ಪಡೆದಿದ್ದರಿಂದ ಸಹಜವಾಗಿ 'ದೃಶ್ಯಂ 3' ಚಿತ್ರದಲ್ಲೂ ಅವರು ಇರಬೇಕೆಬುಂದು ನಿರ್ಮಾಪಕರು ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ, ಚಿತ್ರೀಕರಣಕ್ಕೆ ಕೇವಲ 10 ದಿನಗಳು ಬಾಕಿ ಇರುವಾಗ ಖನ್ನಾ ಚಿತ್ರದಿಂದ ಹೊರನಡೆದಿದ್ದು, ನಿರ್ಮಾಪಕರಿಗೆ ಕೇವಲ ಆಘಾತವಷ್ಟೆವಲ್ಲದೆ, ಆರ್ಥಿಕವಾಗಿಯೂ ಹಿನ್ನಡೆಯುಂಟುಮಾಡಿದೆ.

ಜೈದೀಪ್ ಅಹ್ಲಾವತ್ ಎಂಟ್ರಿ..

ಅಕ್ಷಯ್ ಖನ್ನಾ ಚಿತ್ರದಿಂದ ಹೊರಬಂದ ಬಳಿಕ ನಿರ್ಮಾಪಕ ಪಾಠಕ್​, ಪಾತಾಳ್ ಲೋಕ್ ಖ್ಯಾತಿಯ ನಟ ಜೈದೀಪ್ ಅಹ್ಲಾವತ್​​ರನ್ನು ಸಂಪರ್ಕಿಸಿದರು. ಕಥೆ ಕೇಳಿದ ಜೈದೀಪ್ ಯಾವುದೇ ಪೂರ್ವಾಪರ ಯೋಚಿಸದೆ ತಕ್ಣವೇ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದ್ದು, ಈ ವೃತ್ತಿಪರತೆಯನ್ನು ಮೆಚ್ಚಿದ ನಿರ್ಮಾಪಕರು, ಜೈದೀಪ್ ಅಹ್ಲಾವತ್ ಸೇರ್ಪಡೆ ದೈವಕೃಪೆ. ಅವರು ಅಕ್ಷಯ್‌ಗಿಂತಲೂ ಪ್ರತಿಭಾವಂತ ನಟ ಮತ್ತು ಅತ್ಯಂತ ಸಂಸ್ಕಾರವಂತ ವ್ಯಕ್ತಿ. ಅವರೊಂದಿಗೆ ಕೆಲಸ ಮಾಡುವುದು ಸಂತೋಷದ ವಿಚಾರ ಎಂದು ಶ್ಲಾಘಿಸಿದ್ದಾರೆ.

ಕಾನೂನು ಸಮರಕ್ಕೆ ಮುಂದಾದ ನಿರ್ಮಾಪಕ

ಈ ವಿಷಯವಾಗಿ ಕಾನೂನು ಸಮರಕ್ಕೆ ಮುಂದಾಗಿರುವ ನಿರ್ಮಾಪಕ ಪಾಠಕ್​, ಅಕ್ಷಯ್ ಖನ್ನಾಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎನ್ನಲಾಗಿದ್ದು, ಒಪ್ಪಂದ ಉಲ್ಲಂಘನೆ ಮತ್ತು ಚಿತ್ರೀಕರಣಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಪರಿಹಾರ ನೀಡುವಂತೆ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ದೃಶ್ಯಂ 3 ಚಿತ್ರದ ಘೋಷಣೆಯ ಹಿಂದೆ ಚಿತ್ರೀಕರಣ ಪ್ರಾರಂಭವಾಗುವ ಕೆಲವು ದಿನಗಳ ಮೊದಲು ಅಕ್ಷಯ್ ಖನ್ನಾ ಚಿತ್ರದಿಂದ ಹೊರನಡೆದ ಸುದ್ದಿ ಹರಡಿತ್ತು . ಈ ಹಿಂದೆ ಕೇಳಿಬಂದಿದ್ದ ಊಹಾಪೋಹಗಳನ್ನು ಈಗ ನಿರ್ಮಾಪಕ ಕುಮಾರ್ ಮಂಗತ್ ಪಾಠಕ್ ದೃಢಪಡಿಸಿದ್ದಾರೆ.

ಯಶಸ್ಸು ಎಂದ ತಲೆಗೇರಿದೆ ಕುಮಾರ್ ಮಂಗತ್ ಪಾಠಕ್

ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಕುಮಾರ್ ಮಂಗತ್ ಪಾಠಕ್, ಅಕ್ಷಯ್ ಖನ್ನಾ ಈಗಾಗಲೇ ದೃಶ್ಯಂ 3 ಚಿತ್ರಕ್ಕಾಗಿ ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಿದ್ದರು ಮತ್ತು ಮುಂಗಡ ಹಣವನ್ನೂ ಪಡೆದಿದ್ದರು. ಆದರೆ, ಚಿತ್ರದ ಚಿತ್ರೀಕರಣ ಆರಂಭವಾಗಲು ಕೇವಲ 10 ದಿನಗಳು ಬಾಕಿ ಇರುವಾಗ, ಅವರು ಕೇವಲ ಒಂದು ಟೆಕ್ಸ್ಟ್ ಮೆಸೇಜ್ ಕಳುಹಿಸುವ ಮೂಲಕ ಚಿತ್ರದಿಂದ ಹೊರಬರುವುದಾಗಿ ತಿಳಿಸಿದ್ದಾರೆ ಎಂದು ನಿರ್ಮಾಪಕ ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ನಿರ್ಮಾಪಕ ಮಂಗತ್​, ಧುರಂಧರ್ ಯಶಸ್ಸು ಅವರ ತಲೆಗೇರಿದೆ. ಅಲ್ಲದೆ, ಅವರು ತಮ್ಮನ್ನು ತಾವು ಸೂಪರ್‌ಸ್ಟಾರ್ ಎಂದು ಭಾವಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಅವರು ಒಬ್ಬಂಟಿಯಾಗಿ ಸಿನಿಮಾ ಮಾಡಿದರೆ 50 ಕೋಟಿ ಕೂಡ ಗಳಿಸುವುದಿಲ್ಲ. ಅದರೆ, ದೃಶ್ಯಂ ಎನ್ನುವುದು ಅಜಯ್ ದೇವಗನ್ ಅವರ ಬ್ರ್ಯಾಂಡ್ ಆಗಿದೆ. ಅಕ್ಷಯ್ ಅವರ ವರ್ತನೆಯನ್ನು ಟಾಕ್ಸಿಕ್ ಮತ್ತು ಅನ್-ಪ್ರೊಫೆಷನಲ್ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಗ್ ಧರಿಸುವ ಹಠ

ಈ ನಿರ್ಧಾರಕ್ಕೆ ಮತ್ತೊಂದು ವಿಚಿತ್ರ ಕಾರಣವೆಂದರೆ, ಅಕ್ಷಯ್ ಖನ್ನಾ ಅವರು ಈ ಚಿತ್ರದಲ್ಲಿ ವಿಗ್ ಧರಿಸಲು ಹಠ ಹಿಡಿದಿದ್ದರು. ಆದರೆ, ದೃಶ್ಯಂ 3 ಎರಡನೇ ಭಾಗದ ಮುಂದುವರಿಕೆಯಾದ್ದರಿಂದ ಮತ್ತು ಕಂಟಿನ್ಯೂಟಿ ಕಾಪಾಡಿಕೊಳ್ಳಬೇಕಾದ್ದರಿಂದ, ಅವರ ಪಾತ್ರಕ್ಕೆ ಹಠಾತ್ತಾಗಿ ಕೂದಲು ಬರುವುದು ಅಸಹಜವಾಗಿ ಕಾಣುತ್ತದೆ ಎಂದು ನಿರ್ದೇಶಕ ಅಭಿಷೇಕ್ ಪಾಠಕ್ ವಿರೋಧಿಸಿದ್ದರು. ಆದರೂ ಅಕ್ಷಯ್ ತಮ್ಮ ಪಟ್ಟು ಸಡಿಲಿಸಲಿಲ್ಲ ಎನ್ನಲಾಗಿದೆ(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net