ತಿರುಪರಂಕುಂದ್ರಂನಲ್ಲಿ ಕಾರ್ತಿಕ ದೀಪ ಬೆಳಗಲು ಬಿಡದಿದ್ರೆ ಸಿಎಂ ವಿಜಯ್​ರನ್ನು ಕ್ರಿಶ್ಚಿಯನ್​ ಎಂದೇ ಪರಿಗಣಿಸಬೇಕಾಗುತ್ತೆ: ನೈನಾರ್ ನಾಗೇಂದ್ರನ್..BJP

ತಮಿಳುನಾಡು ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್
ತಮಿಳುನಾಡು ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್
Published on: 
  • ಮದುರೈ ಜಿಲ್ಲೆಯ ತಿರುಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಬೆಳುಗುವ ವಿವಾದ.

  • ಸುಪ್ರೀಂ ಕೋರ್ಟ್ ಆದೇಶ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದ ಟಿವಿಕೆ ಸರ್ಕಾರ.

  • ಸರ್ಕಾರದ ನಡೆ ವಿರುದ್ಧ ಬಿಜೆಪಿ ಕಿಡಿ, ಧಾರ್ಮಿಕ ಸಂಪ್ರದಾಯ ಆಚರಣೆಗಾಗಿ ಹೋರಾಟ ಮಾಡುವ ಸ್ಥಿತಿ ಬಂದಿದೆ ಎಂದ ಬಿಜೆಪಿ.

ಚೆನ್ನೈ: ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಬೆಳಗಿಸುವ ವಿಚಾರ ತೀವ್ರ ಜಿದ್ದಾ ಜಿದ್ದಿಗೆ ಕಾರಣವಾಗಿದೆ. ನ.24ರಂದು ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ಅನುಮತಿ ಪರಿಶೀಲಿಸುವಂತೆ ತಮಿಳು ನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿ ಸಲ್ಲಿಸಿತ್ತು. ಈ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಸಿಎಂ ಸಿ. ಜೋಸೆಫ್​​​ ವಿಜಯ್​ ಅವರ ದರ್ಮವನ್ನು ಮುನ್ನೆಲೆಗೆ ತಂದಿದ್ದಾರೆ.

ನೈನಾರ್​ ನಾಗೇಂದ್ರನ್ ಹೇಳಿದ್ದೇನು?

'ಸುಪ್ರೀಂ ಕೋರ್ಟ್ ಆದೇಶದಂತೆ ತಿರುಪರಂಕುಂದ್ರಂನಲ್ಲಿ ದೀಪ ಬೆಳಗಿಸಲು ಅನುಮತಿ ನೀಡದೆ ಇದ್ದರೆ ನಾವು ಸಿಎಂರನ್ನು ಕ್ರಿಶ್ಚಿಯನ್​ ಎಂದು ನೋಡುತ್ತೇನೆ. ದೀಪ ಬೆಳಗಿಸಲು ಸುಪ್ರೀಂ ಕೋರ್ಟ್​ ಆದೇಶ ನೀಡಿದೆ. ಆದರೆ, ಸರ್ಕಾರ ಇದಕ್ಕೆ ಅವಕಾಶ ಕೊಡದರಿದುವುದು ಕೋರ್ಟ್​ಗೆ ಅಗೌರವ ತೋರಿದಂತೆ' ಎಂದು ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್(Nainar Nagendran) ಹೇಳಿದರು.

'ಸುಪ್ರೀಂ ಕೋರ್ಟ್ ಆದೇಶಿಸಿದರು ಅದರ ಪಾಲನೆಯನ್ನು ಮಾಡಲು ವಿಜಯ್​​ ಬಿಡದೆ, ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶವನ್ನು ಬಹಿರಂಗವಾಗಿ ದಿಕ್ಕರಿಸಿದ ಮೊದಲ ಮುಖ್ಯಮಂತ್ರಿ ಎನ್ನುವ ಹಣೆಪಟ್ಟಿಯನ್ನು ಅವರು ಹೊರಲಿದ್ದಾರೆ. ಆಡಳಿತ ಹೇಗೆ ನಡೆಯುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳದ ಸಿಎಂ ಎನ್ನುವ ರೀತಿ ಅವರನ್ನು ಅವರೇ ಬಿಂಬಿಸಿಕೊಳ್ಳುತ್ತಿದ್ದಾರೆ' ಎಂದು ನಾಗೇಂದ್ರನ್ ಗುಡುಗಿದರು. ನಾನು ಮಧ್ಯಾಹ್ನ ಬೆಟ್ಟಕ್ಕೆ ಭೇಟಿ ನೀಡಿ ದೀಪ ಬೆಳಗಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದರು.

Also Read
ತಿರುಪರಂಕುಂದ್ರಂ ದೀಪ ವಿವಾದ​; ಸುಪ್ರೀಂ ಆದೇಶ ಮರುಪರಿಶೀಲನೆಗೆ ತಮಿಳುನಾಡು ಅರ್ಜಿ! | Thiruparankundram
ತಮಿಳುನಾಡು ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್

ಏನಿದು ವಿವಾದ?

ಮಧುರೈನ ತಿರುಪರಂಕುಂದ್ರಂ ಬೆಟ್ಟದಲ್ಲಿರುವ ಮಸೀದಿ ಮತ್ತು ದರ್ಗಾ ಸಮೀಪ ಎಂಬ ಕಲ್ಲಿನ ಸ್ತಂಭದ ಮೇಲೆ ಸಾಂಪ್ರದಾಯಿಕ 'ಕಾರ್ತಿಕ ದೀಪಂ' ಬೆಳಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಈ ವಿವಾದ ಭುಗಿಲೆದ್ದಿದೆ. ಇಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿಸಲು ಹಿಂದೂ ಭಕ್ತರು ಅನುಮತಿ ಕೋರಿದ್ದರೆ, ತಮಿಳುನಾಡು ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.

ದೀಪ ಬೆಳಗಿಸುವ ವಿಚಾರಕ್ಕೆ ನಡೆಯುತ್ತಿದ್ದ ದೀರ್ಘಕಾಲಿಕ ವಿವಾದದ ನಡುವೆ ಮಂಗಳವಾರ ಕೋರ್ಟ್ ದೀಪ ಬೆಳಗಿಸಲು ಅನುಮತಿ ಕೊಟ್ಟಿತ್ತು. ಆದರೆ, ಟಿವಿಕೆ ಸರ್ಕಾರ ಮರುದಿನವೇ ಅಂದರೆ ಶನಿವಾರ, ರಾಜ್ಯದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತರು ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಈ ನಡೆ ಸದ್ಯ ವಿವಾದಕ್ಕೆ ಕಾರಣವಾಗಿದೆ.

ಯಾರು ಏನಂದ್ರು?

ತಮಿಳುನಾಡಿನಲ್ಲಿ ಹಿಂದೂಗಳು ತಮ್ಮ ಧಾರ್ಮಿಕ ಸಂಪ್ರದಾಯಗಳನ್ನು ಆಚರಿಸುವ ಹಕ್ಕಿಗಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕಿಡಿಕಾರಿದ್ದಾರೆ. ಈ ಕುರಿತು 'ಎಕ್ಸ್'ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಮಾತನಾಡಿ, ಸುಪ್ರೀಂ ಕೋರ್ಟ್ ನಿರ್ಧಾರವನ್ನು ಜಾರಿಗೊಳಿಸಲು ಸರ್ಕಾರಕ್ಕೆ ಇಷ್ಟವಿಲ್ಲ. ತಮಿಳುನಾಡಿನ 'ಇಂಡಿ' ಮೈತ್ರಿಕೂಟದ ಸರ್ಕಾರವು ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೊಳಿಸದಿರಲು ಪಣತೊಟ್ಟಿರುವುದು ಅತ್ಯಂತ ದುರದೃಷ್ಟಕರ ಎಂದು ಕಿಡಿಕಾರಿದ್ದಾರೆ, (ಏಜೆನ್ಸೀಸ್).