ಸೆ.28 ರಿಂದ ಬ್ಯಾಂಕ್ ಮುಷ್ಕರ, ಯಾವೆಲ್ಲಾ ಸೇವೆಗಳಲ್ಲಿ ವ್ಯತ್ಯಯ? | Bank Facilities

ಸೆ.28ರಿಂದ 30 ರ ತನಕ 3 ದಿನ ಮುಷ್ಕರಕ್ಕೆ ಕರೆ ನೀಡಿರುವ ಕಾರಣ, ಈ 3 ದಿನ ಇಂಡಿಯನ್ ಬ್ಯಾಂಕ್, ಎಸ್‌ಬಿಐ, ಯೂನಿಯನ್ ಬ್ಯಾಂಕ್ ಸೇರಿ ಹಲವು ಬ್ಯಾಂಕುಗಳು ಎಟಿಎಂ ಶುಲ್ಕ ಮನ್ನಾ ಮಾಡಿವೆ.
Bank facilities
ಸೆ.28 ರಿಂದ ಬ್ಯಾಂಕ್ ಮುಷ್ಕರ, ಯಾವೆಲ್ಲಾ ಸೇವೆಗಳಲ್ಲಿ ವ್ಯತ್ಯಯ?
Published on: 

Bengaluru| ಸೆ.28ರಿಂದ 30 ರ ತನಕ 3 ದಿನ ಮುಷ್ಕರಕ್ಕೆ ಕರೆ ನೀಡಿರುವ ಕಾರಣ, ಈ 3 ದಿನ ಇಂಡಿಯನ್ ಬ್ಯಾಂಕ್, ಎಸ್‌ಬಿಐ, ಯೂನಿಯನ್ ಬ್ಯಾಂಕ್ ಸೇರಿ ಹಲವು ಬ್ಯಾಂಕುಗಳು ಎಟಿಎಂ ಶುಲ್ಕ ಮನ್ನಾ ಮಾಡಿವೆ. ಚೆಕ್ ಕ್ಲಿಯರೆನ್ಸ್‌ನಿಂದ ಹಿಡಿದು ನೇರ ನಗದು ವಹಿವಾಟಿನವರೆಗೆ ಹಲವು ಸೇವೆಗಳು ಸ್ತಬ್ಧವಾಗಲಿದ್ದು, ಗ್ರಾಹಕರು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ.

ಗ್ರಾಹಕರ ಅನೂಕೂಲತೆಗಾಗಿ ಕೇಂದ್ರ ಸರ್ಕಾರ ಭಾನುವಾರ (ಸೆ.27) ಬ್ಯಾಂಕ್‌ಗಳು ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದೆ. ಈ 3 ದಿನ ಇಂಡಿಯನ್ ಬ್ಯಾಂಕ್, ಎಸ್‌ಬಿಐ, ಯೂನಿಯನ್ ಬ್ಯಾಂಕ್ ಸೇರಿ ಹಲವು ಬ್ಯಾಂಕುಗಳು ಎಟಿಎಂ ಶುಲ್ಕ ಮನ್ನಾ ಮಾಡಿವೆ. ಗ್ರಾಹಕರಿಗೆ ಈ ಅವಧಿಯಲ್ಲಿ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಅವು ಈ ಕ್ರಮ ಕೈಗೊಂಡಿವೆ. ಹೀಗಾಗಿ ಈ ಮುಷ್ಕರದ ಅವಧಿಯಲ್ಲಿ ಗ್ರಾಹಕರು ಎಷ್ಟು ಬೇಕಿದ್ದರೂ ಅಷ್ಟು ಸಲ ಹಣ ಡ್ರಾ ಮಾಡಿಕೊಳ್ಳಬಹುದು.ನಿಗದಿತ ಮಿತಿ ಮೀರಿದರೂ ಆ ವಹಿವಾಟಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದಿವೆ.

ಭಾನುವಾರದಂದು ಬ್ಯಾಂಕ್​ ತೆರೆಯುವುದು ಯಾಕೆ?

ಭಾನುವಾರ ಎಮದಿನಿಂತೆ ರಜೆಯ ದಿನವಾಗಿದ್ದು, ನಂತರದ ಮೂರು ದಿನ ಮುಷ್ಕರ ನಡೆದರೆ ಜನರಿಗೆ ಸತತ ಐದು ದಿನ ಬ್ಯಾಂಕ್‌ ಕೆಲಸ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಜನರಿಗೆ ತೊಂದರೆ ಆಗದಿರಲಿ ಎಂದು ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ (RBI) ಭಾನುವಾರ ಬ್ಯಾಂಕ್ ಶಾಖೆಗಳು, ಎಟಿಎಂ ಮತ್ತು ಕಚೇರಿಗಳನ್ನು ತೆರೆಯಲು ಆದೇಶಿಸಿದೆ.

ಬ್ಯಾಂಕ್​ ಮುಷ್ಕರಕ್ಕೆ ಕಾರಣವೇನು ?

ಬ್ಯಾಂಕ್ ನೌಕರರಿಗೆ ವಾರದಲ್ಲಿ 5 ದಿನವಷ್ಟೇ ಕೆಲಸವಿರಬೇಕು ಎಂಬುದು ಈ ಮುಷ್ಕರದ ಮುಖ್ಯ ಬೇಡಿಕೆಯಾಗಿದೆ. ಪ್ರಸ್ತುತ ಬ್ಯಾಂಕ್‌ಗಳಿಗೆ 2ನೇ ಮತ್ತು 4ನೇ ಶನಿವಾರ ಮಾತ್ರ ರಜೆ ಇರುತ್ತದೆ. ಆದರೆ ಬ್ಯಾಂಕ್‌ ನೌಕರರು ತಿಂಗಳ ಎಲ್ಲ ಶನಿವಾರಗಳೂ ರಜೆ ಬೇಕು ಎಂದು ಬೇಡಿಕೆಯಿಟ್ಟಿದ್ದಾರೆ. ಒಂದುವೇಳೆ ಈ ಬೇಡಿಕೆ ಪೂರೈಸದೆ ಹೋದಲ್ಲಿ ಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದೆ. (ಏಜಿನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net