ಲೇಹ್‌ನಲ್ಲಿ ಆರ್ಮಿ ಹೆಲಿಕಾಪ್ಟರ್ ಪತನ: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿ ಸೆಲ್ಫಿ ತೆಗೆದುಕೊಂಡ ಮೂವರು ಅಧಿಕಾರಿಗಳು! | Army helicopter

ಘಟನೆಯ ಸ್ಥಳ
ಘಟನೆಯ ಸ್ಥಳ
Published on
ನವದೆಹಲಿ: ಲಡಾಖ್​ನ ಲೇಹ್ ಬಳಿಯ ಪರ್ವತ ಟ್ಯಾಂಗ್ಸ್ಟೆ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್(Army helicopter) ಪತನಗೊಂಡಿದ್ದು, ಕೂದಲೆಳೆ ಅಂತರದಲ್ಲಿ ಮೂವರು ಸೇನಾಧಿಕಾರಿಗಳು ಪಾರಾಗಿದ್ದು, ಪತನವಾದ ಹೆಲಿಕಾಪ್ಟರ್ ಅವಶೇಷಗಳ ಮುಂದೆ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
ಬುಧವಾರ(ಮೇ 20) ಈ ಘಟನೆ ನಡೆದಿದೆ. ಚೀತಾ ಎಂಬ ಹೆಲಿಕಾಪ್ಟರ್ ಒಬ್ಬ ಲೆಫ್ಟಿನೆಂಟ್ ಕರ್ನಲ್ ಮತ್ತು ಇಬ್ಬರು ಮೇಜರ್‌ಗಳನ್ನು ಹೊತ್ತೊಯ್ಯುತ್ತಿತ್ತು ಎನ್ನಲಾಗಿದೆ. ಲೆಫ್ಟಿನೆಂಟ್ ಕರ್ನಲ್ ಮತ್ತು ಮೇಜರ್ ಸಿಂಗಲ್-ಎಂಜಿನ್ ಹೆಲಿಕಾಪ್ಟರ್ ಅನ್ನು ಚಲಾಯಿಸುತ್ತಿದ್ದರು. 3ನೇ ಪದಾತಿ ದಳದ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ಸಚಿನ್ ಮೆಹ್ತಾ ಪ್ರಯಾಣಿಕರಾಗಿ ಹೆಲಿಕಾಪ್ಟರ್​ನಲ್ಲಿದ್ದರು.
ಅಪಘಾತದಲ್ಲಿ ಅದೃಷ್ಟವಶಾತ್ ಮೂವರು ಪಾರಾಗಿದ್ದು, ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಮೇಜರ್ ಜನರಲ್ ಮೆಹ್ತಾ ಅವರು ತಮ್ಮ ಮೊಬೈಲ್​ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದು, ಆ ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹೆಲಿಕಾಪ್ಟರ್ ಪತನದ ಕಾರಣ ಹುಡುಕಲು ತನಿಖೆಗೆ ಆದೇಶ ನೀಡಲಾಗಿದೆ. ಈ ಚೀತಾ ಎಂಬ ಹೆಲಿಕಾಪ್ಟರ್‌ಗಳು ಸಿಯಾಚಿನ್ ಹಿಮನದಿಯಲ್ಲಿ ಪಾಕಿಸ್ತಾನಿ ಸೈನಿಕರ ವಿರುದ್ಧ ಹೋರಾಡಲು ಏಪ್ರಿಲ್ 13, 1984 ರಂದು ಪ್ರಾರಂಭಿಸಲಾದ ಆಪರೇಷನ್ ಮೇಘದೂತ್‌ನ ಭಾಗವಾಗಿದ್ದವು ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net