ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಆರಾಧನಾ ಮಿಶ್ರಾ, ಕಾರ್ಯಾಧ್ಯಕ್ಷರಾಗಿ ಇಮ್ರಾನ್ ಮಸೂದ್ ನೇಮಕ | Uttar Pradesh Congress

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯ ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆ ಮಾಡಿದ್ದು, ಯುಪಿ ಕಾಂಗ್ರೆಸ್ ಅಧ್ಯಕ್ಷರಾಗಿ ಆರಾಧನಾ ಮಿಶ್ರಾ, ಕಾರ್ಯಾಧ್ಯಕ್ಷರಾಗಿ ಇಮ್ರಾನ್ ಮಸೂದ್ ಅವರನ್ನು ಹೈಕಮಾಂಡ್ ನೇಮಕ ಮಾಡಿದೆ.
ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಆರಾಧನಾ ಮಿಶ್ರಾ, ಕಾರ್ಯಾಧ್ಯಕ್ಷರಾಗಿ ಇಮ್ರಾನ್ ಮಸೂದ್ ನೇಮಕ | Uttar Pradesh Congress
Published on: 

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯ ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆ ಮಾಡಿದ್ದು, ಯುಪಿ ಕಾಂಗ್ರೆಸ್ ಅಧ್ಯಕ್ಷರಾಗಿ ಆರಾಧನಾ ಮಿಶ್ರಾ, ಕಾರ್ಯಾಧ್ಯಕ್ಷರಾಗಿ ಇಮ್ರಾನ್ ಮಸೂದ್ ಅವರನ್ನು ಹೈಕಮಾಂಡ್ ನೇಮಕ ಮಾಡಿದೆ.

ಆರಾಧಾನಾ ಮಿಶ್ರಾ ಅವರು ಹಿರಿಯ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಅವರ ಪುತ್ರಿಯಾಗಿದ್ದಾರೆ. ಮತ್ತು ಪ್ರಿಯಾಂಕಾ ಗಾಂಧಿಯವರ ಆಪ್ತೆಯಾಗಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಿಯಾಗಿದ್ದು, ರಾಂಪುರ ಖಾಸ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಮತ್ತು ಅಲ್ಲಿಂದ ಮೂರು ಬಾರಿ ಆಯ್ಕೆಯಾಗಿದ್ದಾರೆ.

ಇನ್ನೂ ಹೈಕಮಾಂಡ್ ಕಾರ್ಯಾಧ್ಯಕ್ಷರಾಗಿ ಸಹರಾನ್‌ಪುರ ಸಂಸದ ಇಮ್ರಾನ್ ಮಸೂದ್ ಅವರನ್ನು ನೇಮಿಸಿದೆ. ಮಸೂದ್ ಅವರು ಸಹರಾನ್‌ಪುರ ಮತ್ತು ಪಕ್ಕದ ಪ್ರದೇಶಗಳಲ್ಲಿ ಮುಸ್ಲಿಂ ಮತ್ತು ಒಬಿಸಿ ಮತದಾರರಲ್ಲಿ ಬಲವಾದ ಹಿಡಿತ ಹೊಂದಿದ್ದು, ಅವರ ತೀಕ್ಷ್ಣ ಮತ್ತು ನೇರ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ.

Also Read
ಗುಜರಾತ್​ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ; ಯುಸಿಸಿ ಮಸೂದೆಗೆ ಅನುಮೋದನೆ ನೀಡಿದ ರಾಷ್ಟ್ರಪತಿ ಮುರ್ಮು | Gujarat
ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಆರಾಧನಾ ಮಿಶ್ರಾ, ಕಾರ್ಯಾಧ್ಯಕ್ಷರಾಗಿ ಇಮ್ರಾನ್ ಮಸೂದ್ ನೇಮಕ | Uttar Pradesh Congress

ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೈತ್ರಿಕೂಟದೊಂದಿಗೆ 2024ರಲ್ಲಿ ಸಂಸದರಾಗಿದ್ದರೂ, ಮೈತ್ರಿಕೂಟದೊಳಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದಾಗಿ ಸಮಾಜವಾದಿ ಪಕ್ಷ 2024ರಲ್ಲಿ 37 ಸ್ಥಾನಗಳನ್ನು ಗೆದ್ದಿದೆ ಎಂದು ಹೇಳಿದ್ದಾರೆ. ಮತ್ತು ಆದಷ್ಟು ಶೀಘ್ರದಲ್ಲೇ ಮೈತ್ರಿ-ಸೀಟು ಹಂಚಿಕೆಯನ್ನು ಬಗೆಹರಿಸಬೇಕು ಎಂದು ಹೇಳಿದ್ದಾರೆ.

ದೇವೇಂದ್ರ ನಿಶಾದ್ ಮತ್ತು ಅಲೋಕ್ ಪ್ರಸಾದ್ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಿದೆ. ಮತ್ತು ಮುಂಬರುವ ಚುನಾವಣೆಗಾಗಿ ಪಕ್ಷವು ಬ್ರಾಹ್ಮಣರು, ಮುಸ್ಲಿಮರು, ಒಬಿಸಿಗಳು ಮತ್ತು ದಲಿತರು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ಕೇಂದ್ರೀಕರಿಸಿದೆ ಎನ್ನಲಾಗಿದೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net