ನನ್ನನ್ನು ವಿರೋಧಿಸಿದವರೇ ಪ್ರಜಾಪ್ರಭುತ್ವದ ಶಕ್ತಿ ಏನೆಂಬುದನ್ನು ಕಲಿಸಿಕೊಟ್ಟರು: 25 ವರ್ಷಗಳ ಪಯಣ ಮೆಲುಕು ಹಾಕಿದ ನಮೋ! | Narendra Modi

ನವದೆಹಲಿ: ಸಾರ್ವಜನಿಕ ಜೀವನದಲ್ಲಿ 25 ವರ್ಷಗಳ ಸುದೀರ್ಘ ಸೇವೆಯನ್ನು ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಪಯಣವನ್ನು ಮೆಲುಕು ಹಾಕುತ್ತಾ, ತಮ್ಮನ್ನು ವಿರೋಧಿಸಿದವರೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿಯನ್ನು ಅರ್ಥಮಾಡಿಕೊಳ್ಳಲು ನೆರವಾದರು ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on: 

ನವದೆಹಲಿ: ಸಾರ್ವಜನಿಕ ಜೀವನದಲ್ಲಿ 25 ವರ್ಷಗಳ ಸುದೀರ್ಘ ಸೇವೆಯನ್ನು ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಪಯಣವನ್ನು ಮೆಲುಕು ಹಾಕುತ್ತಾ, ತಮ್ಮನ್ನು ವಿರೋಧಿಸಿದವರೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿಯನ್ನು ಅರ್ಥಮಾಡಿಕೊಳ್ಳಲು ನೆರವಾದರು ಎಂದು ತಿಳಿಸಿದ್ದಾರೆ.

ತಮ್ಮನ್ನು ಟೀಕಿಸುವವರು ಮತ್ತು ರಾಜಕೀಯ ವಿರೋಧಿಗಳಿಂದ ಕಲಿತ ಪಾಠಗಳ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ನನ್ನನ್ನು ವಿರೋಧಿಸಿದವರು ನನಗೆ ಪ್ರಜಾಪ್ರಭುತ್ವದ ಶಕ್ತಿಯನ್ನು ಕಲಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ

ತಮ್ಮ ಸಾರ್ವಜನಿಕ ಸೇವಾ ಪ್ರಯಾಣವನ್ನು ಮೆಲುಕು ಹಾಕಿದ ಪ್ರಧಾನಿ ಮೋದಿ, ಜನರು ತಮ್ಮ ಮೇಲೆ ಇಟ್ಟಿರುವ ನಂಬಿಕೆಯಿಂದಲೇ ತಮ್ಮ ಜವಾಬ್ದಾರಿಗಳು ಹುಟ್ಟಿಕೊಂಡಿವೆ ಎಂದು ಮೋದಿ ನಂಬಿರುವುದಾಗಿ ತಿಳಿಸಿದರು. ದೇಶಕ್ಕಾಗಿ ಇನ್ನಷ್ಟು ಹೆಚ್ಚಿನ ಶಕ್ತಿಯಿಂದ ಕೆಲಸ ಮಾಡಲು ಮತ್ತು ಹಗಲಿರುಳು ನಾಗರಿಕರಿಗೆ ಸೇವೆ ಸಲ್ಲಿಸಲು ದೇವರು ನನಗೆ ಶಕ್ತಿ ನೀಡಲಿ. ಇಂದು ನಾನು ಏನೇ ಆಗಿರಲಿ, ಎಲ್ಲೇ ಇರಲಿ ಮತ್ತು ಯಾವುದೇ ಜವಾಬ್ದಾರಿಯನ್ನು ಹೊಂದಿರಲಿ, ಅದು ಜನರಿಂದಾಗಿ ಮಾತ್ರ. ನನಗೆ ಪ್ರಜೆಗಳೇ ದೇವರು ಎಂದರು.

ದೇಶವು ನನಗೆ ಬಹಳಷ್ಟು ನೀಡಿದೆ. ಆದ್ದರಿಂದ, ರಾಷ್ಟ್ರದ ಕಡೆಗೆ ನನ್ನ ಜವಾಬ್ದಾರಿಯೂ ಅತ್ಯಂತ ದೊಡ್ಡದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ಗುರಿಯನ್ನು ಸಾಕಾರಗೊಳಿಸುವ ತಮ್ಮ ಪ್ರತಿಜ್ಞೆಯನ್ನು ಪುನರುಚ್ಚರಿಸಿದ ಅವರು, ಪ್ರತಿ ನಾಗರಿಕನಿಗೂ ತನ್ನ ಮೇಲೆ ಪ್ರಮುಖ ಹಕ್ಕಿದೆ ಎಂದು ನಂಬಿರುವುದಾಗಿ ತಿಳಿಸಿದರು. ಸಾರ್ವಜನಿಕ ನಂಬಿಕೆ ಮತ್ತು ಅನುಭವದ ತಮ್ಮ 25 ವರ್ಷಗಳನ್ನು ಅಪಾರ ಆಸ್ತಿ ಎಂದು ಬಣ್ಣಿಸಿದ ನಮೋ, ಈ ಅನುಭವವು ತಮಗೊಬ್ಬರಿಗೆ ಮಾತ್ರ ಸೇರಿದ್ದಲ್ಲ, ಇಡೀ ದೇಶಕ್ಕೆ ಸೇರಿದ್ದು ಎಂದರು.

ಸಾರ್ವಜನಿಕ ಸೇವೆಯ ತಮ್ಮ ಪಯಣದಲ್ಲಿ ತಾವೆಂದಿಗೂ ಒಂಟಿಯಾಗಿಲ್ಲ ಎಂದು ಸ್ಮರಿಸಿದ ಪ್ರಧಾನಿ ಮೋದಿ, ಸ್ವಯಂಸೇವಕರು ಮತ್ತು ಕಾರ್ಯಕರ್ತರ ಕೊಡುಗೆಯನ್ನು ಕೊಂಡಾಡಿದರು. ಭಾರತದ ಸಾಂಸ್ಕೃತಿಕ ಆತ್ಮದ ಕಾವಲುಗಾರರಾಗಿರುವ ಅಸಂಖ್ಯಾತ ಸ್ವಯಂಸೇವಕರ ಏಕೈಕ ಉದ್ದೇಶ ಭಾರತಕ್ಕೆ ಸೇವೆ ಸಲ್ಲಿಸುವುದಾಗಿದೆ ಎಂದರು. ಸ್ವಯಂಸೇವಕರು ಸದಾ ಸೇವಾ ಮನೋಭಾವದಿಂದ ಜೀವನ ನಡೆಸುತ್ತಾ, ನಾವು ಸೇವಕರು, ಮಾನವೀಯತೆಯ ನೌಕರರು ಎಂದು ತಮ್ಮನ್ನು ತಾವು ಸದಾ ನೆನಪಿಸಿಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.

ಪ್ರಧಾನಿ ಮೋದಿ ಮುಂದಿನ ಗುರಿಗಳು!

ದೇಶದ ಬೆಳವಣಿಗೆಯ ಮಹತ್ವಾಕಾಂಕ್ಷೆಗಳಿಗೆ ಹೊಸ ಶಕ್ತಿ ತುಂಬಲು ಪ್ರಧಾನಿ ನರೇಂದ್ರ ಮೋದಿ ಅವರು ನಾವು ಇದನ್ನು ಸಾಧಿಸುತ್ತೇವೆ (We will do it) ಎಂಬ ಹೊಸ ಘೋಷಣೆಯನ್ನು ನೀಡಿದರು. ಪ್ರಧಾನಮಂತ್ರಿಯವರು ಪ್ರಮುಖ ರಾಷ್ಟ್ರೀಯ ಗುರಿಗಳನ್ನು ಪ್ರಸ್ತಾಪಿಸಿದಾಗಲೆಲ್ಲಾ, ಸಭೆಯಲ್ಲಿದ್ದ ಜನರು ಅತ್ಯಂತ ಉತ್ಸಾಹದಿಂದ ನಾವು ಇದನ್ನು ಸಾಧಿಸುತ್ತೇವೆ ಎಂದು ಧ್ವನಿಗೂಡಿಸಿದರು. 2047ರ ವೇಳೆಗೆ ವಿಕಸಿತ ಭಾರತ ಗುರಿಯನ್ನು ತಲುಪುವುದು, ಆತ್ಮನಿರ್ಭರ ಭಾರತ ನಿರ್ಮಾಣ, ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವುದು, ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸುವುದು ಹಾಗೂ ದೇಶವನ್ನು ಬಾಹ್ಯಾಕಾಶ ರಂಗದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದು ನಮ್ಮ ಪ್ರಮುಖ ಗುರಿಗಳು ಎಂದು ಪ್ರಧಾನಿ ಕರೆ ನೀಡಿದರು. ಜನರ ಈ ಶಕ್ತಿ ಮತ್ತು ಆತ್ಮವಿಶ್ವಾಸ ನಿಜಕ್ಕೂ ನಂಬಲಸಾಧ್ಯವಾದದ್ದು ಎಂದು ಅವರು ಹರ್ಷ ವ್ಯಕ್ತಪಡಿಸಿದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net