ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ತಿರುಮಾವಳವನ್, ಪೊಲೀಸ್ ಇಲಾಖೆಯ ಅನುದಾನ ಕುರಿತ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರಿಸುವಾಗ, ಮಾಜಿ ಸಿಎಂ ಹಾಗೂ ಡಿಎಂಕೆ ನಾಯಕ ಸ್ಟಾಲಿನ್ ಅವರನ್ನು ಅಣಕಿಸುವಂತೆ ಪ್ರದರ್ಶಿಸಿದ ಬಾಡಿ ಲ್ಯಾಂಗ್ವೇಜ್ ಉದ್ದೇಶಪೂರ್ವಕವಲ್ಲ ಎಂದು ಅವರ ಕಡೆಯಿಂದ ಸ್ಪಷ್ಟನೆ ನೀಡಲಾಗಿದೆ. ಆದರೆ ವಿಸಿಕೆ ಪರವಾಗಿ ನಾವು ಸ್ಪಷ್ಟಪಡಿಸುವುದೇನೆಂದರೆ, ಇಂತಹ ನಡವಳಿಕೆಗಳು ಗೌರವಯುತ ರಾಜಕೀಯದ ಸಂಕೇತವಲ್ಲ ಮತ್ತು ಮಾನವ ಘನತೆಗೆ ವಿರುದ್ಧವಾದದ್ದು ಎಂದು ಬರೆದುಕೊಂಡಿದ್ದಾರೆ.