ದೇಹದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ರಿಯಾಳ ಬೆರಳುಗಳನ್ನು ಕತ್ತರಿಸಿದ್ದು, ಆಕೆಯ ತಲೆಯನ್ನು ದೇಹದಿಂದ ಬೇರ್ಪಡಿಸಲಾಗಿತ್ತು. ರುಂಡ ಇಲ್ಲದ ದೇಹವನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ಶೋಧದ ಬಳಿಕ, ಅಪಾರ್ಟ್ಮೆಂಟ್ನ ಫ್ರಿಡ್ಜ್ನಲ್ಲಿದ್ದ ಪ್ಲಾಸ್ಟಿಕ್ ಚೀಲವೊಂದರಲ್ಲಿ ರಿಯಾಳ ಕತ್ತರಿಸಿದ ತಲೆ ಪತ್ತೆಹಚ್ಚಿದರು. ಪ್ರಕರಣ ದಾಖಲಿಸಿಕೊಂಡ ತಕ್ಷಣವೇ ತಲೆಮರಿಸಿಕೊಂಡಿದ್ದ ಪತಿ ರಾಮಾನುಜ್, ತಾನೇ ಖುದ್ದಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಪ್ರಸ್ತುತ, ತನಿಖೆ ಚುರುಕಾಗಿ ನಡೆಯುತ್ತಿದೆ,(ಏಜೆನ್ಸೀಸ್).