ಜಿಡಿಪಿ ದರವನ್ನು ಕೃತಕವಾಗಿ ಹೆಚ್ಚಿಸುವ ಉದ್ದೇಶ ಸರ್ಕಾರಕ್ಕಿದ್ದರೆ, ಅದು ಮೊದಲು ಖಾಸಗಿ ಬಳಕೆ ಪ್ರಮಾಣವನ್ನು ಹೆಚ್ಚಿಸಿ ತೋರಿಸುತ್ತಿತ್ತು ಎಂದಿರುವ ಭಲ್ಲಾ, ಬಳಕೆ ಪ್ರಮಾಣವನ್ನು ಅಳೆಯುವುದು ಕಷ್ಟಕರವಾಗಿರುವುದರಿಂದ, ದತ್ತಾಂಶವನ್ನು ಹೆಚ್ಚಿಸಿ ತೋರಿಸಲು ಬಯಸುವ ಯಾವುದೇ ಸರ್ಕಾರಕ್ಕೆ ಇದು ಸುಲಭದ ಮಾರ್ಗವಾಗಿರುತ್ತದೆ. ಆದರೆ, ಪರಿಷ್ಕೃತ ದತ್ತಾಂಶದಲ್ಲಿ ಹಳೆಯ ಅಂಕಿ-ಅಂಶಗಳಿಗಿಂತ ಬಳಕೆಯ ಪ್ರಮಾಣವನ್ನು ಕಡಿಮೆ ತೋರಿಸಲಾಗಿದೆ. ಇದು ಜಿಡಿಪಿ ದರವನ್ನು ಕೃತಕವಾಗಿ ಹೆಚ್ಚಿಸಲು ಪರಿಷ್ಕರಣೆ ಮಾಡಲಾಗಿದೆ ಎಂಬ ವಾದವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ವಿವರಿಸಿದರು.