ಅಭಿಜಿತ್ ದಿಪ್ಕೆ ಅಜ್ಜಿ ಸಾವಿತ್ರಿಭಾಯಿ ನಿಧನ: ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ; CJP ಸ್ಥಾಪಕ ಮುಂಬೈಗೆ ವಾಪಸ್​? Abhijit Dipke Grandmother

ಸಿಜೆಪಿ ಸ್ಥಾಪಕ ಅಭಿಜಿತ್ ದಿಪ್ಕೆ ಅಜ್ಜಿ ಸಾವಿತ್ರಿಭಾಯಿ ನಿಧನ. ಸ್ವಗ್ರಾಮ ಶಾಂತುಕ್ ಪಿಂಪ್ರಿಯಲ್ಲಿ ಅಂತ್ಯಸಂಸ್ಕಾರ; ದೆಹಲಿ ಪೊಲೀಸರ ವಶದಲ್ಲಿರುವ ನಾಯಕ ಅಂತಿಮ ದರ್ಶನಕ್ಕೆ ಮರಳಲಿದ್ದಾರಾ? ಪೂರ್ಣ ವಿವರ ಇಲ್ಲಿದೆ.
Savitribai Shankar Dipke, grandmother of CJP founder Abhijit Dipke, has passed away due to age-related illness.
ವಯೋಸಹಜ ಕಾಯಿಲೆಯಿಂದ ನಿಧನರಾದ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಅವರ ಅಜ್ಜಿ ಸಾವಿತ್ರಿಭಾಯಿ ಶಂಕರ್ ದಿಪ್ಕೆ
Published on: 

ಮುಂಬೈ: ದೇಶದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ (SIR) ನೀತಿಯನ್ನು ಕೂಡಲೇ ಕೈಬಿಡುವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂಬ ಆಗ್ರಹವನ್ನು ಮುಂದಿಟ್ಟುಕೊಂಡು, ಶನಿವಾರ (ಅ.10) ಕಾಕ್ರೋಚ್​ ಜನತಾ ಪಾರ್ಟಿ (CJP) ದೆಹಲಿಯ ಜಂತರ್​-ಮಂತರ್​ನಲ್ಲಿ ಬೃಹತ್​ ಪ್ರತಿಭಟನೆ ನಡೆಸಲು ಮುಂದಾಗಿದೆ.

ಆದರೆ, ಈ ಪ್ರತಿಭಟನೆ ಬೆನ್ನಲ್ಲೆ ಕಾಕ್ರೋಚ್​ ಪಾರ್ಟಿ ಸ್ಥಾಪಕ ಅಭಿಜಿತ್​ ದಿಪ್ಕೆ ಅವರ ಅಜ್ಜಿ ಸಾವಿತ್ರಿಭಾಯ್​ ಶಂಕರ್ ದಿಪ್ಕೆ ನಿಧನರಾಗಿದ್ದಾರೆಂಬ ಸುದ್ದಿ ವರದಿಯಾಗಿದೆ. ಮಹಾರಾಷ್ಟ್ರದ ಹಿಂಗೋಳಿ ಜಿಲ್ಲೆಯ ಶಾಂತುಕ್​ ಪಿಂಪ್ರಿಯಲ್ಲಿ ವಾಸವಿದ್ದ ಸಾವಿತ್ರಿಭಾಯಿ ವಯೋಸಹಜ ಕಾಯಿಲೆಯಿಂದ ಸಾವಿಗೀಡಾಗಿದ್ದಾರೆಂದು ತಿಳಿದು ಬಂದಿದೆ.

ಪ್ರಸ್ತುತ ಅಭಿಜಿತ್​ ದಿಪ್ಕೆ ದೆಹಲಿ ಪೊಲೀಸರ ವಶದಲ್ಲಿದ್ದು, ಈಗ, ತಮ್ಮ ಅಜ್ಜಿಯ ಶವವನ್ನು ನೋಡಲು, ಮುಂಬೈಗೆ ಮರಳಲಿದ್ದಾರಾ? ಅಥವಾ ದೆಹಲಿಯಲ್ಲಿ ಪ್ರತಿಭಟನೆ ಮುಂದುವರಿಸಲಿದ್ದಾರಾ? ಎನ್ನುವುದು ಮಿಲಿಯನ್​ ಡಾಲರ್​ ಪ್ರಶ್ನೆಯಾಗಿ ಕಾಡುತ್ತಿದೆ. ಸಾವಿತ್ರಿಭಾಯಿ ಅವರ ನಿಧನವಾರ್ತೆ ತಲುಪುತ್ತಲೇ, ಮುಂಬೈನಲ್ಲಿರುವ ಅಭಿಜಿತ್​ ಅವರ ತಂದೆ, ಭಗವಾನ್​ ದಿಪ್ಕೆ ಹಾಗು ತಾಯಿ ಅನಿತಾ ದಿಪ್ಕೆ, ತಮ್ಮ ಮೂಲ ಗ್ರಾಮವಾದ ಶಾಂತುಕ್​ ಪಿಂಪ್ರಿಗೆ ತೆರಳಿದ್ದಾರೆಂದು ಹೇಳಲಾಗುತ್ತಿದೆ.

ಅರೆಸ್ಟ್​ಗೆಲ್ಲಾ ನಾನು ಹೆದರಲ್ಲ!

ಜಂತರ್​-ಮಂತರ್​ನಲ್ಲಿ ಭಾರೀ ಪ್ರತಿಭಟನೆಗೆ ಕರೆಕೊಟ್ಟಿದ್ದ ಅಭಿಜಿತ್​ ದಿಪ್ಕೆ ಸೇರಿ ಸುಮಾರು 50 ಜನರ ಪ್ರತಿಭಟನಾಕಾರರನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ನಲ್ಲಿಯೇ ವಶಕ್ಕೆ ಪಡೆಯಲಾಗಿದೆ. ತಮ್ಮ ವಿಮಾನದತ್ತ ದೆಹಲಿ ಪೊಲೀಸರು ಆಗಮಿಸುತ್ತಿದ್ದಂತೆ, ಅಭಿಜಿತ್​ ದಿಪ್ಕೆ, ದಯವಟ್ಟು ಬನ್ನಿ, ನಾನು ಅರೆಸ್ಟ್​ ಆಗುವ ಸಲುವಾಗಿಯೇ ಇಲ್ಲಿಗೆ ಬಂದಿದ್ದೇನೆ. ಬನ್ನಿ ನನ್ನನ್ನು ಅರೆಸ್ಟ್​ ಮಾಡಿ ಎಂದು ಅಭಿಜಿತ್ ದಿಪ್ಕೆ ಪೊಲೀಸರನ್ನು ಉದ್ದೇಶಿಸಿ ಮಾತನಾಡಿದ್ದಾನೆ.

Also Read
ದೆಹಲಿಯಲ್ಲಿ ಭುಗಿಲೆದ್ದ ‘ಸಿಜೆಪಿ’ ಆಕ್ರೋಶ: ಕನ್ನಾಟ್ ಪ್ಲೇಸ್‌ನಲ್ಲಿ ಕಲ್ಲು ತೂರಾಟ, ಇಬ್ಬರು ಪೊಲೀಸರ ಸ್ಥಿತಿ ಗಂಭೀರ! Delhi Stone Pelting
Savitribai Shankar Dipke, grandmother of CJP founder Abhijit Dipke, has passed away due to age-related illness.

ಇದಕ್ಕೆ ಉತ್ತರಿಸಿದ ದೆಹಲಿ ಪೊಲೀಸರು, ನಾವು ನಿಮ್ಮನ್ನು ಅರೆಸ್ಟ್​ ಮಾಡುತ್ತಿಲ್ಲ, ಅರೆಸ್ಟ್​ ಮಾಡಲೂ ಬಂದಿಲ್ಲ. ದಯವಿಟ್ಟು ನಮಗೆ ಸಹಕರಿಸಿ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ವಿಮಾನದಲ್ಲಿದ್ದ ಇತರ ಪ್ರತಿಭಟನಾಕಾರರು, ದೆಹಲಿ ಪೊಲೀಸರು, ತಮ್ಮನ್ನು ವಶಕ್ಕೆ ಪಡೆಯಲು ಬಂದಿದ್ದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ನಂತರ ಅಭಿಜಿತ್ ದಿಪ್ಕೆಯನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದಾಗ, ನಾನು ಈ ಅರೆಸ್ಟ್​ಗೆಲ್ಲಾ ಹೆದರುವವನಲ್ಲ, ಎಂದು ಮಹಿಳಾ ಪೊಲೀಸ್​ ವಿರುದ್ಧ ದಿಪ್ಕೆ ಕಿರಿಚುತ್ತಿರುವುದನ್ನು ವೈರಲ್ ವಿಡಿಯೋನಲ್ಲಿ ನೋಡಬಹುದಾಗಿದೆ.

ಕನ್ನೋಟ್​ ಪ್ಲೇಸ್‌ನಲ್ಲಿ ಕಲ್ಲು ತೂರಾಟ!

ದೆಹಲಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ಸಿಜೆಪಿ ನಾಯಕರಾದ ಅಭಿಜಿತ್​ ದಿಪ್ಕೆ, ಆಶುತೋಷ್​ ರಾಂಕಾ, ಸೌರವ್​ ದಾಸ್​ ಸೇರಿದಂತೆ ಸುಮಾರು 50 ಜನರನ್ನು ವಶಕ್ಕೆ ಪಡೆದಿದ್ದಾರೆ. ತಮ್ಮ ನೆಚ್ಚಿನ ನಾಯಕರನ್ನು ಪ್ರತಿಭಟನಾ ಸ್ಥಳಕ್ಕೆ ಬರದಂತೆ ತಡೆದಿದ್ದಕ್ಕೆ, ಕನ್ನೋಟ್​ ಪ್ಲೇಸ್​ನಲ್ಲಿ ಜಮಾವಣೆಗೊಂಡಿದ್ದ ಪ್ರತಿಭಟನಾಕಾರರು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಪೊಲೀಸರು ತೀವ್ರ ಗಾಯಗೊಂಡಿದ್ದು, ಕಲ್ಲು ತೂರಿದ ಸುಮಾರು 50 ಕ್ಕೂ ಅಧಿಕ ಜನರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net