ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಬೈಕ್ ಸವಾರ; ರಸ್ತೆಗೆ ಬಿದ್ದ ಮಹಿಳೆಯನ್ನು ಬಿಟ್ಟು ಎಸ್ಕೇಪ್! | Bike rider escapes

ಉತ್ತರಾಖಂಡದ ರುದ್ರಾಪುರದಲ್ಲಿ ಟ್ರಾಫಿಕ್ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರ, ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ರಸ್ತೆಗೆ ಬಿದ್ದರೂ ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Uttarakhand Bike rider escapes
ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರನ ಯತ್ನ
Published on: 

Uttarakhand Traffic Police: ಉತ್ತರಾಖಂಡದಲ್ಲಿ ಟ್ರಾಫಿಕ್ ಪೊಲೀಸರಿಂದ ಬಚಾವ್ ಆಗಲು ಯತ್ನಿಸಿದ ಬೈಕ್ ಸವಾರನೊಬ್ಬ, ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ರಸ್ತೆಗೆ ಬಿದ್ದರೂ ಬೈಕ್ ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರುದ್ರಾಪುರದ ರಸ್ತೆಯೊಂದರಲ್ಲಿ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್ ಸವಾರನನ್ನು ತಡೆಯಲು ಮುಂದಾಗಿದ್ದಾರೆ. ಆದರೆ, ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸವಾರ ಬೈಕ್ ನಿಲ್ಲಿಸದೆ ವೇಗವಾಗಿ ಮುಂದೆ ಚಲಾಯಿಸಿದ್ದಾನೆ.

ರಸ್ತೆಗೆ ಬಿದ್ದ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ

ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬೈಕ್ ಸವಾರ ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಬೈಕ್ ತಿರುಗಿಸಿದ್ದಾನೆ. ಈ ವೇಳೆ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಆದರೆ, ಮಹಿಳೆ ಬಿದ್ದರೂ ಬೈಕ್ ನಿಲ್ಲಿಸದ ಸವಾರ, ಹಿಂದಿರುಗಿಯೂ ನೋಡದೆ ಅಲ್ಲಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ‘ಪ್ರತಿಭಟಿಸುವುದೇ ಅಪರಾಧವಾಗಿದೆ’; ಮೋದಿ ಸರ್ಕಾರದ ವಿರುದ್ಧ ಕಪಿಲ್ ಸಿಬಲ್ ವಾಗ್ದಾಳಿ! | Kapil Sibal on Modi

ಮಹಿಳೆಯ ನೆರವಿಗೆ ಬಂದ ಪೊಲೀಸರು

ಮಹಿಳೆ ರಸ್ತೆಗೆ ಬೀಳುತ್ತಿದ್ದಂತೆ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರು ತಕ್ಷಣ ಆಕೆಯ ನೆರವಿಗೆ ಧಾವಿಸಿದ್ದಾರೆ. ರಸ್ತೆಯ ಮೇಲಿದ್ದ ಮಹಿಳೆಯನ್ನು ಎತ್ತಿ, ಸಾಂತ್ವನ ಹೇಳಿ ಸಹಾಯ ಮಾಡಿದ್ದಾರೆ. ಮಹಿಳೆಗೆ ನೆರವಾದ ಪೊಲೀಸರ ಕಾರ್ಯ ಮತ್ತು ಬೈಕ್ ಸವಾರನ ಬೇಜವಾಬ್ದಾರಿಯ ವರ್ತನೆ ಘಟನೆಯ ವಿಡಿಯೋದಲ್ಲಿ ಸೆರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net