ತಾಯಿ ಹಾಲು ಮಗುವಿಗೆ ಸರ್ವಶ್ರೇಷ್ಠ

ಬಾಳೆಹೊನ್ನೂರಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ವೈದ್ಯ ಅಭ್ಯುದಯ್ ಉದ್ಘಾಟಿಸಿದರು.
ಬಾಳೆಹೊನ್ನೂರಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ವೈದ್ಯ ಅಭ್ಯುದಯ್ ಉದ್ಘಾಟಿಸಿದರು.
Published on
ಬಾಳೆಹೊನ್ನೂರು: ತಾಯಿ ಹಾಲು ಮಗುವಿಗೆ ಸರ್ವಶ್ರೇಷ್ಠವಾಗಿದ್ದು, ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಮಕ್ಕಳ ತಜ್ಞ ಡಾ.ಎಂ.ಬಿ.ರಮೇಶ್ ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಇನ್ನರ್‌ವ್ಹೀಲ್ ಕ್ಲಬ್ ಆಯೋಜಿಸಿದ್ದ ಸ್ತನ್ಯಪಾನ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ತಾಯಿ ಎದೆ ಹಾಲಿನಲ್ಲಿರುವ ಪ್ರೋಟೀನ್ ಮಗುವಿನ ಮೆದುಳು ಬೆಳವಣಿಗೆಗೆ ಸಹಕಾರಿಯಾಗಿದೆ. ಇದರಲ್ಲಿರುವ ಕೊಬ್ಬಿನ ಅಂಶವು ಮಗುವಿನ ನರಮಂಡಲ ವ್ಯವಸ್ಥೆ ಅಭಿವೃದ್ಧಿಯಾಗಲು ಸಾಧ್ಯವಿದೆ. ತಾಯಿ ಹಾಲನ್ನು ಹೆಚ್ಚು ಕುಡಿದ ಮಗುವಿನ ಬುದ್ದಿಮಟ್ಟವು ಹೆಚ್ಚಾಗಿರುತ್ತದೆ.
ಪ್ರಸವಪೂರ್ವ ಹೆರಿಗೆಯಾದ ತಾಯಿ ಎದೆ ಹಾಲಿನಲ್ಲಿ ಶಕ್ತಿ, ಪ್ರೋಟಿನ್, ಕೊಬ್ಬು, ಸೋಡಿಯಂ ಹಾಗೂ ಝಿಂಕ್ ಅಧಿಕ ಪ್ರಮಾಣದಲ್ಲಿರುತ್ತದೆ. ಎದೆ ಹಾಲು ಉಣಿಸುವುದರಿಂದ ತಾಯಿಗೂ ಸಾಕಷ್ಟು ಲಾಭಗಳಿವೆ ಹಾಗೂ ತಾಯಿ ಹಾಲಿನಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಅಭ್ಯುದಯ್ ಮಾತನಾಡಿ, ತಾಯಿ ಮಗುವಿಗೆ ಹಾಲುಣಿಸುವುದರಿಂದ ಮಗುವಿನ ಮತ್ತು ತಾಯಿ ನಡುವೆ ಉತ್ತಮ ಸಂಬಂಧ ಏರ್ಪಡುತ್ತದೆ. ತಾಯಿ ಆತ್ಮ ವಿಶ್ವಾಸವೇ ಹೆಚ್ಚು ಹಾಲು ಉತ್ಪತ್ತಿಯಾಗಲು ಕಾರಣವಾಗುತ್ತದೆ. ಮಗುವಿಗೆ ಹೆಚ್ಚಿನ ಸಮಯ ಹಾಲು ನೀಡುವುದರಿಂದ ಆರೋಗ್ಯ ವೃದ್ಧಿಗೆ ಪೂರಕವಾಗಲಿದೆ ಎಂದರು.
ಇನ್ನರ್‌ವ್ಹೀಲ್ ಅಧ್ಯಕ್ಷೆ ಸುಧಾಕರ್ ಮಾತನಾಡಿ, ವೈದ್ಯರ ಸಲಹೆಯಂತೆ ತಾಯಂದಿರು ಮಕ್ಕಳಿಗೆ ಹಾಲುಣಿಸುವ ಸೂಕ್ತ ಕ್ರಮ ಅನುಸರಿಸಿದರೆ ಮಗುವು ಆರೋಗ್ಯವಂತವಾಗಿ ಬೆಳೆಯಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ತಾಯಂದಿರಿಗೆ ಅನುಕೂಲವಾಗುವಂತೆ ಸನ್ಯಪಾನ ಸಪ್ತಾಹದ ಕಾರ್ಯಕ್ರಮ ಆಯೋಜಿಸಿದೆ ಎಂದರು.
ಇನ್ನರ್‌ವ್ಹೀಲ್ ಕ್ಲಬ್ ಕಾರ್ಯದರ್ಶಿ ನಂದಿನಿ ರಾಜೇಶ್, ಸದಸ್ಯರಾದ ಮೇನಕಾ, ಪಲ್ಲವಿ, ಸುಚಿತಾ ಹೆಗ್ಡೆ, ಸಹನಾ, ಸುಪ್ರಿಯಾ, ಸೀಮಾ, ಸವಿತಾ, ವಿದ್ಯಾ ಪೈ ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net