ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಕುಂಭಮೇಳದ ವೈರಲ್ ಹುಡಗಿ ಮೊನಾಲಿಸಾ!...Monalisa

monalisa
Published on

ಹೈದರಾಬಾದ್​​:  (Monalisa) ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಮಣಿಗಳನ್ನು ಮಾರಲು ಬಂದು ಅನಿರೀಕ್ಷಿತವಾಗಿ ಪ್ರಸಿದ್ಧಳಾದ ಮೊನಾಲಿಸಾ ಭೋಂಸ್ಲೆ ಈಗ ತೆಲಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ 16 ವರ್ಷದ ಮೊನಾಲಿಸಾ, ಪ್ರಯಾಗ್‌ರಾಜ್ ಮಹಾಕುಂಭ ಮೇಳದಲ್ಲಿ ವೈರಲ್​ ಆಗಿರುವ ವೀಡಿಯೋ ಮೂಲಕವಾಗಿ ಪರಿಚಿತರಾದರು. ನಂತರ ಈ ಖ್ಯಾತಿಯೊಂದಿಗೆ ಮೊನಾಲಿಸಾ ಹಿಂದಿ ಚಿತ್ರ ‘ದಿ ಡೈರಿ ಆಫ್ ಮಣಿಪುರ’ದಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟ ಮೋನಾಲಿಸಾ ಇದೀಗ ತೆಲೆಗು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಮಹಾಕುಂಭಮೇಳದಲ್ಲಿ ಮಣಿಗಳು ಮತ್ತು ಹಾರಗಳನ್ನು ಮಾರಾಟ ಮಾಡಲು ಮೊನಾಲಿಸಾ ತನ್ನ ಕುಟುಂಬದೊಂದಿಗೆ ಮಧ್ಯಪ್ರದೇಶದಿಂದ ಬಂದಿದ್ದರು. ಆದರೆ, ಅಲ್ಲಿನ ಕೆಲವರು ಮೊನಾಲಿಸಾಳನ್ನು ಗಮನಿಸಿ ವೀಡಿಯೊ ರೆಕಾರ್ಡ್ ಮಾಡಿದರು. ಅದು ಅವರನ್ನು ಜನಪ್ರಿಯಗೊಳಿಸಿತು. ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ತಮ್ಮ ಜೇನು ಕಣ್ಣುಗಳಿಂದ ನೆಟಿಜನ್‌ಗಳನ್ನು ಆಕರ್ಷಿಸಿದ ಹುಡುಗಿಗೆ ನಾಯಕಿಯಾಗಿ ಅವಕಾಶ ನೀಡಿದರು. ಅವರು ತಮ್ಮ ಚಿತ್ರದಲ್ಲಿ ಅವರಿಗೆ ಒಂದು ಪಾತ್ರವನ್ನು ನೀಡುವುದಾಗಿ ಘೋಷಿಸಿದರು. ಮೊನಾಲಿಸಾ ದಿ ಡೈರಿ ಆಫ್ ಮಣಿಪುರ ಚಿತ್ರದಲ್ಲಿ ಕಾಣಿಸಿಕೊಂಡರು. ಈಗ ಈ ಮೊನಾಲಿಸಾ ತೆಲುಗಿನಲ್ಲಿ ನಟಿಸುತ್ತಿದ್ದಾರೆ.

ಮೊನಾಲಿಸಾ ಲೈಫ್ ಎಂಬ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ..ಈ ಚಿತ್ರ ಇತ್ತೀಚೆಗೆ ಪೂಜಾ ಕಾರ್ಯಕ್ರಮಗಳೊಂದಿಗೆ ಪ್ರಾರಂಭವಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ, 'ಕ್ರಷ್' ಮತ್ತು 'ಇಟ್ಸ್ ಓಕೆ ಗುರು' ನಂತಹ ಚಿತ್ರಗಳಿಗೆ ಹೆಸರುವಾಸಿಯಾದ ನಾಯಕ ಚರಣ್ ಸಾಯಿ ಎದುರು ಮೊನಾಲಿಸಾ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಶ್ರೀ ವೆಂಗಮಾಂಬ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಂಜಯ್ಯ ಉಧಿನೇನೆ ಮತ್ತು ಉಷಾ ಉಧಿನೇನೆ ನಿರ್ಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net