

ರಿಯಾದ್: ಸೌದಿ ಅರೇಬಿಯಾ ಮತ್ತು ಹೂತಿ ಬಂಡುಕೋರರ ನಡುವಿನ ಸಂಘರ್ಷ ದಿನಗ ಕಳೆದಂತೆ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಅಕ್ಟೋಬರ್ 17 ರ ವರೆಗೆ ಸೌದಿ ಮತ್ತು ಭಾರತದ ನಡುವೆ ಎಲ್ಲಾ ರೀತಿಯ ವಿಮಾನ ಸಂಚಾರ ರದ್ದಾಗಿದ್ದು, ಸೌದಿಯಲ್ಲಿರುವ ಭಾರತೀಯರು ತಮ್ಮ ಸ್ಥಳದಿಂದ ಹೊರ ಬರದಂತೆ ಭಾರತೀಯ ರಾಯಭಾರ ಕಚೇರಿ ನಿರ್ದೇಶನ ನೀಡಿದೆ.
ಸೌದಿ ಅರೇಬಿಯಾದಲ್ಲಿ ಸದ್ಯ ಉದ್ವಿಗ್ನ ಪರಿಸ್ಥಿತಿ ಇರುವ ಕಾರಣ, ಭಾರತೀಯರು ಅದಷ್ಟು ಒಳಾಂಗಣ ಪ್ರದೇಶದಲ್ಲಿಯೇ ಇರುವಂತೆ ರಾಯಭಾರ ಕಚೇರಿ ತಿಳಿಸಿದ್ದು, ಸ್ಥಳೀಯ ಅಧಿಕಾರಿಗಳು ನೀಡುವ ಸಲಹೆ-ಸೂಚನೆಗಳನ್ನು ಪಾಲಿಸುವಂತೆ ಕೇಳಿಕೊಂಡಿದೆ.
ಕೆಲ ದಿನಗಳಿಮದ ರಿಯಾದ್ ಏರ್ಪೋರ್ಟ್ಅನ್ನು ಗುರಿಯಾಗಿಸಿಕೊಂಡಿರುವ ಹೂತಿಗಳು, ನಿರಂತರ ದಾಳಿ ನಡೆಸುತ್ತಿರುವ ಹಿನ್ನಲೆ ಅಕ್ಟೋಬರ್ 17 ರ ವರೆಗೆ ಭಾರತ ಮತ್ತು ಸೌದಿ ಅರೇಬಿಯಾ ನಡುವೆ ಯಾವುದೇ ವಿಮಾನಗಳು ಪ್ರಯಾಣ ಬೆಳೆಸುವುದಿಲ್ಲ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ರಾಯಭಾರ ಕಚೇರಿ ನೀಡಿರುವ ಮಾಹಿತಿ ಪ್ರಕಾರ, ಏರ್ ಇಂಡಿಯಾ, ಇಂಡಿಗೋ, ಆಕಾಶಾ ಏರ್ ವಿಮಾನಗಳು ರಿಯಾದ್, ಜೆಡ್, ದಾಮನ್ ಮದಿನಾಗಳಿಗೆ ಅಕ್ಟೋಬರ್ 17 ರ ವರೆಗೆ ಯಾವುದೇ ಹಾರಾಟ ನಡೆಸುತ್ತಿಲ್ಲ ಎಂದಿದೆ.
ಈಗಾಗಲೇ, ಟಿಕೆಟ್ ಬುಕ್ ಮಾಡಿದರವರು, ತಮ್ಮ ವಿಮಾನಯಾನದ ಬಗ್ಗೆ ವಿಮಾನಯಾನ ಸಂಸ್ಥೆ ಜತೆಗೆ ಸಂಪರ್ಕದಲ್ಲಿರಿ ಎಂದಿದೆ. ಹಾಗೂ ಭಾರತಕ್ಕೆ ತುರ್ತುಗಿ ಮರಳ ಬಯಸುವವರು, ಹತ್ತಿರದ ಗಲ್ಫ್ ದೇಶಗಳನ್ನು ತಲುಪಿ ಅಲ್ಲಿಂದ ಭಾರತವನ್ನು ಸೇರಬುಹುದೆಂದು ಮಾರ್ಗದರ್ಶನ ನೀಡಿದೆ.
ಆದರೆ, ಯಾವುದೇ ವಿಮಾನನಿಲ್ದಾಣವನ್ನು ಪ್ರವೇಶಿಸುವ ಮೊದಲು, ನಿಮ್ಮ ಟ್ರಾವೆಲ್ ಏಜೆಂಟ್ ಹಾಗೂ ಸ್ಥಳೀಯ ಆಡಳಿತ, ಪೊಲೀಸರಿಂದ ದೇಶದ ಪರಿಸ್ಥಿತಿ ಬಗ್ಗೆ ಸರಿಯಾದ ಮತ್ತು ಸಂಪೂರ್ಣ ಮಾಹಿತಿ ಪಡೆದುಕೊಂಡ ನಂತರವೇ ಪ್ರಯಾಣ ಆರಂಭಿಸಿ ಎಂದು ಸೂಚನೆ ನೀಡಿದೆ.
ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಅಂತಾರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಘಟನೆಯಲ್ಲಿ 12 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಮತ್ತು ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಭಾನುವಾರ(ಅ. 11) ವರದಿಯಾಗಿದೆ.
ನೆರೆಯ ಯೆಮನ್‌ನಲ್ಲಿ ಇರಾನ್ ಬೆಂಬಲಿತ ಹೂತಿ ಬಂಡುಕೋರರು ಈ ಕೃತ್ಯ ನಡೆಸಿದ್ದಾರೆ ಎಂದು ಸೌದಿ ನೇತೃತ್ವದ ಒಕ್ಕೂಟ ದೂರಿದೆ. ಇರಾನ್ ಯುದ್ಧ ಪ್ರಾರಂಭವಾದ ನಂತರ ಯಾವುದೇ ಗಲ್ಫ್ ಅರಬ್ ದೇಶದಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಹೂತಿಗಳು ಮತ್ತು ಸೌದಿ ಬೆಂಬಲಿತ ಯೆಮೆನ್ ಸರ್ಕಾರಿ ಪಡೆಗಳ ನಡುವಿನ ಹೋರಾಟ ಸಂಘರ್ಷವನ್ನು ಹೆಚ್ಚಿಸಿದೆ, (ಏಜೆನ್ಸೀಸ್).