ಐದು ವರ್ಷ ನಿದ್ದೆ ಮಾಡಿದ ಕಾಂಗ್ರೆಸ್‌ಗೆ ಈಗ ಮೇಕೆದಾಟು ನೆನಪಾಯ್ತ? ಕಾರಜೋಳ ಪ್ರಶ್ನೆ

karajola
Published on

ಬೆಂಗಳೂರು: ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪತ್ರಿಕಾಗೋಷ್ಠಿ ನಡೆಸಿ ಹಲವು ವಿಚಾರಗಳ ಬಗ್ಗೆ ಮಾಹಿತಿ ಹೊರಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ ನವರು ಏನು ಮಾಡದೆ ನಿರ್ಲಕ್ಷ್ಯ ಮಾಡಿ ಈಗ ಪಾದಯಾತ್ರೆ ಗಿಮಿಕ್ ಮಾಡುತ್ತಿದ್ದಾರೆ. ಈ ಪಾದಯಾತ್ರೆ ರಾಜಕೀಯ ಗಿಮಿಕ್ ಎಂದು ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.

ಫೋರ್ ಜಿ ಎಕ್ಸೆಂಕ್ಷನ್ ಕೊಡೋದಕ್ಕೆ ಐದು ವರ್ಷ ಬೇಕಾ?. ಟೆಂಡರ್ ಕರೆಯೋದಕ್ಕೆ ಐದು ವರ್ಷ ಬೇಕಾ?. ನೀವು ಡಿಪಿಆರ್ ರೆಡಿ ಮಾಡೋದಕ್ಕೆ ಐದು ವರ್ಷ ತೆಗೆದುಕೊಂಡಿದ್ದೀರಿ ಏಕೆ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಮಾಡಿದರು. ಇದೇ ಡಿಪಿಆರ್ ಮಾಡೋದಕ್ಕೆ ಕುಮಾರಸ್ವಾಮಿಯವರೇ ಬರಬೇಕಾಯ್ತಲ್ಲ ಎಂದರು. ಅಲ್ಲದೇ ಮೇಕೆದಾಟು ಪಾದಯಾತ್ರೆಯ ಸ್ಫೋಟಕ ದಾಖಲೆಯನ್ನು ಹಂತ-ಹಂತವಾಗಿ ಬಿಡುಗಡೆ ಮಾಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net