VIDEO| ಮಾಯಾಬಜಾರ್​ ಚಿತ್ರ ಲಿರಿಕಲ್​ ಹಾಡು ಬಿಡುಗಡೆ; ಪುನೀತ್​ ನಿರ್ಮಾಣದ ಚಿತ್ರಕ್ಕೆ ಯೋಗರಾಜ್​ ಭಟ್​ ಸಾಹಿತ್ಯ

MAYA BAJAR
Published on

ಬೆಂಗಳೂರು: ಪುನೀತ್​ ರಾಜ್​ಕುಮಾರ್​ ನಿರ್ಮಾಣದ ಬಹು ನಿರೀಕ್ಷಿತ ಚಿತ್ರ ಮಾಯಾಬಜಾರ್​ನ ಲಿರಿಕಲ್​ ಹಾಡು ಈಗ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ.

ತರಾ ತಿಗಡಿ ಪಾತಾಳ ಗರಡಿ...

ತಳುಕು ಬಳುಕು ಬೆಳ್ಳಂ ಬೆಳಕು...

ಲಕಾ ಲಕಾ ಲಕಾ ಲೋಕ ನಮ್ಮದು ಮಾಯಾಬಜಾರು..... ಎಂದು ಆರಂಭವಾಗುವ ಹಾಡಿಗೆ ಯೋಗರಾಜ ಭಟ್ಟ ಸಾಹಿತ್ಯ ಬರೆದಿದ್ದು, ಖ್ಯಾತ ಹಿನ್ನೆಲೆ ಗಾಯಕ ಎಸ್​.ಪಿ. ಬಾಲಸುಬ್ರಮಣ್ಯಂ ಅವರು ಧ್ವನಿಯಾಗಿದ್ದಾರೆ. ಮಿಧುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ.

ಪ್ರಕಾಶ್​ರಾಜ್​, ಅಚ್ಯುತನ್​, ಸುಧಾರಾಣಿ, ವಸಿಷ್ಟ ಸಿಂಹ, ಸಾಧು ಕೋಕಿಲಾ ಅವರಂತಹ ಘಟಾನುಘಟಿಗಳ ನಟನೆ ಚಿತ್ರದಲ್ಲಿದೆ. ‘ಪಿಆರ್​ಕೆ ಪ್ರೊಡಕ್ಷನ್ಸ್’ ನಿರ್ಮಾಣದ ‘ಮಾಯಾಬಜಾರ್’ ಸಿನಿಮಾದ ಟ್ರೇಲರ್​ ಇತ್ತೀಚೆಗೆ ಬಿಡುಗಡೆಯಾಗಿದ್ದು, ಒಂದೇ ದಿನಕ್ಕೆ 13 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿತ್ತು.

‘ಪಿಆರ್​ಕೆ ಅಂದರೆ, ಪಾರ್ವತಮ್ಮ ರಾಜ್​ಕುಮಾರ್. ಪುನೀತ್ ರಾಜ್​ಕುಮಾರ್ ಎನ್ನುವುದು ಪ್ರೆಸೆಂಟ್ ಅಷ್ಟೇ. ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಚೆನ್ನಾಗಿ ಕಥೆ ಮಾಡಿದ್ದಾರೆ ಎಂದು ಪುನೀತ್ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಹೇಳಿದ್ದರು.

‘ಒಳ್ಳೆಯ ಉದ್ದೇಶದೊಂದಿಗೆ ಹೊಸ ಪ್ರಯತ್ನದ ಪ್ರಯೋಗಾತ್ಮಕ ಸಿನಿಮಾ ಮಾಡಿದ್ದೇವೆ. ಮನರಂಜನೆಗಂತೂ ಕೊರತೆ ಇಲ್ಲ’ ಎಂದವರು ನಟ ರಾಜ್ ಬಿ. ಶೆಟ್ಟಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net