

ನವದೆಹಲಿ: ವನ್ಯ ಜೀವಿ ಸಾಹಸಿ ನಿರ್ದೇಶಕ ಬೇರ್ ಗ್ರೀಲ್ಸ್ನ "ಮ್ಯಾನ್ ವರ್ಸಸ್ ವೈಲ್ಡ್" ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಪ್ರೋಮೋವನ್ನು ಇಂದು ಬೆಳಗ್ಗೆ ಡಿಸ್ಕವರಿ ಚಾನಲ್ ಟ್ವೀಟ್ ಮಾಡಿದ್ದು, ಇಲ್ಲಿಯವರೆಗೆ 6.1 ಸಾವಿರ ಮಂದಿ ವೀಕ್ಷಿಸಿದ್ದು 3 ಸಾವಿರಕ್ಕೂ ಹೆಚ್ಚ ಜನ ಇದನ್ನು ರೀಟ್ವೀಟ್ ಮಾಡಿದ್ದಾರೆ. ಕಾಯಕ್ರಮ ಮಾರ್ಚ್ 23 ರಂದು ರಾತ್ರಿ 8ಗಂಟೆಗೆ ಡಿಸ್ಕವರಿ ಚಾನಲ್ನಲ್ಲಿ ಪ್ರಸಾರವಾಗಲಿದೆ.
ಇನ್ ಟು ದಿ ವೈಲ್ಡ್ ವಿದ್ ಬೇರ್ ಗ್ರಿಲ್ಸ್ ಸರಣಿಯ ಮೊದಲ ಕಾರ್ಯಕ್ರಮ ಇದಾಗಿದ್ದು, 40 ಸೆಕೆಂಡ್ಗಳ ಪ್ರೋಮೋ ಒಂದನ್ನು ಬಿಡುಗಡೆ ಮಾಡಿದೆ. "ನೀವು ತಯಾರಾಗಿ, ಇದು ನಿಮ್ಮ ಮನಸ್ಸನ್ನು ಉಲ್ಲಾಸಿತಗೊಳಿಸಲಿದೆ" ಎಂದು ಬೇರ್ ಗ್ರೀಲ್ಸ್ ಪ್ರೋಮೊವಿನಲ್ಲಿ ಹೇಳಿದ್ದಾರೆ.
ಅಲ್ಲದೆ ಸೂಪರ್ಸ್ಟಾರ್ ರಜನೀಕಾಂತ್ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳುವ ಪ್ರೋಮೋದಲ್ಲಿ ರಜನಿಕಾಂತ್ ಅವರು ಬೈಕ್ ಮೇಲೆ ತಮ್ಮದೇ ಸ್ಟೈಲ್ನಲ್ಲಿ ಆಗಮಿಸುತ್ತಾರೆ.
ಬಂಡೀಪುರ ಹಾಗೂ ಸುತ್ತಮುತ್ತಲ ಅರಣ್ಯದಲ್ಲಿ ಚಿತ್ರೀಕರಣಗೊಂಡ "ಮ್ಯಾನ್ ವರ್ಸಸ್ ವೈಲ್ಡ್" ಕಾರ್ಯಕ್ರಮದಲ್ಲಿ ತಲೈವಾ ರಜನಿಕಾಂತ್ ಅಲ್ಲದೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ನಟಿಸಿದ್ದರು. (ಏಜೆನ್ಸೀಸ್)