

ನವದೆಹಲಿ: ಕಳೆದ ತಿಂಗಳಷ್ಟೇ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಮತ್ತು ವನ್ಯ ಜೀವಿ ಸಾಹಸ ನಿರ್ದೇಶಕ ಬೇರ್ ಗ್ರೀಲ್ಸ್ ಅವರು ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ಶೂಟಿಂಗ್ ನಡೆಸಿದ್ದು ಭಾರಿ ಸುದ್ದಿಯಾಗಿತ್ತು.
ಶೂಟಿಂಗ್ ಏನೋ ಮುಗಿಯಿತು ಮತ್ತೆ ಕಾರ್ಯಕ್ರಮ ಯಾವಾಗ ಎಂಬ ಕುತೂಹಲ ಎಲ್ಲರಲ್ಲೂ ಸಹ ಮೂಡಿದೆ. ಇದೀಗ ಸ್ವತಃ ಬೇರ್ ಗ್ರೀಲ್ಸ್ ಅವರೇ ಉತ್ತರ ನೀಡಿದ್ದು, ಕಾರ್ಯಕ್ರಮದ ಮೋಷನ್ ಪೋಸ್ಟರ್ ವಿಡಿಯೋವನ್ನು ಬಿಡುಗಡೆ ಮಾಡಿ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಮೋಷನ್ ಪೋಸ್ಟರ್ ವಿಡಿಯೋ ಶೇರ್ ಮಾಡಿಕೊಂಡಿದ್ದು, ವೈಲ್ಡ್ ವಿತ್ ಬೇರ್ ಗ್ರೀಲ್ಸ್ ಕಾರ್ಯಕ್ರಮ ಮೂಲಕ ರಜಿನಿಕಾಂತ್ ಅವರ ಕಿರುತೆರೆ ಪಾದರ್ಪಣೆಯ ಬ್ಲಾಕ್ಬಸ್ಟರ್ ಕಾರ್ಯಕ್ರಮದ ತಯಾರಿ ನಡೆಯುತ್ತಿದೆ. ಅದರ ಮೋಷನ್ ಪೋಸ್ಟರ್ ಝಲಕ್ ಇದಾಗಿದ್ದು, ಜಾಗತಿಕವಾಗಿ ನಾನು ಸಾಕಷ್ಟು ನಟರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ, ರಜಿನಿ ನನಗೆ ತುಂಬಾ ವಿಶೇಷ. ಲವ್ ಇಂಡಿಯಾ ಎಂದು ಬರೆದು #ThalaivaOnDiscovery ಎಂದು ಹ್ಯಾಶ್ಟ್ಯಾಗ್ ನೀಡಿದ್ದಾರೆ.
ಈಗಾಗಲೇ ಮೋಷನ್ ಪೋಸ್ಟರ್ ವಿಡಿಯೋವನ್ನು 1.95 ಲಕ್ಷ ಮಂದಿ ವೀಕ್ಷಣೆ ಮಾಡಿದ್ದು, ಏಳು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದಾರೆ. (ಏಜೆನ್ಸೀಸ್)