ಕೆಂಪು ಕೋಟೆಯಲ್ಲಿ 1.5 ಕೋಟಿ ರೂ. ಮೌಲ್ಯದ 'ಚಿನ್ನ'ದ ಕಲಶ ಕಳ್ಳತನ ಮಾಡಿದ್ದ ವ್ಯಕ್ತಿಯ ಬಂಧನ| theft

Untitled design
Published on

theft ; ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಸಂಕೀರ್ಣದಲ್ಲಿ ನಡೆದ ಜೈನ ಕಾರ್ಯಕ್ರಮದಿಂದ ಸುಮಾರು 1.5 ಕೋಟಿ ರೂ. ಮೌಲ್ಯದ ಧಾರ್ಮಿಕ ವಸ್ತುಗಳನ್ನು ಕಳ್ಳತನ ಮಾಡಿದ್ದಕ್ಕಾಗಿ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ವರದಿಗಳ ಪ್ರಕಾರ, ಭೂಷಣ್ ವರ್ಮಾ ಎಂದು ಗುರುತಿಸಲಾದ ಆರೋಪಿಯನ್ನು ಹಾಪುರದಲ್ಲಿ ಬಂಧಿಸಲಾಗಿದೆ. ಜೈನ ಅರ್ಚಕನ ವೇಷದಲ್ಲಿ ಬಂದ ಆರೋಪಿ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾನೆ. ಆರೋಪಿ ಭೂಷಣ್ ವರ್ಮಾ ಕಳೆದ ವಾರ ಸುಮಾರು 760 ಗ್ರಾಂ ತೂಕದ ಚಿನ್ನದ 'ಝರಿ' ಮತ್ತು ಚಿನ್ನದ ತೆಂಗಿನಕಾಯಿ ಹಾಗೂ ವಜ್ರಗಳು, ಪಚ್ಚೆಗಳು ಮತ್ತು ಮಾಣಿಕ್ಯಗಳಿಂದ ಕೂಡಿದ 115 ಗ್ರಾಂ ಚಿನ್ನದ 'ಝರಿ'ಯನ್ನು ಕದಿಯುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ.

(ಏಜೆನ್ಸೀಸ್)

ಈಗಾಗಲೇ ವರ್ಮಾ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ. ಘಟನೆಯ ನಂತರ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 303 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ, ಸಮಗ್ರ ತನಿಖೆಯನ್ನು ಪ್ರಾರಂಭಿಸಲಾಗಿದೆ.

ಆ.15ರಿಂದ ಸೆ.9ರ ವರೆಗೆ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಹತ್ವದ ಧಾರ್ಮಿಕ ಆಚರಣೆಯಾದ 'ದಸಲಕ್ಷಣ ಮಹಾಪರ್ವ'ದ ಸಂದರ್ಭದಲ್ಲಿ ಸೆಪ್ಟೆಂಬರ್ 3 ರಂದು ಬೆಲೆಬಾಳುವ ವಸ್ತುಗಳನ್ನು ಆತ ಕದ್ದಿದ್ದಾನೆ ಎಂದು ಆರೋಪಿಸಲಾಗಿದೆ. ಕದ್ದ ಧಾರ್ಮಿಕ ವಸ್ತುಗಳು ಉದ್ಯಮಿ ಸುಧೀರ್ ಜೈನ್ ಅವರ ಆಸ್ತಿಯಾಗಿದ್ದು, ಅವರು ದೈನಂದಿನ ಪ್ರಾರ್ಥನೆಗಾಗಿ ಅವುಗಳನ್ನು ಸ್ಥಳಕ್ಕೆ ತಂದಾಗ ಕಳ್ಳತನ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net