

ಬೆಂಗಳೂರು: ಕರೊನಾ ಸೋಂಕು ತಡೆಗಾಗಿ ಏ.14ರವರೆಗೆ ಲಾಕ್ಡೌನ್ ಘೋಷಣೆ ಹಿನ್ನೆಲೆಯಲ್ಲಿ ಮದ್ಯ ಕಾಳಸಂತೆ ದಂಧೆಕೋರರ ವಿರುದ್ಧ ಅಬಕಾರಿ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿದೆ. ಮಾ. 27 ರಿಂದ ಏ.5ರ ನಡುವೆ ರಾಜ್ಯವ್ಯಾಪಿ 6,915 ಕಡೆಗಳಲ್ಲಿ ದಾಳಿ ನಡೆಸಿ 292 ಪ್ರಕರಣ ದಾಖಲಿಸಿ 123 ಮಂದಿಯನ್ನು ಬಂಧಿಸಲಾಗಿದೆ. 5 ಸಾವಿರ ಲೀಟರ್ ಮದ್ಯ ವಶಕ್ಕೆ ಪಡೆದಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದ್ದರೂ ಕೆಲ ಬಾರ್ ಮತ್ತು ವೈನ್ಸ್ಟೋರ್ಗಳಲ್ಲಿದ್ದ ಮದ್ಯವನ್ನು ಕಾನೂನುಬಾಹಿರವಾಗಿ ಕಾಳಸಂತೆ ಮಾರಾಟಗಾರರಿಗೆ ಹೆಚ್ಚಿನ ಬೆಲೆಗೆ ಪೂರೈಕೆ ಮಾಡಲಾಗಿದೆ. ಬಳಿಕ ದಿನಸಿ ಅಂಗಡಿ, ಪೆಟ್ಟಿ ಅಂಗಡಿ ಕೆಲವರು ಮನೆಗಳಲ್ಲಿ ಮದ್ಯವಿಟ್ಟುಕೊಂಡು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ. 1,465 ಲೀ. ಬಿಯರ್, 632 ಲೀ. ವೈನ್ ಸೇರಿ5,021 ಲೀಟರ್ ಮದ್ಯ
ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ವಲಯದಲ್ಲಿ ಅತಿಹೆಚ್ಚು ಕಡೆ (1,841 ದಾಳಿ) ನಡೆಸಲಾಗಿದೆ. 50 ಪ್ರಕರಣ ದಾಖಲಿಸಿ 32 ಮಂದಿಯನ್ನು ಬಂಧಿಸಿ 3,587 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.