

ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದಿಂದಾರೂ ಬುದ್ಧಿ ಕಲಿತುಕೊಳ್ಳಿ, ಹಮಾಸ್ ಮಾದರಿಯಲ್ಲೇ ನಾವು ದಾಳಿ ನಡೆಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಎಚ್ಚರಿಕೆ ನೀಡಿದ್ದಾನೆ.
ಇಸ್ರೇಲ್ನಲ್ಲಿ ಹಮಾಸ್ ದಾಳಿಯಿಂದ ಪಾಠ ಕಲುಯುವಂತೆ ಪನ್ನು ಭಾರತ ಸರ್ಕಾರ ಹಾಗೂ ಪಂಜಾಬ್ ಸಿಎಂ ಮಾನ್ಗೆ ಹೇಳಿದ್ದಾನೆ. ಪಂಜಾಬ್ಗೋಸ್ಕರ ಹಮಾಸ್ ರೀತಿಯಲ್ಲೇ ದಾಳಿ ನಡೆಸುತ್ತೇವೆ ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಬೆದರಿಕೆ ಹಾಕಿರುವ ಪನ್ನು, 40 ಸೆಕೆಂಡುಗಳ ವಿಡಿಯೋದಲ್ಲಿ, ನ್ನು ಭಾರತದ ವಿರುದ್ಧವಾಗಿ ಮಾತನಾಡಿದ್ದಾನೆ. ವಿಡಿಯೋದಲ್ಲಿ ಬೆದರಿಕೆ ಹಾಕಿರುವ ಪನ್ನು ಪಂಜಾಬ್ನ್ನು ಭಾರತದ ಭಾಗವೆಂದು ಪರಿಗಣಿಸುವುದಿಲ್ಲ ಅದನ್ನು ಭಾರತದಿಂದ ಮುಕ್ತಗೊಳಿಸಲು ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತೇವೆ ಎಂದಿದ್ದಾನೆ.ಪ್ಯಾಲೆಸ್ತೀನ್ನಂತೆ ಹಿಂಸಾಚಾರವನ್ನು ಪ್ರಾರಂಭಿಸಿದರೆ ಪರಿಸ್ಥಿತಿ ವಿನಾಶಕಾರಿಯಾಗುತ್ತದೆ, ಪಂಜಾಬ್ ಜನರು ಸಾಯುವ ಸ್ಥಿತಿ ಬರಲಿದೆ ಎಂದಿದ್ದಾನೆ.
NIA ಅಧಿಕಾರಿಗಳು ಇತ್ತೀಚೆಗಷ್ಟೆ ಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಆಸ್ತಿಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿತ್ತು ಆತ ನಿಷೇಧಿತ ಸಂಘಟನೆಯ ಸಿಖ್ ಫಾರ್ ಜಸ್ಟಿಸ್ನ ಮುಖಂಡ. ಚಂಡೀಗಢ ಮತ್ತು ಅಮೃತಸರದಲ್ಲಿರುವ ಆತನ ಆಸ್ತಿಯನ್ನು ಎನ್ಐಎ ವಶಪಡಿಸಿಕೊಂಡಿದೆ. ಪನ್ನು ಅಮೃತಸರ ನಿವಾಸಿಯಾಗಿದ್ದು, ಆತನ ಸುಳಿವು ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಎನ್ಐಎ ಘೋಷಿಸಿದೆ.
ಉಗ್ರಗಾಮಿ ಗುರುಪತ್ವಂತ್ ಸಿಂಗ್ ಪನ್ನು ಕೆನಡಾದಲ್ಲಿ ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಪನ್ನುನ ಅಪರಾಧಗಳ ಬಗ್ಗೆ ಕೆನಡಾಕ್ಕೆ ಹಲವಾರು ಬಾರಿ ತಿಳಿಸಲಾಗಿದೆ. ಆದರೆ ಕೆನಡಾ ಭಯೋತ್ಪಾದಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.