

Karnataka SSLC Result 2025: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಇಂದು (ಮೇ 02) ಎಸ್‌ಎಸ್‌ಎಲ್‌ಸಿ ಪರೀಕ್ಷೆ -1ರ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. 8.96 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ. 66.14ರಷ್ಟು ಮಕ್ಕಳು ತೇರ್ಗಡೆಯಾಗಿದ್ದಾರೆ. ಈ ಬಾರಿ ದಕ್ಷಿಣ ಕನ್ನಡ ಪ್ರಥಮ ಸ್ಥಾನದಲ್ಲಿದ್ದರೆ, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಮಂಡಳಿಯ ಅಧಿಕಾರಿಗಳು ಇಂದು ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದರು. ಮಂಡಳಿಯ ವೆಬ್‌ಸೈಟ್ http://karresults.nic.in ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಈ ಬಾರಿ 22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.
625ಕ್ಕೆ 625 ಅಂಕ ಗಳಿಸಿದ ವಿದ್ಯಾರ್ಥಿಗಳ ಪೈಕಿ 22 ವಿದ್ಯಾರ್ಥಿಗಳು ಪೂರ್ಣ ಅಂಕ ಗಳಿಸಿ, ರಾಜ್ಯದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೊದಲ ಸ್ಥಾನಕ್ಕೆ ಭರ್ಜರಿ ಪೈಪೋಟಿ ನೀಡಿದ್ದಾರೆ. ವಿಶೇಷ ಎಂದರೆ ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿಯ ಫಲಿತಾಂಶದಲ್ಲಿ ಶೇ.8ರಷ್ಟು ಹೆಚ್ಚಳ ಕಂಡುಬಂದಿದೆ.
1. ಜಾಹ್ನವಿ ಎಸ್.ಎನ್ - ಬೆಂಗಳೂರು ದಕ್ಷಿಣ
2. ಭಾವನಾ. ಸಿ- ಬೆಂಗಳೂರು ಗ್ರಾಮಾಂತರ
3. ಧನಲಕ್ಷ್ಮಿ- ಬೆಂಗಳೂರು ದಕ್ಷಿಣ
4. ತಾನ್ಯಾ ಆರ್.ಎನ್ - ಮೈಸೂರು
5. ಮಧುಸೂಧನ್ - ಬೆಂಗಳೂರು ದಕ್ಷಿಣ
6. ಧನುಷ್ - ಮೈಸೂರು
7. ಧೃತಿ - ಮಂಡ್ಯ
8. ನಮಿತ - ಬೆಂಗಳೂರು ದಕ್ಷಿಣ
9. ನಂದನ್ ಎಚ್ಡಿ - ಚಿತ್ರದುರ್ಗ
10. ನಮನ ಕೆ - ಶಿವಮೊಗ್ಗ
11. ಮೊಹಮ್ಮದ್ ಮಸ್ತೂರ್ ಅದಿಲ್ - ತುಮಕೂರು
12. ನಿತ್ಯಾ ಕುಲಕರ್ಣಿ - ಶಿವಮೊಗ್ಗ
13. ಮೌಲ್ಯ .ಡಿ ರಾಜ್ - ಚಿತ್ರದುರ್ಗ
14. ರಂಜಿತ ಎಸಿ- ಬೆಂಗಳೂರು ಗ್ರಾಮಾಂತರ
15. ರೂಪ ಚನಗೌಡ ಪಾಟೀಲ್- ಬೆಳಗಾವಿ
16. ಸಹಿಷ್ಣು .ಎನ್ - ಶಿವಮೊಗ್ಗ
17. ಶಗುಫ್ತಾ ಅಂಜುಮ್ - ಶಿರಸಿ
18. ಸ್ವಸ್ಥಿ ಕಾಮತ್ - ಉಡುಪಿ
19. ಉತ್ಸವ್ ಪಟೇಲ್- ಹಾಸನ
20. ಯಶ್ವಿತಾ ರೆಡ್ಡಿ - ಮಧುಗಿರಿ
21. ಯುಕ್ತ .ಎಸ್ - ಬೆಂಗಳೂರು ದಕ್ಷಿಣ
22. ಅಖಿಲ್ ಅಹ್ಮದ್ ನಡಾಫ್- ವಿಜಯಪುರ