ಪೊಲೀಸರ ಮುಂದೆಯೇ ಚಾಲಕನನ್ನು ಥಳಿಸಿ, ಕಾರನ್ನು ಧ್ವಂಸಗೊಳಿಸಿದ ಕನ್ವಾರಿಯಾಗಳು; ವಿಡಿಯೋ ವೈರಲ್​​

Untitled design (18)
Published on

ಉತ್ತರಾಖಂಡ: ಉತ್ತರಾಖಂಡದ ರೂರ್ಕಿಯ ರಸ್ತೆಯಲ್ಲಿ ರ‍್ಯಾಲಿ ಹೋಗುತ್ತಿದ್ದ ವೇಳೆ ಕಾರಿನ ಚಾಲಕ ತೊಂದರೆ ನೀಡಿದ ಎಂದು ಆಕ್ರೋಶಗೊಂಡ ಕನ್ವಾರಿಯಾಗಳ ಗುಂಪೊಂದು, ಆತನಿಗೆ ಹಿಗ್ಗಾಮುಗ್ಗಾ ಥಳಿಸಿ, ಕಾರನ್ನು ಧ್ವಂಸಗೊಳಿಸಿರುವ ಘಟನೆ ವರದಿಯಾಗಿದೆ.

ಕನ್ವಾರಿಯಾಗಳ ಗುಂಪೊಂದು ಕಾರಿನ ಚಾಲಕನನ್ನು ಥಳಿಸಿದ್ದು, ಆತನ ಕಾರನ್ನು ಪೊಲೀಸರ ಸಮ್ಮುಖದಲ್ಲಿ ಧ್ವಂಸಗೊಳಿಸಿದ್ದಾರೆ. ತಮ್ಮ ರ‍್ಯಾಲಿಗೆ ವಾಹನ ಚಾಲಕ ಅಡ್ಡಿಪಡಿಸಿದ್ದಕ್ಕೆ ನಾವು ಹೀಗೆ ಮಾಡಿದ್ದೇವೆ ಎಂದು ಆರೋಪಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ ಪೊಲೀಸರು ಹಾಗೂ ಸ್ಥಳೀಯರು ಮಧ್ಯೆ ಪ್ರವೇಶಿಸಿ ಗುಂಪನ್ನು ಶಾಂತಗೊಳಿಸಿದ್ದಾರೆ ಎಂದು ವರದಿ ತಿಳಿಸಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net