

ಬೆಂಗಳೂರು: ಕರ್ನಾಟಕದ ಈಜುಪಟುಗಳು ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ 52ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್ಷಿಪ್ನ (
junior national championship
) 3ನೇ ದಿನ ಮತ್ತೆ 4 ಚಿನ್ನ, 4 ಬೆಳ್ಳಿ ಸಹಿತ 8 ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಕರ್ನಾಟಕ ಕೂಟದಲ್ಲಿ ಒಟ್ಟು 21 ಚಿನ್ನ, 16 ಬೆಳ್ಳಿ, 6 ಕಂಚಿನ ಸಹಿತ ಒಟ್ಟು 43 ಪದಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.
ಗುರುವಾರ ನಡೆದ ಸ್ಪರ್ಧೆಗಳಲ್ಲಿ ರಾಜ್ಯದ ತಾನ್ಯಾ ಷಡಾಕ್ಷರಿ, ಮಾನವಿ ವರ್ಮ ಮತ್ತು ಶರಣ್ ಎಸ್. ಚಿನ್ನದ ಪದಕ ಜಯಿಸಿದರು. ಬಾಲಕಿಯರ 4/100 ಮೀ. ಫ್ರೀಸ್ಟೈಲ್ ರಿಲೇಯಲ್ಲೂ ರಾಜ್ಯಕ್ಕೆ ಚಿನ್ನ ಒಲಿಯಿತು. ಡೇನಿಯಲ್ ಪೌಲ್ ಜೆ, ತನಿಷಿ ಗುಪ್ತಾ, ವಿಶಾಗನ್ ಶರವಣನ್, ಧ್ರುಪದ್ ರಾಮಕೃಷ್ಣ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.