VIDEO | ಯಮುನಾ ನದಿಯ ಮಧ್ಯದಲ್ಲಿ ಸ್ಪೋಟಗೊಂಡ ಇಂಡಿಯನ್ ಆಯಿಲ್‌ನ ಗ್ಯಾಸ್ ಪೈಪ್‌ಲೈನ್!

Untitled design - 2023-07-26T154806.529
Published on

ಉತ್ತರಪ್ರದೇಶ: ಉತ್ತರಪ್ರದೇಶದ ಬಾಗ್‌ಪತ್ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಉಕ್ಕಿ ಹರಿಯುತ್ತಿರುವ ಯಮುನಾ ನದಿಯೊಳಗೆ ಅಳವಡಿಸಲಾಗಿದ್ದ ಇಂಡಿಯನ್​ ಆಯಿಲ್​ ಕಾರ್ಪೋರೇಷ್​ನ ಪೈಪ್‌ಲೈನ್ ಸ್ಪೋಟಗೊಂಡಿದ್ದು, ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

"ಬಾಗ್‌ಪತ್ ಜಿಲ್ಲೆಯ ಜಾಗೋಸ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಪೈಪ್​ಲೈನ್ ವೈಫಲ್ಯದಿಂದಾಗಿ ಸೋರಿಕೆ ಉಂಟಾಗಿದೆ. ನೀರೊಳಗಿನ ಪೈಪ್‌ಲೈನ್ ದುರಸ್ತಿಗೆ ತಂಡವನ್ನು ಕೂಡಲೇ ಕಳುಹಿಸಲಾಗಿದೆ" ಎಂದು ಅಧಿಕಾರಿಗಳ ತಂಡ ಮಾಹಿತಿ ನೀಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net