ನಾವು ಯುದ್ಧ ಬಯಸುವುದಿಲ್ಲ, ಆದರೆ ಯಾರಿಗೂ ಹೆದರುವುದಿಲ್ಲ: ಟ್ರಂಪ್ ಎಚ್ಚರಿಕೆಗೆ ಅಯತೊಲ್ಲಾ ಅಲಿ ಖಮೇನಿ ಪ್ರತ್ಯುತ್ತರ | Ayatollah Ali Khamenei

ನಾವು ಯುದ್ಧ ಬಯಸುವುದಿಲ್ಲ, ಆದರೆ ಯಾರಿಗೂ ಹೆದರುವುದಿಲ್ಲ: ಟ್ರಂಪ್ ಎಚ್ಚರಿಕೆಗೆ ಅಯತೊಲ್ಲಾ ಅಲಿ ಖಮೇನಿ ಪ್ರತ್ಯುತ್ತರ
ನಾವು ಯುದ್ಧ ಬಯಸುವುದಿಲ್ಲ, ಆದರೆ ಯಾರಿಗೂ ಹೆದರುವುದಿಲ್ಲ: ಟ್ರಂಪ್ ಎಚ್ಚರಿಕೆಗೆ ಅಯತೊಲ್ಲಾ ಅಲಿ ಖಮೇನಿ ಪ್ರತ್ಯುತ್ತರ
Published on
ಟೆಹ್ರಾನ್: ಅಮೆರಿಕ ಮತ್ತು ಇರಾನ್​ ನಡುವಿನ ಉದ್ವಿಗ್ನತೆ ಉತ್ತುಂಗಕ್ಕೇರಿದೆ. ನಾವು ಸಂಘರ್ಷವನ್ನು ಬಯಸದಿದ್ದರೂ, ನಮ್ಮ ಮೇಲೆ ಯಾವುದೇ ಆಕ್ರಮಣ ಮಾಡಿದರೆ ಸರಿಪಡಿಸಲಾಗದ ಹಾನಿ ಮಾಡುತ್ತೇವೆ ಎಂದು ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ(Ayatollah Ali Khamenei) ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ದೂರದರ್ಶನದ ಭಾಷಣದಲ್ಲಿ ಮಾತನಾಡಿದ ಖಮೇನಿ, ಮಾಡು ಇಲ್ಲವೇ ಮಡಿ ಎಂದು ಹೇಳಿದ್ದಾರೆ. ನಮ್ಮ ಮೇಲೆ ಮಿಲಿಟರಿ ದಾಳಿ ಮಾಡಿದರೆ, ನಿಸ್ಸಂದೇಹವಾಗಿ ಸರಿಪಡಿಸಲಾಗದ ಧ್ವಂಸ ಮಾಡುತ್ತೇವೆ ಎಂದು ಅಮೆರಿಕನ್ನರು ತಿಳಿದಿರಬೇಕು ಎಂದು ಗುಡುಗಿದ್ದಾರೆ. ಅಲ್ಲದೆ, ಹಿಂದಿನ ದಾಳಿಗಳು ಮತ್ತು ನಿರ್ಬಂಧಗಳಿಂದ ಉಂಟಾದ ಆರ್ಥಿಕ ಒತ್ತಡವನ್ನು ಉಲ್ಲೇಖಿಸಿ, ಅಮೆರಿಕ ಅಧ್ಯಕ್ಷರ ಕೈಗಳು ಇರಾನಿಯನ್ನರ ರಕ್ತದ ಕಲೆಗಳಿಂದ ಕೂಡಿವೆ ಎಂದು ಹೇಳಿದ್ದಾರೆ.
ಇರಾನ್ ಸರ್ಕಾರ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮೇಲೆ ದಮನಕಾರಿ ಕ್ರಮಗಳನ್ನು ಮುಂದುವರಿಸಿದರೆ, ಮಿಲಿಟರಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಧ್ಯಕ್ಷ ಟ್ರಂಪ್ ಸೂಚಿಸಿದ ನಂತರ ಘರ್ಷಣೆ ಹೆಚ್ಚಾಯಿತು. ಅಲ್ಲದೆ, ತಮ್ಮ ನಿಲುವನ್ನು ಅಂತಿಮ ಎಚ್ಚರಿಕೆ ಎಂದು ಬಣ್ಣಿಸಿದ ಟ್ರಂಪ್, ಅಮೆರಿಕದ ತಾಳ್ಮೆ ಈಗಾಗಲೇ ಮುಗಿದಿದೆ ಇರಾನ್​ಗೆ ಎಚ್ಚರಿಸಿದ್ದರು.

ರಾಜತಾಂತ್ರಿಕತೆ vs ಸಿದ್ಧತೆ

ಈ ಬಗ್ಗೆ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಇಸ್ಲಾಮಿಕ್ ಗಣರಾಜ್ಯವು ಯುದ್ಧ ಮತ್ತು ಮಾತುಕತೆ ಎರಡಕ್ಕೂ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಅದರೆ, ಯಾವುದೇ ಮಾತುಕತೆಗಳು ಪರಸ್ಪರ ಗೌರವ ಮತ್ತು ಸಮಾನ ನೆಲೆಯನ್ನು ಆಧರಿಸಿರಬೇಕು. ಟೆಹ್ರಾನ್ ಬಲವಂತದ ಮಾತುಕತೆಯನ್ನು ತಿರಸ್ಕರಿಸುತ್ತದೆ ಎಂದು ಹೇಳಿದ್ದಾರೆ.
ಎರಡೂ ರಾಷ್ಟ್ರಗಳು ಎಚ್ಚರಿಕೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವಾಗ, ಅಂತಾರಾಷ್ಟ್ರೀಯ ಸಮುದಾಯವು ಉಸಿರು ಬಿಗಿಹಿಡಿದು ವೀಕ್ಷಿಸುತ್ತಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿಲಿಟರಿ ದಾಳಿಗಳಿಗೆ ಸಜ್ಜುಗೊಳ್ಳುತ್ತಿವೆ. ಇರಾನ್ ತನ್ನ ಕಠಿಣ ನಿಲುವನ್ನು ಕಾಯ್ದುಕೊಂಡಿದೆ ಎಂದು ವರದಿಯಾಗಿರುವುದರಿಂದ, ಈ ಬಿಕ್ಕಟ್ಟಿನ ಪರಿಣಾಮಕಾರಿ ಸ್ವರೂಪವು ಸ್ಪಷ್ಟವಾಗಿಲ್ಲ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net