ವಿಶ್ವಸಂಸ್ಥೆಯ ಈ ಸ್ಫೋಟಕ ವರದಿ ಹೊರಬಂದ ತಕ್ಷಣವೇ ಜಿನೀವಾದಲ್ಲಿರುವ ಅಮೆರಿಕ ಅಥವಾ ಇರಾನ್ನ ಯಾವುದೇ ತಕ್ಷಣದ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಅಮೆರಿಕದ ಪೆಂಟಗನ್ ಈ ಬಗ್ಗೆ ಆಂತರಿಕ ತನಿಖೆ ನಡೆಸುತ್ತಿರುವುದಾಗಿ ಈ ಹಿಂದೆ ಹೇಳಿಕೊಂಡಿದ್ದರೂ, ತಮ್ಮ ಕಾರ್ಯಾಚರಣೆಗಳು ಸಶಸ್ತ್ರ ಸಂಘರ್ಷದ ಕಾನೂನಿಗೆ ಬದ್ಧವಾಗಿವೆ ಎಂದು ಸಮರ್ಥಿಸಿಕೊಳ್ಳುತ್ತಾ ಬಂದಿದೆ. ಮತ್ತೊಂದೆಡೆ ಇರಾನ್ ಸರ್ಕಾರವು ತನ್ನ ಮೇಲಿನ ವ್ಯವಸ್ಥಿತ ಹಕ್ಕುಗಳ ಉಲ್ಲಂಘನೆಯ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ವಿದೇಶಿ ಪ್ರಚೋದನೆಯಿಂದಲೇ ಇಂತಹ ಅಶಾಂತಿ ಉಂಟಾಗಿದೆ ಎಂದು ವಾದಿಸುತ್ತಿದೆ, (ಏಜೆನ್ಸೀಸ್).