ಅಮೆರಿಕ ಗುಪ್ತಚರ ಇಲಾಖೆ ಮುಖ್ಯಸ್ಥೆ ಹುದ್ದೆಗೆ ರಾಜೀನಾಮೆ ನೀಡಿದ ತುಳಸಿ ಗಬ್ಬಾರ್ಡ್ | Tulsi Gabbard

 ತುಳಸಿ ಗಬ್ಬಾರ್ಡ್
ತುಳಸಿ ಗಬ್ಬಾರ್ಡ್
Published on
ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತೆ ಮತ್ತು ರಾಷ್ಟ್ರೀಯ ಗುಪ್ತಚರ ನಿರ್ದೇಶಕಿಯಾಗಿದ್ದ ತುಳಸಿ ಗಬ್ಬಾರ್ಡ್(Tulsi Gabbard) ಶುಕ್ರವಾರ(ಮೇ 22) ತಮ್ಮ ಪತಿಯ ಅನಾರೋಗ್ಯದ ಕಾರಣ ನೀಡಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪ್ರಮುಖ ಬೆಳವಣಿಗೆ ಅಂದ್ರೆ ಟ್ರಂಪ್ ಅವರ ಎರಡನೇ ಅವಧಿಯಲ್ಲಿ ನಿರ್ಗಮಿಸಿದ ನಾಲ್ಕನೇ ಕ್ಯಾಬಿನೆಟ್ ಅಧಿಕಾರಿಯಾಗಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು, ದುರದೃಷ್ಟವಶಾತ್, ನಾನು ನನ್ನ ರಾಜೀನಾಮೆಯನ್ನು 2026 ಜೂನ್ 30ರಿಂದ ಜಾರಿಗೆ ಬರುವಂತೆ ಸಲ್ಲಿಸಿದ್ದೇನೆ .ನನ್ನ ಪತಿ ಅಬ್ರಹಾಂ ಅವರಿಗೆ ಇತ್ತೀಚೆಗೆ ಅತ್ಯಂತ ಅಪರೂಪದ ಮೂಳೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಪತಿಗೆ ಸಹಾಯ ಮಾಡಲು ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ.
ಅನುಭವಿ ಮತ್ತು ಮಾಜಿ ಡೆಮಾಕ್ರಟಿಕ್ ಕಾಂಗ್ರೆಸ್ ಮಹಿಳೆಯಾಗಿರು ಗಬ್ಬಾರ್ಡ್, ವಿದೇಶಿ ಯುದ್ಧಗಳಿಗೆ ವಿರೋಧದ ಮೇಲೆ ತಮ್ಮ ರಾಜಕೀಯ ಹೆಸರನ್ನು ನಿರ್ಮಿಸಿಕೊಂಡಿದ್ದರು. ಫೆಬ್ರವರಿ 28ರಂದು ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕ ಇಸ್ರೇಲ್ ಜೊತೆ ಸೇರಿದ್ದು ಅವರಿಗೆ ಮುಜುಗರ ತರಿಸಿದೆ ಎನ್ನಲಾಗಿದೆ. ಆಗಲೇ ಅವರ ಅಧ್ಯಕ್ಷ ಟ್ರಂಪ್ ಅವರಿಂದ ದೂರವಾಗುತ್ತಾರೆ ಎಂಬ ವರದಿಗಳು ಹರಿದಾಡಿದ್ದವು.
ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕ ಜೋ ಕೆಂಟ್ ಮಾರ್ಚ್‌ನಲ್ಲಿ ತಮ್ಮ ರಾಜೀನಾಮೆಯನ್ನು ನೀಡಿದ್ದರು. ಒಳ್ಳೆಯ ಮನಸ್ಸಾಕ್ಷಿಯೊಂದಿಗೆ ಯುದ್ಧವನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಘೋಷಣೆ ಮಾಡಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net