ಯುದ್ಧ ಇನ್ನೂ ಮುಗಿದಿಲ್ಲ, ಇಸ್ಲಾಂ ವಿರೋಧಿ ಶಕ್ತಿಗಳೇ ನಮ್ಮ ಟಾರ್ಗೆಟ್​: ಫ್ಲೈದುಬೈ ಸಹ- ಪೈಲಟ್​ 'ಅಲ್​-ಹಮ್ಮಾಮಿ' ಬೆಂಬಲಿಸಿ "ಅಲ್​-ಖೈದಾ" ಪೋಸ್ಟ್​! Al-Qaeda Support

ಫ್ಲೈದುಬೈ ವಿಮಾನ ಹೈಜಾಕ್ ಯತ್ನ ನಡೆಸಿದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಮಿಯನ್ನು ಅಲ್-ಖೈದಾ ಉಗ್ರ ಸಂಘಟನೆ ಬೆಂಬಲಿಸಿದೆ. ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ದಾಳಿಗಳಿಗೆ ಪ್ರಚೋದನೆ ನೀಡಿರುವ ಕುರಿತ ಸಂಪೂರ್ಣ ವರದಿ ಇಲ್ಲಿದೆ.
The war is not over yet; anti-Islam forces are our target: Al-Qaeda's provocative post in support of Flydubai co-pilot Al-Hammami.
ಯುದ್ಧ ಇನ್ನೂ ಮುಗಿದಿಲ್ಲ, ಇಸ್ಲಾಂ ವಿರೋಧಿ ಶಕ್ತಿಗಳೇ ನಮ್ಮ ಟಾರ್ಗೆಟ್: ಫ್ಲೈದುಬೈ ಸಹ-ಪೈಲಟ್ ಅಲ್-ಹಮ್ಮಮಿಯನ್ನು ಬೆಂಬಲಿಸಿ ಅಲ್-ಖೈದಾ ಪ್ರಚೋದನಾಕಾರಿ ಪೋಸ್ಟ್.
Published on: 

Flydubai: ಪ್ರಪಂಚವನ್ನೇ ಬೆಚ್ಚಿಬೀಳಿಸಿದ್ದ 9/11 ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ ದಾಳಿಯ ಕರಾಳ ನೆನಪುಗಳು ಇನ್ನೂ ಮಾಸಿಲ್ಲ. ಈಗ ಅದೇ ರೀತಿಯ ಮತ್ತೊಂದು ಭೀಕರ ವಿಮಾನ ಅಪಹರಣದ ಸಂಚನ್ನು ಹೂಡಲು ಉಗ್ರ ಸಂಘಟನೆಗಳು ಯತ್ನಿಸಿದ್ದರೂ, ಭಾರತೀಯ ಪೈಲಟ್​​ವೊಬ್ಬ ಸಾಹಸದ ಫಲವಾಗಿ ದೊಡ್ಡ ಅನಾಹುತವೊಂದು ಕೂದಲೆಳೆಯೆದಲ್ಲಿ ತಪ್ಪಿಹೋಗಿದೆ.

ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹೊರಟಿದ್ದ 'ಫ್ಲೈದುಬೈ' (flydubai) ವಿಮಾನವನ್ನು ಹೈಜಾಕ್ ಮಾಡಲು ನಡೆದ ವಿಫಲ ಯತ್ನದ ಬಗ್ಗೆ ಉಗ್ರ ಸಂಘಟನೆ ಅಲ್-ಖೈದಾ ಇನ್ ದಿ ಅರೇಬಿಯನ್ ಪೆನಿನ್ಸುಲಾ (AQAP) ಈಗ ಬೆಚ್ಚಿಬೀಳಿಸುವ ಮಾಹಿತಿ ಹೊರಹಾಕಿದೆ. ತನ್ನ 'ಅಲ್-ಬಯಾನ್' ಸಾಪ್ತಾಹಿಕ ಪತ್ರಿಕೆಯಲ್ಲಿ ಈ ಕುರಿತು ಸಂಪಾದಕೀಯ ಪ್ರಕಟಿಸಿರುವ ಉಗ್ರ ಸಂಘಟನೆ, ಕೃತ್ಯ ಎಸಗಿದ ಒಮಾನಿ ಸಹ-ಪೈಲಟ್‌ ಹಮಾಮ್ ಅಲ್-ಹಮ್ಮಾಮಿಯನ್ನು ಬಹಿರಂಗವಾಗಿಯೇ ಶ್ಲಾಘಿಸಿದೆ.

ಅಲ್-ಖೈದಾದಿಂದ ಬಹಿರಂಗ ಬೆದರಿಕೆ: 9/11 ದಾಳಿಗೆ ಹೋಲಿಕೆ!

ಈ ವಿಫಲ ಹೈಜಾಕ್ ಯತ್ನದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಲ್-ಖೈದಾ ಉಗ್ರ ಸಂಘಟನೆ, ತನ್ನ ಅಧಿಕೃತ ಮುಖವಾಣಿಯಲ್ಲಿ ಇದರ ಬಗ್ಗೆ ಬೊಗಳೆ ಬಿಟ್ಟಿದೆ. 'ಸೆಪ್ಟೆಂಬರ್ 11 ಮತ್ತು ಸೆಪ್ಟೆಂಬರ್ 30ರ ನಡುವೆ' ಎಂಬ ಶೀರ್ಷಿಕೆಯಡಿ ಲೇಖನ ಪ್ರಕಟಿಸಿರುವ ಅಲ್-ಖೈದಾ, 2001ರ 9/11 ದಾಳಿಯ ಫೋಟೋಗಳ ಜೊತೆಗೆ ಇದೇ ಫ್ಲೈದುಬೈ ವಿಮಾನದ ಚಿತ್ರಗಳನ್ನು ಹಾಕಿ ಕುಕೃತ್ಯವನ್ನು ಸಮರ್ಥಿಸಿಕೊಂಡಿದೆ.

"ಯುದ್ಧ ಇನ್ನೂ ಮುಗಿದಿಲ್ಲ. ಅಮೆರಿಕ, ಇಸ್ರೇಲ್ ಮತ್ತು ಇಸ್ಲಾಂ ವಿರೋಧಿಗಳ ವಿಮಾನಗಳು ಇಂದಿಗೂ ಆಕಾಶದಲ್ಲಿ ಹಾರಾಡುತ್ತಿವೆ. ಅವುಗಳೇ ನಮ್ಮ ಮುಂದಿನ ಟಾರ್ಗೆಟ್" ಎಂದು ಉಗ್ರರು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲ, ಮುಸ್ಲಿಮರಲ್ಲದವರು ಕೂಡ ಅಮೆರಿಕ-ಇಸ್ರೇಲ್ ವಿರುದ್ಧ ಇಂತಹ ದಾಳಿಗಳನ್ನು ನಡೆಸಬಹುದು, ಅದು ಅಂತಿಮವಾಗಿ ತಮ್ಮ ಹಿತಾಸಕ್ತಿ ಕಾಪಾಡುತ್ತದೆ ಎಂದು ವಿಕೃತವಾಗಿ ವಾದಿಸಿದೆ.

ಫ್ಲೈದುಬೈ ವಿಮಾನದಲ್ಲಿ ನಡೆದಿದ್ದೇನು?

ಸಪ್ಟೆಂಬರ್​ 30 ರಂದು ವಿಮಾನ ಸಂಖ್ಯೆ FZ 1073 ಫ್ಲೈದುಬೈ ವಿಮಾನ ದುಬೈನಿಂದ ಟೆಲ್ ಅವೀವ್‌ಗೆ ಪ್ರಯಾಣ ಬೆಳೆಸಿತ್ತು. ಇನ್ನೇನು ಕೆಲವೇ ನಿಮಿಷಗಳಲ್ಲಿ ವಿಮಾನ ಇಸ್ರೇಲ್​ ಅನ್ನು ಪ್ರವೇಶಿಸುತ್ತದೆ ಎನ್ನುವಾಗ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಇದ್ದಕ್ಕಿದ್ದಂತೆ ತನ್ನ ವಿಕೃತ ಬುದ್ಧಿ ತೋರಿಸಿದ್ದಾನೆ. ಕಾಕ್‌ಪಿಟ್ ಒಳಗೆ ತುರ್ತು ಸಂದರ್ಭದಲ್ಲಿ ಬಳಸುವ 'ಕ್ರಾಶ್ ಆಕ್ಸ್' (ಕೊಡಲಿ) ತೆಗೆದುಕೊಂಡು, ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಸಹ-ಪೈಲಟ್‌ನ ಈ ಹಠಾತ್ ದಾಳಿಯಿಂದ ಕ್ಯಾಪ್ಟನ್ ಮಚ್ಚಾರ್ ಒಂದು ಕ್ಷಣ ಬೆಚ್ಚಿಬಿದ್ದಿದ್ದು ಹಲ್ಲೆಯ ರಭಸಕ್ಕೆ ಕಾಕ್‌ಪಿಟ್‌ನಿಂದ ಹೊರಬಿದ್ದರೂ, ಸಾಹಸ ಮಾಡಿ ಮತ್ತೆ ಕಾಕ್‌ಪಿಟ್‌ಗೆ ನುಗ್ಗಿ ವಿಮಾನದ ನಿಯಂತ್ರಣ ತಪ್ಪದಂತೆ ತಡೆದು, ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಬೋಯಿಂಗ್ 737 ವಿಮಾನ ಕೇವಲ 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಸುಮಾರು 14,000 ಅಡಿಗಳಷ್ಟು ಆಕಾಶದಿಂದ ಕೆಳಗೆ ಕುಸಿತಕಂಡಿದೆ.

Also Read
ಸೈನಿಕನ ಪಾರ್ಥಿವ ಶರೀರ ಹೊತ್ತ ಆಂಬ್ಯುಲೆನ್ಸ್‌ಗೆ ಲಾರಿ ಡಿಕ್ಕಿ: ಮಗ, ಸಹೋದರ ಸೇರಿ ನಾಲ್ವರು ಸಾವು! Soldier Body
The war is not over yet; anti-Islam forces are our target: Al-Qaeda's provocative post in support of Flydubai co-pilot Al-Hammami.

ನಂತರ ಪ್ರಯಾಣಿಕರ ಸಹಾಯದಿಂದ ಆ ದುಷ್ಟ ಸಹ-ಪೈಲಟ್‌ನನ್ನು ಕಟ್ಟಿಹಾಕಲಾಯಿತು. ಅದೃಷ್ಟವಶಾತ್ ಅದೇ ವಿಮಾನದಲ್ಲಿದ್ದ ಇತರೆ ಪೈಲಟ್‌ಗಳ ತಂಡವು ಮುಂದೆ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿತು. ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಮಯೋಚಿತ ಜಾಣ್ಮೆಯಿಂದ ನೂರಾರು ಪ್ರಯಾಣಿಕರ ಪ್ರಾಣ ಉಳಿದಂತಾಯಿತು.

ಹೆಚ್ಚಿದ ವಿಮಾನಯಾನ ಭದ್ರತೆ ಆತಂಕ!

ಒಬ್ಬ ಪೈಲಟ್‌ನೇ ಉಗ್ರರ ಕೈಗೊಂಬೆಯಾಗಿ ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡಲು ಹೊರಟಿದ್ದು ಇದರಿಂದ ವಿಮಾನಯಾನ ಜಗತ್ತು ಬೆಚ್ಚಿಬಿದ್ದಿದೆ. ಕೇವಲ ಹಣಕಾಸು ಅಥವಾ ವೈಯಕ್ತಿಕ ಕಾರಣಗಳಿಗಿಂತ ಹೆಚ್ಚಾಗಿ ಇದೊಂದು ದೊಡ್ಡ ಉಗ್ರರ ಸಂಚು ಎಂಬುದು ಈಗ ಬಯಲಾಗಿದೆ. ಅಮೆರಿಕ ಹಾಗೂ ಇಸ್ರೇಲ್ ವಿಮಾನಗಳೇ ಗುರಿಯಾಗುತ್ತಿರುವುದರಿಂದ ಜಾಗತಿಕ ಮಟ್ಟದಲ್ಲಿ ಭದ್ರತೆಯನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಲು ವಿಮಾನಯಾನ ಸಂಸ್ಥೆಗಳು ಮುಂದಾಗಿವೆ, (ಏಜೆನ್ಸೀಸ್​).

Related Stories

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net