ಸಿಡ್ನಿ ಬೀಚ್‌ನಲ್ಲಿ ಭೀಕರ ಗುಂಡಿನ ದಾಳಿ: ಪಾಕಿಸ್ತಾನದ ತಂದೆ-ಮಗನೇ ದಾಳಿಕೋರರು!
Sydney Beach
Published on:
Copied
Follow Us
ಆಸ್ಟ್ರೇಲಿಯಾ: ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಒಟ್ಟು 12 ಮಂದಿ ಮೃತಪಟ್ಟಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ 29 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪ್ಪ-ಮಗನೇ ಸೇರಿ ಈ ಕೃತ್ಯ ಎಸಗಿದ್ದಾನೆ ಎಂಬ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಶಂಕಿತ ಶೂಟರ್‌ಗಳಲ್ಲಿ ಒಬ್ಬರು ಸಾವನ್ನಪ್ಪಿದರೆ, ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ. ಸಿಡ್ನಿಯಲ್ಲಿ ಯಹೂದಿ ಸಮುದಾಯವನ್ನು ಗುರಿಯಾಗಿಸಿಕೊಂಡು ಅವರ ಹನುಕ್ಕಾ ಹಬ್ಬದ ಆಚರಣೆಯ ಮೊದಲ ದಿನದಂದು ಈ ದಾಳಿಯನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ನ್ಯೂ ಸೌತ್ ವೇಲ್ಸ್ ಪೊಲೀಸ್ ಇದನ್ನು ಯಹೂದಿ ವಿರೋಧಿ ಭಯೋತ್ಪಾದಕ ದಾಳಿಯೆಂದು ಘೋಷಿಸಿದ್ದಾರೆ.
ತಂದೆ-ಮಗನೇ ದಾಳಿಕೋರರು!
50 ವರ್ಷದ ತಂದೆ (ಸಜಿದ್ ಅಕ್ರಮ್ ಎಂದು ಕೆಲವು ಮೂಲಗಳು ಗುರುತಿಸಿವೆ) ಪೊಲೀಸ್ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. 24 ವರ್ಷದ ಮಗ ನವೀದ್ ಅಕ್ರಮ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ತಂದೆ-ಮಗ ಜೋಡಿಯ ಕೈವಾಡವಿದೆ ಎಂಬುದು ಆಸ್ಟ್ರೇಲಿಯಾ ಸರ್ಕಾರ ಸ್ಪಷ್ಟಪಡಿಸಬೇಕಿದೆ.
ನವೀದ್ ಅಕ್ರಮ್ ಪಾಕಿಸ್ತಾನ ಮೂಲದವನು (ಪಾಕಿಸ್ತಾನಿ ನಾಗರಿಕ ಅಥವಾ ಮೂಲದವನು) ಎಂದು ಅಮೆರಿಕದ ಗುಪ್ತಚರ ಮೂಲಗಳು ಮತ್ತು ಆಸ್ಟ್ರೇಲಿಯಾ ಪೊಲೀಸ್ ದೃಢಪಡಿಸಿವೆ. ತಂದೆಗೆ ಗನ್ ಲೈಸೆನ್ಸ್ ಇದ್ದು, ದಾಳಿಯಲ್ಲಿ ಬಳಸಿದ ಆಯುಧಗಳು ಅವನದ್ದೇ ಎಂದು ಹೇಳಲಾಗಿದೆ.
ಆಸ್ಟ್ರೇಲಿಯಾ ಸರ್ಕಾರ ಇದನ್ನು ಭಯೋತ್ಪಾದಕ ಘಟನೆಯೆಂದು ಘೋಷಿಸಿ ತನಿಖೆ ನಡೆಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದ್ದು, ಯಹೂದಿ ಸಮುದಾಯಕ್ಕೆ ಬೆಂಬಲ ಸೂಚಿಸಲಾಗಿದೆ. ಈ ಘಟನೆ ಆಸ್ಟ್ರೇಲಿಯಾದಲ್ಲಿ ಇತ್ತೀಚಿನ ಯಹೂದಿ ವಿರೋಧಿ ಘಟನೆಗಳ ಹಿನ್ನೆಲೆಯಲ್ಲಿ ನಡೆದಿದೆ,(ಏಜೆನ್ಸೀಸ್).