ಹೌದು, ಕೇವಲ 22 ವರ್ಷದ ಮಿನ್ ಎಂಬ ಯುವಕನೊಬ್ಬ ತಂತ್ರಜ್ಞಾನ ಲೋಕದ ದೈತ್ಯ ಕಂಪನಿಯೊಂದರಲ್ಲಿ (ವರದಿಗಳ ಪ್ರಕಾರ ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ ಫರ್ಮ್) ಅತ್ಯಂತ ಆಕರ್ಷಕ ಪ್ಯಾಕೇಜ್‌ನಲ್ಲಿ ಕೆಲಸಕ್ಕೆ ಸೇರಿದ್ದನು. ವಾರ್ಷಿಕ ಸುಮಾರು $325,000 (ಅಂದಾಜು 2.7 ಕೋಟಿ ರೂ.) ಸಂಬಳ ಪಡೆಯುತ್ತಿದ್ದ ಈತ, ಅನೇಕರಿಗೆ ಇದು 'ಡ್ರೀಮ್ ಜಾಬ್' ಆಗಿತ್ತು. ಆದರೆ, ಕೆಲಸಕ್ಕೆ ಸೇರಿದ ಕೆಲವೇ ತಿಂಗಳಲ್ಲಿ ಆತ ರಾಜೀನಾಮೆ ನೀಡಿದ್ದಾನೆ. ಇದೀಗ ಇದು ವೈರಲ್ ಟಾಪಿಕ್ ಆಗಿದೆ.