ಕತಾರ್‌ನಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನ: ಆರು ಮಂದಿ ದುರ್ಮರಣ, ಒಬ್ಬ ನಾಪತ್ತೆ; ಮುಂದುವರಿದ ರಕ್ಷಣಾ ಕಾರ್ಯ | Qatar Military Helicopter Crash

ಪರ್ಷಿಯನ್ ಕೊಲ್ಲಿಯ ಸಮುದ್ರದಲ್ಲಿ ಕತಾರ್ ಮಿಲಿಟರಿ ಹೆಲಿಕಾಪ್ಟರ್ ಪತನ
ಪರ್ಷಿಯನ್ ಕೊಲ್ಲಿಯ ಸಮುದ್ರದಲ್ಲಿ ಕತಾರ್ ಮಿಲಿಟರಿ ಹೆಲಿಕಾಪ್ಟರ್ ಪತನ
Published on

ಪ್ರಮುಖ ಮುಖ್ಯಾಂಶಗಳು

  • ಪರ್ಷಿಯನ್ ಕೊಲ್ಲಿಯ ಸಮುದ್ರದಲ್ಲಿ ಕತಾರ್ ಮಿಲಿಟರಿ ಹೆಲಿಕಾಪ್ಟರ್ ಪತನ
  • ಆರು ಜನ ಸಾವು ಒರ್ವ ನಾಪತ್ತೆ
  • ವಿಶೇಷ ತಂಡದಿಂದ ಮುಂದುವರಿದ ರಕ್ಷಣಾ ಕಾರ್ಯಾಚರಣೆ
ದೋಹಾ: ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಪ್ರಾದೇಶಿಕ ಉದ್ವಿಗ್ನತೆಯ ಮಧ್ಯೆ, ಪರ್ಷಿಯನ್ ಕೊಲ್ಲಿಯ ಸಮುದ್ರದಲ್ಲಿ ಕತಾರ್ ಮಿಲಿಟರಿ ಹೆಲಿಕಾಪ್ಟರ್ ಅಪಘಾತ (Qatar Military Helicopter Crash) ಕ್ಕೀಡಾದ ನಂತರ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಕತಾರ್​ ಸರ್ಕಾರ ಭಾನುವಾರ (ಮಾ.22) ತಿಳಿಸಿದೆ. ಹಿಂದಿನ ದಿನ ನಡೆದ ಅಪಘಾತದಲ್ಲಿ ಒಬ್ಬ ವ್ಯಕ್ತಿ ಕಾಣೆಯಾಗಿದ್ದಾನೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

ತಾಂತ್ರಿಕ ಕಾರಣದಿಂದ ಹೆಲಿಕಾಪ್ಟರ್ ಪತನ

ಈ ಅವಘಡದ ಕುರಿತು ಹೇಳಿಕೆ ನೀಡಿರುವ ಕತಾರ್​ ರಕ್ಷಣಾ ಸಚಿವಾಲಯ, ತಾಂತ್ರಿಕ ಕಾರಣದಿಂದ ಮಿಲಿಟರಿ ಹೆಲಿಕಾಪ್ಟರ್ ತನ್ನ ನಿಯಂತ್ರಣವನ್ನು ಕಳೆದುಕೊಂಡು ಪ್ರಾದೇಶಿಕ ಸಮುದ್ರದಲ್ಲಿ ಪತನಗೊಂಡಿದೆ ಎಂದು ಎಕ್ಸ್​(ಟ್ವಿಟರ್​) ನಲ್ಲಿ ತಿಳಿಸಿದೆ.
ಮಧ್ಯಪ್ರಾಚ್ಯ ಯುದ್ಧ ಪ್ರಾರಂಭವಾದಾಗಿನಿಂದ ಕತಾರ್ ಹಲವಾರು ದಾಳಿಗಳಿಗೆ ಗುರಿಯಾಗಿದ್ದರೂ ಸಹ ಈ ಹೆಲಿಕಾಪ್ಟರ್ ಪತನಕ್ಕೆ ಇರಾನ್​ ಕಾರಣವೇ ಎನ್ನುವುದಕ್ಕೆ ಇಲ್ಲಿವರೆಗೆ ಯಾವುದೇ ಸಂಬಂಧ ಕಂಡುಬಂದಿಲ್ಲ.

ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ

ಈ ಅಪಘಾತದಲ್ಲಿ ಮರಣ ಹೊಂದಿದವರು ಯಾವ ದೇಶದವರು? ನಾಗರಿಕರೋ? ಅಥವಾ ಮಿಲಿಟರಿಯವರೋ? ಎಂದು ಕತಾರ್​ ಆಂತರಿಕ ಸಚಿವಾಲಯ ಸ್ಪಷ್ಟ ಪಡಿಸಿಲ್ಲ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ವಿಶೇಷ ತಂಡಗಳನ್ನು ಇಯೋಜಿಸಲಾಗಿದೆ ಎಂದು ಆಂತರಿಕ ಸಚಿವಾಲಯ ಹೇಳಿದೆ.
ಹೆಲಿಕಾಪ್ಟರ್ ಅಪಘಾತದ ನಂತರ, ದೇಶದ ಪ್ರಾದೇಶಿಕ ನೀರಿನಲ್ಲಿ ತನ್ನ ವಿಶೇಷ ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ ಎಂದು ಆಂತರಿಕ ಸಚಿವಾಲಯ ಘೋಷಿಸಿದೆ ಎಂದು ರಕ್ಷಣಾ ಸಚಿವಾಲಯ ವರದಿ ಮಾಡಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net