ಕಾರ್ಲ್, ಪೀಟರ್ ಹೆಗೆಮನ್, ಜಾರ್ಜ್ ನಗೆಲ್​ಗೆ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಗರಿ | Nobel Prize 2026

ವಿಜ್ಞಾನಿಗಳಾದ ಕಾರ್ಲ್ ಡೀಸೆರೋತ್ (ಅಮೆರಿಕ), ಪೀಟರ್ ಹೆಗೆಮನ್ (ಜರ್ಮನಿ) ಮತ್ತು ಜಾರ್ಜ್ ನಗೆಲ್ (ಇಟಲಿ) ಅವರಿಗೆ ಈ ವರ್ಷದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಸ್ವೀಡನ್‌ನ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನಲ್ಲಿ ನೊಬೆಲ್ ಅಸೆಂಬ್ಲಿ ಈ ಪ್ರಶಸ್ತಿಯನ್ನು ಘೋಷಿಸಿದೆ.
Nobel Prize 2026
ಕಾರ್ಲ್, ಪೀಟರ್ ಹೆಗೆಮನ್, ಜಾರ್ಜ್ ನಗೆಲ್​ಗೆ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಗರಿ | Nobel Prize 2026
Published on: 

Nobel Prize 2026: ಪ್ರಸಕ್ತ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳು ಲೈಟ್-ಗೇಟೆಡ್ ಅಯಾನ್ ಚಾನೆಲ್‌ಗಳು ಮತ್ತು 'ಆಪ್ಟೋಜೆನೆಟಿಕ್ಸ್' (Optogenetics) ಎಂಬ ಟೆಕ್ನಾಲಜಿಯ ಸಂಶೋಧನೆಗಳಿಗಾಗಿ ಸ್ವೀಕರಿಸಿದ್ದಾರೆ.

ವಿಜ್ಞಾನಿಗಳಾದ ಕಾರ್ಲ್ ಡೀಸೆರೋತ್ (ಅಮೆರಿಕ), ಪೀಟರ್ ಹೆಗೆಮನ್ (ಜರ್ಮನಿ) ಮತ್ತು ಜಾರ್ಜ್ ನಗೆಲ್ (ಇಟಲಿ) ಅವರಿಗೆ ಈ ವರ್ಷದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಸ್ವೀಡನ್‌ನ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನಲ್ಲಿ ನೊಬೆಲ್ ಅಸೆಂಬ್ಲಿ ಈ ಪ್ರಶಸ್ತಿಯನ್ನು ಘೋಷಿಸಿದೆ.

ಆಪ್ಟೋಜೆನೆಟಿಕ್ಸ್ ಎನ್ನುವುದು ಜೀವಂತ ಮಿದುಳಿನಲ್ಲಿನ ಪ್ರತ್ಯೇಕ ನರ ಕೋಶಗಳ ಚಟುವಟಿಕೆಯನ್ನು ಆನ್ ಅಥವಾ ಆಫ್ ಮಾಡಲು ಬೆಳಕನ್ನು ಬಳಸುವ ತಂತ್ರವಾಗಿದೆ. ಮಿದುಳಿನ ರಹಸ್ಯಗಳು ಮತ್ತು ಕಾರ್ಯಗಳನ್ನು ಅನ್ವೇಷಿಸಲು ಈ ತಂತ್ರಜ್ಞಾನವನ್ನು ಈಗ ಜಾಗತಿಕವಾಗಿ ವೈಜ್ಞಾನಿಕ ಪ್ರಯೋಗಾಲಯಗಳಲ್ಲಿ ಬಳಸಲಾಗುತ್ತಿದೆ ಎಂಬುದನ್ನು ವಿವರಿಸಲಾಗಿದೆ.

ಮೂವರು ವಿಜ್ಞಾನಿಗಳಿಗೆ ಜಗತ್ತಿನ ಅತ್ಯುನ್ನತ ಪ್ರಶಸ್ತಿ ಸಿಕ್ಕಿದ್ದು, ಇದರ ಬಹುಮಾನದ ಮೊತ್ತವು 1.2 ಮಿಲಿಯನ್ ಡಾಲರ್‌ ಎನ್ನಲಾಗಿದೆ. ಈ ಮೊತ್ತವನ್ನು ಮೂರು ವಿಜೇತರಿಗೆ ಸಮಾನವಾಗಿ ಹಂಚಿಕೆ ಮಾಡಲಾಗುವುದು. ಇನ್ನು, ಅಕ್ಟೋಬರ್ 6ರಂದು ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗಳನ್ನು ಪ್ರಕಟಿಸಿದರೆ, ನಂತರದಲ್ಲಿ ರಸಾಯನಶಾಸ್ತ್ರ, ಅರ್ಥಶಾಸ್ತ್ರ, ಸಾಹಿತ್ಯ ಮತ್ತು ಶಾಂತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗುವುದು. ಈ ವರ್ಷದ ಡಿಸೆಂಬರ್ 10ರಂದು ನಡೆಯುವ ಸಮಾರಂಭದಲ್ಲಿ ಪುರಸ್ಕೃತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ಯಾರ ಹೆಸರಿನಲ್ಲಿ ಈ ಪ್ರಶಸ್ತಿ?

1901ರಿಂದ, ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರ ಆಶಯಗಳಿಗೆ ಅನುಗುಣವಾಗಿ ಮಾನವಕುಲಕ್ಕೆ ಮಹತ್ತರವಾದ ಪ್ರಗತಿ, ಕೊಡುಗೆಗಳನ್ನು ನೀಡಿದ ಪುರುಷರು, ಮಹಿಳೆಯರು ಮತ್ತು ಸಂಸ್ಥೆಗಳಿಗೆ ಈ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅಂತೆಯೇ, 2026ರ ಪ್ರಶಸ್ತಿ ಪ್ರಕಟಣೆ ಕೂಡ ನಡೆಯುತ್ತಿದೆ. ಪ್ರತಿಯೊಬ್ಬ ನೊಬೆಲ್ ಪ್ರಶಸ್ತಿ ವಿಜೇತರಿಗೆ 11 ಮಿಲಿಯನ್ ಸ್ವೀಡಿಷ್ ಕ್ರೋನರ್ (ಅಂದರೆ ಸುಮಾರು 1.2 ಮಿಲಿಯನ್ ಡಾಲರ್​) ದೊರೆಯಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net