ನೇಪಾಳದಲ್ಲಿ ಭೀಕರ ಪ್ರವಾಹ: 8 ಮಂದಿ ಸಾವು, ನೂರಾರು ಜನ ನಾಪತ್ತೆ; ಸೇನೆಯಿಂದ ಮುಂದುವರಿದ ರಕ್ಷಣಾ ಕಾರ್ಯಾಚರಣೆ! Nepal Flash Flood

ನೇಪಾಳದಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ 8 ಮಂದಿ ಸಾವು, ನೂರಾರು ಜನ ನಾಪತ್ತೆ
ನೇಪಾಳದಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ 8 ಮಂದಿ ಸಾವು, ನೂರಾರು ಜನ ನಾಪತ್ತೆ
Published on

ಪ್ರಮುಖ ಮುಖ್ಯಾಂಶಗಳು

  • ನೇಪಾಳದಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ 8 ಮಂದಿ ಸಾವು, ನೂರಾರು ಜನ ನಾಪತ್ತೆ.
  • ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೇಪಾಳ ಸೇನೆಯಿಂದ ಮುಂದುವರಿದ ರಕ್ಷಣಾ ಕಾರ್ಯಾಚರಣೆ
  • ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ
ಕಠ್ಮಂಡು: ಬುಧವಾರ (ಆ.26) ನೇಪಾಳದ ಉತ್ತರ ಪ್ರಾಂತ್ಯದಲ್ಲಿ ದಿಢೀರ್​ ಪ್ರವಾಹ (Nepal Flash Flood) ಅಪ್ಪಳಿಸಿದ ಪರಿಣಾಮ 8 ಜನ ಸಾವನ್ನಪ್ಪಿದ್ದು, ಹಲವು ಜನ ಕಣ್ಮರೆಯಾಗಿದ್ದಾರೆಂದು ವರದಿಯಾಗಿದೆ.

ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳ ಸುತ್ತಮುತ್ತಲಿನ ಪ್ರದೇಶ ಈ ಪ್ರವಾಹಕ್ಕೆ ತುತ್ತಾಗಿದ್ದು, ಇಲ್ಲಿದ್ದ ಮನೆ-ಮಠ ಸೇರಿದಂತೆ ಎಲ್ಲಾ ರೀತಿಯ ಮೂಲಸೌಕರ್ಯಗಳು ಪ್ರವಾಹದಲ್ಲಿ ಕೊಚ್ಚಿಹೋಗಿದೆ ಎಂದು ತಿಳಿದು ಬಂದಿದೆ.

ಒಮ್ಮೆ

ಲೇ ಅಪ್ಪಳಿಸಿದ ಪ್ರವಾಹ!

ನೇಪಾಳದ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಬೆಳಿಗ್ಗೆ 9 ಗಂಟೆ ಸುಮಾರಿಗೆ ಚೀನಾ ಗಡಿಯಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ಭೋಟೆ ಕೋಶಿ ನದಿ ನೀರಿನ ಮಟ್ಟ ಒಮ್ಮೆಲೇ ಏರಿಕೆ ಕಂಡಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಂತರ ತ್ರಿಶೂಲಿ ನದಿ ಹಾಗೂ ನುವಾಕೋಟ್ ಪ್ರದೇಶಕ್ಕೆ ನುಗ್ಗಿದ ಈ ನೀರು ಸುತ್ತಮುತ್ತಲಿನ ಪ್ರದೇಶಗಳನ್ನು ನಾಶಪಡಿಸುತ್ತ ಮುನ್ನುಗಿದೆ. ನೀರಿನ ರಭಸಕ್ಕೆ ತುತ್ತಾಗಿ ನೂರರು ಜನ ಕಣ್ಮರೆಯಾಗಿದ್ದು, ಸದ್ಯ ಎಂಟು ಜನರ ಮೃತ ದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದು, ಈ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.


ಮುಂದುವರಿದ ರಕ್ಷಣಾ ಕಾರ್ಯಾಚರಣೆ!

ಸದ್ಯ ಪ್ರವಾಹದ ಪ್ರಮಾಣ ತಗ್ಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಆದರೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್​​ ಸಂಪರ್ಕ ಹಾಗೂ ರಸ್ತೆ ಕೊಚ್ಚಿ ಹೋಗಿರುವ ಕಾರಣ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ.

ಮತ್ತೊಂದು ವರದಿ ಪ್ರಕಾರ, ರಕ್ಷಣಗೆ ಧಾವಿಸಿದ್ದ ಕೆಲವು ನೇಪಾಳ್​ ಪೊಲೀಸ್​ ಹಾಗೂ ರಕ್ಷಣಾ ಸಿಬ್ಬಂದಿ ಕೂಡ ಪರವಾಹದಲ್ಲಿ ಕೊಚ್ಚಿ ಹೋಗಿದ್ದಾರೆಂದು ಹೇಳಲಾಗುತ್ತಿದೆ.

ಸದ್ಯಕ್ಕೆ ನೇಪಾಳಿ ಸೈನಿಕರು 12 ಸೇನಾ ಹೆಲಿಕಾಪ್ಟರ್​ ಮೂಲಕ ಸ್ಥಳ ವೀಕ್ಷಣೆ ಮಾಡುತ್ತಾ, ಜನರನ್ನು ಪ್ರವಾಹ ಪೀಡಿತ ಪ್ರದೇಶದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುತ್ತಿರುವುದಾಗಿ ತಿಳಿದು ಬಂದಿದೆ, (ಏಜನ್ಸೀಸ್​).


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net