2012ರ ಒಂದು ಇಮೇಲ್ನಲ್ಲಿ ಕ್ರೌನ್ ಪ್ರಿನ್ಸೆಸ್, ಎಪ್ಸ್ಟೀನ್ಗೆ ನೀವು ತುಂಬಾ ಒಳ್ಳೆಯವರು ಎಂದು ಹೇಳಿದ್ದರೆ, ಇನ್ನೊಂದರಲ್ಲಿ ಆಕರ್ಷಕವಾಗಿದ್ದೀರಿ ಎಂದಿದ್ದಾರೆ. ಅದೇ ರೀತಿ ಎಪ್ಸ್ಟೀನ್ ವೈಫ್ ಹಂಟಿಂಗ್ ಬಗ್ಗೆ ಮಾತನಾಡಿದಾಗ ಸ್ಕ್ಯಾಂಡಿನೇವಿಯನ್ ಮಹಿಳೆಯರನ್ನು ಸಂಪರ್ಕಿಸಲು ಸಲಹೆ ನೀಡಿದ್ದಾರೆ. ಇನ್ನೂ ರಾಯಲ್ ಜೀವನದ ಬೇಸರ, ಅನುಚಿತ ಸಂಬಂಧಗಳು, ಸಾಹಿತ್ಯ (ವ್ಲಾಡಿಮಿರ್ ನಬೊಕಾವ್) ಮತ್ತು ಇತರ ವೈಯಕ್ತಿಕ ವಿಷಯಗಳನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ.