ಪುಟಿನ್ ಅವರಿಗೆಂದೇ ಮಾಡಿಸಲಾದ ಊಟದ ಮೆನುವಿನಲ್ಲಿ ಝೋಲ್ ಮೊಮೊ, ಗುಸ್ಸಿ ಡೂನ್ ಚೆಟಿನ್ನಿಂದ ಹಿಡಿದು ತಂದೂರಿ ಭರ್ವಾನ್ ಆಲೂ, ಜಫ್ರಾನಿ ಪನೀರ್ ರೋಲ್, ಪಾಲಕ್ ಮೇಥಿ ಮಟ್ಟರ್ ಕಾ ಸಾಗ್, ಹಳದಿ ದಾಲ್ ತಡ್ಕಾ ಪುಲಾವ್, ರೋಟಿ ಸೇರಿ ಹಲವಾರು ಬಗೆಯ ಐಟಂಗಳಿತ್ತು. ಇದರಲ್ಲಿ ಭಾರತೀಯ ಹಲವಾರು ಭಕ್ಷ್ಯಗಳಿತ್ತು. ಸಿಹಿತಿಂಡಿಗಳ ವಿಷಯಕ್ಕೆ ಬಂದರೆ, ಬಾದಮ್ ಕಾ ಹಲ್ವಾ, ಕೇಸರ್-ಪಿಸ್ತಾ ಕುಲ್ಫಿ, ತಾಜಾ ಹಣ್ಣುಗಳು ಮೆನುವಿನಲ್ಲಿತ್ತು. ಈ ಎಲ್ಲವನ್ನೂ ಮೀರಿದ ಒಂದು ಐಟಂ ಅಂದ್ರೆ ಅದೇ ಗುಸ್ಸಿ ಡೂನ್ ಚೆಟಿನ್.