ಅಮೆರಿಕ ಅಧ್ಯಕ್ಷರಿಗೆ ಮಿಡ್‌ಏರ್ ಸ್ಕೇರ್​!...ಟ್ರಂಪ್ ಹೆಲಿಕಾಪ್ಟರ್ - ವಿಮಾನ ಮುಖಾಮುಖಿ; ತನಿಖೆಗೆ ಆದೇಶ | Donald Trump

Donald Trump | ಅಮೆರಿಕ ಅಧ್ಯಕ್ಷರಿಗೆ ಮಿಡ್‌ಏರ್ ಸ್ಕೇರ್​!
Donald Trump | ಅಮೆರಿಕ ಅಧ್ಯಕ್ಷರಿಗೆ ಮಿಡ್‌ಏರ್ ಸ್ಕೇರ್​!
Published on

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ಮರೀನ್ ಒನ್ ಹೆಲಿಕಾಪ್ಟರ್, ವಾಷಿಂಗ್ಟನ್‌ನಲ್ಲಿ ಪ್ರಯಾಣಿಕರ ವಿಮಾನವೊಂದರ ತೀರಾ ಸಮೀಪಕ್ಕೆ ಬಂದಿದ್ದ ಕಾರ್ಯಾಚರಣೆಯ ಲೋಪದ ಕುರಿತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ತನಿಖೆ ಆರಂಭಿಸಿದೆ ಎಂದು ಅಮೆರಿಕದ ವಿವಿಧ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

ಮಂಗಳವಾರ ಮಧ್ಯಾಹ್ನ ಟ್ರಂಪ್ ಪ್ರಯಾಣಿಸುತ್ತಿದ್ದ ಮರೀನ್ ಒನ್ ಹೆಲಿಕಾಪ್ಟರ್ ಮತ್ತು ವಿಳಂಬವಾಗಿ ಹೊರಟಿದ್ದ ಪ್ರಯಾಣಿಕರ ವಿಮಾನ ಒಂದೇ ಸಮಯದಲ್ಲಿ ಗಾಳಿಯಲ್ಲಿದ್ದವು. ಈ ವೇಳೆ ಎರಡೂ ವಿಮಾನಗಳ ನಡುವೆ ಒಂದು ಮೈಲಿಗಿಂತಲೂ ಕಡಿಮೆ ಅಂತರವಿತ್ತು ಎನ್ನಲಾಗಿದೆ. ಆದರೆ, ಎರಡೂ ಒಂದಕ್ಕೊಂದು ಡಿಕ್ಕಿಯಾಗುವ ಅಪಾಯವಿರಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಧ್ಯಕ್ಷ ಟ್ರಂಪ್ ಸುರಕ್ಷತೆಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಶ್ವೇತಭವನದ ವಕ್ತಾರ ಕುಶ್ ದೇಸಾಯಿ ತಿಳಿಸಿದ್ದಾರೆ. ಮರೀನ್ ಒನ್ ಹೆಲಿಕಾಪ್ಟರ್‌ಗಳನ್ನು ವಿಶ್ವದ ಅತ್ಯುತ್ತಮ ವೈಮಾನಿಕರು ಚಲಾಯಿಸುತ್ತಾರೆ ಮತ್ತು ಯಾವುದೇ ಹಂತದಲ್ಲೂ ಅಧ್ಯಕ್ಷರ ಜೀವಕ್ಕೆ ಅಪಾಯವಿರಲಿಲ್ಲ ಎಂದು ಅವರು ಎಎಫ್‌ಪಿಗೆ ತಿಳಿಸಿದ್ದಾರೆ.
ಈ ಘಟನೆ ಕುರಿತು ಅಮೆರಿಕ ಅಧಿಕಾರಿಗಳು ತನಿಖೆ ಶುರು ಮಾಡಿದ್ದರೂ, ರೇಗನ್ ವಾಷಿಂಗ್ಟನ್ ನ್ಯಾಷನಲ್ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲರ್ ವಿರುದ್ಧ ಯಾವುದೇ ಕ್ರಮ ತಗೆದುಕೊಂಡಿಲ್ಲ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಎರಡೂ ವಿಮಾನಗಳು ತೀರಾ ಹತ್ತಿರ ಬಂದಾಗ ಏರ್ ಟ್ರಾಫಿಕ್ ಕಂಟ್ರೋಲರ್ ಎರಡು ವಿಮಾನಗಳ ಪೈಲಟ್‌ಗಳ ಜೊತೆ ನೇರ ಸಂಪರ್ಕದಲ್ಲಿದ್ದರು ಎಂದು ಎಫ್‌ಎಎ ತಿಳಿಸಿದೆ. ಅಧ್ಯಕ್ಷ ಟ್ರಂಪ್ ಅವರಿಗೆ ಯಾವುದೇ ಅಪಾಯ ಇರಲಿಲ್ಲ, ಘಟನೆಯ ಪರಿಶೀಲನೆ ನಡೆಸುತ್ತಿದ್ದು, ತನಿಖೆಯ ವರದಿ ಬಂದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆ ಹೇಳಿದೆ.

ನಿಯಮಗಳು ಹೇಳೋದೇನು...?

2025 ರ

ಜನವರಿಯಲ್ಲಿ

ಸೇನಾ ಹೆಲಿಕಾಪ್ಟರ್ ಹಾಗೂ ವಿಮಾನ ಡಿಕ್ಕಿಯಾಗಿ 67 ಜನರು ಮೃತಪಟ್ಟಿದ್ದರು. ಆ ಭೀಕರ ಅಪಘಾತದ ನಂತರ ವಾಷಿಂಗ್ಟನ್ ವಿಮಾನ ನಿಲ್ದಾಣದ ಸುತ್ತ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net