ಭಯೋತ್ಪಾದಕರನ್ನು ಸದೆಬಡಿಯುವಲ್ಲಿ ಯಶಸ್ವಿಯಾದರೂ, ಪಾಕಿಸ್ತಾನಿ ಸೇನೆಗೆ ಈ ಕಾರ್ಯಾಚರಣೆ ದುಬಾರಿಯಾಗಿ ಪರಿಣಮಿಸಿದೆ. 10 ಭದ್ರತಾ ಸಿಬ್ಬಂದಿಗಳು ಹೋರಾಡುತ್ತಲೇ ವೀರಮರಣ ಅಪ್ಪಿದ್ದಾರೆ. ಇದರಲ್ಲಿ ಅಧಿಕಾರಿ ಮಟ್ಟದ ಸಿಬ್ಬಂದಿಗಳೂ ಸೇರಿದ್ದಾರೆ ಎಂದು ವರದಿಯಾಗಿದೆ. ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ಕೆಲವು ಪ್ರದೇಶಗಳಲ್ಲಿ ಭದ್ರತಾ ಪಡೆಗಳಿಗೆ ಸಹಾಯ ಮಾಡಲು ಹೆಲಿಕಾಪ್ಟರ್‌ಗಳನ್ನು ಬಳಸಬೇಕಾಯಿತು.