Mass Shooting: 8 ಮಕ್ಕಳ ಹತ್ಯೆ ಮಾಡಿದ ತಂದೆ, ಹತ್ಯಾಕಾಂಡದ ಹಿಂದಿರುವ ನಿಗೂಢ ಕಾರಣ ಏನು?

Mass Shooting
Mass Shooting
Published on
ಅಮೆರಿಕ: ಲೂಯಿಸಿಯಾನಾ ರಾಜ್ಯದ ಶ್ರೆವ್‌ಪೋರ್ಟ್ ನಗರದಲ್ಲಿ ಭಾನುವಾರ ಬೆಳಗ್ಗೆ ನಡೆದ ಭೀಕರ ಗುಂಡಿನ(Mass Shooting) ದಾಳಿ ದೇಶವನ್ನು ನಡುಗಿಸಿದೆ. ಈ ದಾಳಿಯಲ್ಲಿ ಕನಿಷ್ಠ 8 ಮಕ್ಕಳು ಸಾವನ್ನಪ್ಪಿದ್ದು, ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, ಈ ದಾಳಿ “ಕುಟುಂಬ ಕಲಹ” (domestic violence) ಹಿನ್ನೆಲೆಯಲ್ಲಿಯೇ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯಂತೆ, ಆರೋಪಿಯನ್ನು 31 ವರ್ಷದ ಶಮಾರ್ ಎಲ್ಕಿನ್ಸ್ ಎಂದು ಗುರುತಿಸಲಾಗಿದೆ. ಆತ ತನ್ನದೇ 7 ಮಕ್ಕಳನ್ನು ಸೇರಿ ಒಟ್ಟು 8 ಮಕ್ಕಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಮೃತರಾದ ಮಕ್ಕಳ ವಯಸ್ಸು 1ರಿಂದ 14 ವರ್ಷಗಳ ನಡುವೆಯಿದ್ದು, ಈ ಘಟನೆ ಅಮೆರಿಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ದಾರುಣ ಗುಂಡಿನ ದಾಳಿಗಳಲ್ಲಿ ಒಂದಾಗಿದೆ.
ಘಟನೆ ಶ್ರೆವ್‌ಪೋರ್ಟ್‌ನ Cedar Grove ಪ್ರದೇಶದಲ್ಲಿ ಸಂಭವಿಸಿದ್ದು, ಒಂದೇ ಸ್ಥಳದಲ್ಲಿಲ್ಲದೆ ಹಲವು ಮನೆಗಳಲ್ಲಿ ಗುಂಡಿನ ದಾಳಿ ನಡೆದಿರುವುದು ಪ್ರಕರಣದ ಭೀಕರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಆರೋಪಿ ಸಾವು!

ಪ್ರಾಥಮಿಕ ವರದಿಗಳ ಪ್ರಕಾರ, ದಾಳಿ ಕುಟುಂಬದ ಒಳಗಿನ ಕಲಹದಿಂದ ಆರಂಭವಾಗಿದೆ. ಆರೋಪಿಯು ಮೊದಲು ಮಹಿಳೆಯ ಮೇಲೆ ಗುಂಡು ಹಾರಿಸಿ ನಂತರ ಮಕ್ಕಳ ಮೇಲೆ ದಾಳಿ ನಡೆಸಿದ್ದಾನೆ. ಈ ವೇಳೆ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಆತಂಕಕಾರಿ ಎಂದು ತಿಳಿದುಬಂದಿದೆ.
ಘಟನೆಯ ನಂತರ ಆರೋಪಿಯು ಸ್ಥಳದಿಂದ ಪರಾರಿಯಾಗಲು ಕಾರ್‌ಜ್ಯಾಕ್ ಮಾಡಿ ಓಡಿಹೋಗಿದ್ದಾನೆ. ಬಳಿಕ ಪೊಲೀಸ್‌ರು ಬೆನ್ನಟ್ಟಿದಾಗ ನಡೆದ ಗುಂಡಿನ ಚಕಮಕಿಯಲ್ಲಿ ಆರೋಪಿಯೇ ಸಾವನ್ನಪ್ಪಿದ್ದಾನೆ.
ಪೊಲೀಸ್ ಅಧಿಕಾರಿಗಳು ಈ ದಾಳಿಯನ್ನು “ಫ್ಯಾಮಿಲಿ ಅನೈಲೇಷನ್” (family annihilation) ಎಂದು ವಿವರಿಸಿದ್ದು, ಕುಟುಂಬ ಸದಸ್ಯರ ಮೇಲೆ ನಡೆದ ಅತ್ಯಂತ ಕ್ರೂರ ದಾಳಿ ಎಂದು ಹೇಳಿದ್ದಾರೆ.
ಈ ಘಟನೆ ಅಮೆರಿಕಾದಲ್ಲಿ ಗನ್ ಹಿಂಸಾಚಾರದ ಸಮಸ್ಯೆಯನ್ನು ಮತ್ತೆ ಎತ್ತಿಹಿಡಿದಿದೆ. 2026ರಲ್ಲಿ ಮಾತ್ರವೇ 100ಕ್ಕೂ ಹೆಚ್ಚು ಗುಂಡಿನ ದಾಳಿಗಳು ದಾಖಲಾಗಿರುವುದಾಗಿ ವರದಿಗಳು ಸೂಚಿಸುತ್ತವೆ.
ಈ ಘಟನೆಯಿಂದ ಅಮೆರಿಕಾದಲ್ಲಿ ಗನ್ ನಿಯಂತ್ರಣ (gun control) ಕುರಿತ ಚರ್ಚೆಗಳು ಮತ್ತೆ ತೀವ್ರಗೊಂಡಿವೆ. ಹಲವು ನಾಯಕರು ಕಠಿಣ ಕಾನೂನು ಕ್ರಮಗಳ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.
ಇದರ ನಡುವೆ, ತನಿಖೆ ಮುಂದುವರಿದಿದ್ದು, ಆರೋಪಿಯ ವೈಯಕ್ತಿಕ ಹಿನ್ನೆಲೆ, ಕುಟುಂಬ ಸಂಬಂಧಗಳು ಮತ್ತು ದಾಳಿಗೆ ಕಾರಣವಾದ ನಿಖರ ಕಾರಣಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net