ಲಾಸ್ ಏಂಜಲೀಸ್​ನಲ್ಲಿ ಭಾರೀ ಭೂಕಂಪನ; ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲು: ಕಟ್ಟಡಗಳಿಂದ ಓಡಿ ಬಂದ ಜನರು | Earthquake

ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಶನಿವಾರ(ನ. 28) ಬೆಳಿಗ್ಗೆ ಭಾರೀ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲಾಗಿದೆ. ಲಾಸ್ ಏಂಜಲೀಸ್ ಪ್ರದೇಶದಲ್ಲಿ ಜನ ಭಯಬೀತರಾಗಿ ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ. ಮತ್ತು ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಬಿಸಿ ತಟ್ಟಿದೆ.
ಲಾಸ್ ಏಂಜಲೀಸ್​ನಲ್ಲಿ ಭಾರೀ ಭೂಕಂಪನ; ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲು: ಕಟ್ಟಡಗಳಿಂದ ಓಡಿ ಬಂದ ಜನರು | Earthquake
Published on: 

ವಾಷಿಂಗ್ಟನ್: ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಶನಿವಾರ(ನ. 28) ಬೆಳಿಗ್ಗೆ ಭಾರೀ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲಾಗಿದೆ. ಲಾಸ್ ಏಂಜಲೀಸ್ ಪ್ರದೇಶದಲ್ಲಿ ಜನ ಭಯಬೀತರಾಗಿ ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ. ಮತ್ತು ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಬಿಸಿ ತಟ್ಟಿದೆ.

ಈ ಭೂಕಂಪನದ ಬಳಿಕ ಹಲವು ಬಾರಿ ಸಣ್ಣ ಕಂಪನಗಳು ಸಂಭವಿಸಿವೆ ಎನ್ನಲಾಗಿದೆ. ಆದಾಗ್ಯೂ, ಯಾರಿಗೂ ಗಾಯಗಳಾದ ಬಗ್ಗೆ ಅಥವಾ ಕಟ್ಟಡಗಳಿಗೆ ದೊಡ್ಡ ಪ್ರಮಾಣದ ಹಾನಿಯಾದ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿಗಳು ಬಂದಿಲ್ಲ. ಲಾಸ್ ಏಂಜಲೀಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (LAX) ಟರ್ಮಿನಲ್ ಒಂದರ ಛಾವಣಿಗೆ ಹೊಡೆತ ಬಿದ್ದಿದೆ.

ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ, ಸ್ಥಳೀಯ ಕಾಲಮಾನ ಬೆಳಿಗ್ಗೆ 9.30ರ ಸುಮಾರಿಗೆ ಈ ಭೂಕಂಪ ಸಂಭವಿಸಿದೆ. ಮ್ಯಾನ್‌ಹ್ಯಾಟನ್ ಬೀಚ್‌ನಿಂದ ಪಶ್ಚಿಮ-ನೈಋತ್ಯಕ್ಕೆ ಸುಮಾರು 3.7 ಮೈಲು ದೂರದಲ್ಲಿ, ಸುಮಾರು 7.6 ಮೈಲು ಆಳದಲ್ಲಿ ಈ ಕಂಪನ ಕೇಂದ್ರ ಬಿಂದು ಇದೆ ಎಂದು ತಿಳಿಸಿದೆ.

Also Read
ದೇವಸ್ಥಾನಕ್ಕೆ ತೆರಳುತ್ತಿದ್ದವರ ಮೇಲೆ ನಸುಕಿನ ಜಾವ ಜವರಾಯನ ಅಟ್ಟಹಾಸ; ನಾಲ್ವರು ಮಕ್ಕಳು ಸೇರಿದಂತೆ 13 ಮಂದಿ ಸಾವು | Accident
ಲಾಸ್ ಏಂಜಲೀಸ್​ನಲ್ಲಿ ಭಾರೀ ಭೂಕಂಪನ; ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲು: ಕಟ್ಟಡಗಳಿಂದ ಓಡಿ ಬಂದ ಜನರು | Earthquake

ಸಿಎನ್​ಎನ್​ ವರದಿ ಪ್ರಕಾರ, ಮೊದಲ ಭೂಕಂಪ ಸಂಭವಿಸಿದ ನಂತರದ 45 ನಿಮಿಷಗಳಲ್ಲಿ 2.5 ರಿಂದ 3.7 ತೀವ್ರತೆಯ ಕನಿಷ್ಠ ನಾಲ್ಕು ನಂತರದ ಕಂಪನಗಳು (aftershocks) ದಾಖಲಾಗಿವೆ. 4.0 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ನಂತರದ ಕಂಪನ ಸಂಭವಿಸಲು ಶೇಕಡಾ 30 ರಷ್ಟು ಸಾಧ್ಯತೆಯಿದೆ ಎಂದು ಆ ಸಂಸ್ಥೆ ಅಂದಾಜಿಸಿದೆ.

ಸಾಂಟಾ ಮೋನಿಕಾ ಮತ್ತು ಪಸಾಡೆನಾ ಸೇರಿದಂತೆ ಲಾಸ್ ಏಂಜಲೀಸ್ ಪ್ರದೇಶದ ಹಲವು ಭಾಗಗಳಲ್ಲಿ ಭೂಕಂಪದ ಕಂಪನಗಳು ಅನುಭವಕ್ಕೆ ಬಂದಿವೆ. ಹಲವಾರು ಸ್ಥಳಗಳಲ್ಲಿ ಸಾಮಾನ್ಯ ಚಟುವಟಿಕೆಗೆ ಅಡ್ಡಿಯಾಗುವಷ್ಟು ಪ್ರಬಲವಾಗಿ ಕಂಪನ ಸಂಭವಿಸಿದೆ. ಸಾಂತಾ ಮೋನಿಕಾದಲ್ಲಿ ಕಟ್ಟಡಗಳು ಗಡಗಡ ನಡುಗುತ್ತಿದ್ದವು ಮತ್ತು ಮರಗಳು ತೂಗಾಡುತ್ತಿದ್ದವು, ಜನರು ಅಂಗಡಿಗಳಿಂದ ಹೊರಗೆ ಓಡಿಹೋದರು ಎಂದು ವರದಿ ಮಾಡಿದೆ.

ವಿಮಾನ ಸಂಚಾರಕ್ಕೂ ಅಡ್ಡಿ

5.0 ತೀವ್ರತೆಯ ಭೂಕಂಪ ಸಂಭವಿಸಿದ ಬಳಿಕ ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನವೊಂದು ತನ್ನ ಲ್ಯಾಂಡಿಂಗ್ ಅನ್ನು ತಕ್ಷಣವೇ ರದ್ದುಗೊಳಿಸಿದೆ. ಸುತ್ತಮುತ್ತ ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ, ವಿಮಾನವನ್ನು ಗಾಳಿಯಲ್ಲೇ ಹಾರಾಟ ಮುಂದುವರಿಸುವಂತೆ ಏರ್ ಟ್ರಾಫಿಕ್ ಕಂಟ್ರೋಲ್ (ATC) ಸಿಬ್ಬಂದಿ ಸೂಚಿಸಿದ ಬಳಿಕ ಪೈಲಟ್‌ಗಳು ಗಾಳಿಯಲ್ಲೇ ಹಾರಾಟ ನಡೆಸಿದ್ದಾರೆ.

ಘಟನೆಯಲ್ಲಿ ಯಾವುದೇ ಪ್ರಮುಖ ಕಟ್ಟಡಗಳಿಗೆ ಹಾನಿಯಾದ ಅಥವಾ ಯಾರಿಗೂ ಗಂಭೀರ ಗಾಯಗಳಾದ ಬಗ್ಗೆ ತಕ್ಷಣದ ವರದಿಗಳಿಲ್ಲ. ವಿಮಾನವು ರನ್‌ವೇ ಸಮೀಪಿಸುತ್ತಿದ್ದಾಗ ನಿಯಂತ್ರಣ ಗೋಪುರ ಮತ್ತು ವಿಮಾನದ ಸಿಬ್ಬಂದಿ ನಡುವೆ ನಡೆದ ಸಂಭಾಷಣೆಯು ವಿಮಾನ ನಿಲ್ದಾಣದ ಲೈವ್‌ಸ್ಟ್ರೀಮ್ ವಿಡಿಯೋದಲ್ಲಿ ಸೆರೆಯಾಗಿದೆ (ಏಜೆನ್ಸೀಸ್).