ಇಲ್ಲಿನ ಪ್ರಿಸ್ಕೂಲ್ನಲ್ಲಿ ಎಂಟು ಮಕ್ಕಳಿಗೆ ಕೇವಲ ಇಬ್ಬರು ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳಿಗೆ ಹಾಡು, ಡಾನ್ಸ್, ಯೋಗ, ಸೃಜನಶೀಲ ಚಟುವಟಿಕೆಗಳು ಸೇರಿ ಆಟೋಟಗಳು ಮತ್ತು ವಯಸ್ಸಿಗೆ ಸೂಕ್ತವಾದ ಕಲಿಕಾ ಕಾರ್ಯಕ್ರಮಗಳನ್ನು ನೀಡಲಾಗುತ್ತದೆ. ಆದರೆ, ಇಷ್ಟನ್ನೆಲ್ಲ ಕೊಡುವ ಶಾಲೆಯ ವರ್ಷದ ಫೀಜ್ ಎಷ್ಟು ಎಂದು ಕೇಳಿದರೆ, ಅವರೇಳುವುದು 9 ಲಕ್ಷ ರೂ. ಎಂದು. ಇದು ನಿಜಕ್ಕೂ ನನಗೆ ಆಶ್ಚರ್ಯ ಮೂಡಿಸಿತು. ವಾರಕ್ಕೆ ಎರಡು ದಿನ ಪ್ರಿಸ್ಕೂಲ್ಗೆ ಕಳುಹಿಸಿದರೆ, ವರ್ಷಕ್ಕೆ ಸುಮಾರು 4 ಲಕ್ಷ ರೂ. ವೆಚ್ಚ. ಅದೇ ವಾರಕ್ಕೆ ಐದು ದಿನ ಕಳುಹಿಸಿದರೆ, 9ರಿಂದ 10 ಲಕ್ಷ ರೂ. ಪಾವತಿ ಮಾಡಬೇಕು ಎಂದು ಹುಬ್ಬೇರಿಸುವ ಸಂಗತಿ ಹಂಚಿಕೊಂಡಿದ್ದಾರೆ.